ಬಾಲಿವುಡ್ ಹ್ಯಾಪಿ ಫ್ಯಾಮಿಲಿ ಎಂದೇ ಹೇಳಬಹುದಾದಷ್ಟರ ಮಟ್ಟಿಗೆ ಕುಟುಂಬದ ಮೌಲ್ಯತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ಈ ದಂಪತಿ.

 

ಬಾಲಿವುಡ್ ಸೆಲೆಬ್ರಿಟಿಗಳ ಏರ್ ಪೋರ್ಟ್ ಲುಕ್ ವೈರಲ್ ಆಗುವುದು ಸರ್ವೇ ಸಾಮಾನ್ಯ. ಆದರೆ ಈಗ ಕ್ಯಾಮೆರಾ ಸ್ವಲ್ಪ ಅವರ ಮಕ್ಕಳ ಕಡೆ ಮುಖ ಮಾಡಿದೆ. ಕೆಲದಿನಗಳಿಂದ ಕಾಜೋಲ್ ಪುತ್ರಿ ನೈಸಾ ಧರಿಸುವ ಡ್ರೆಸ್ ಬಗ್ಗೆ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದನ್ನು ಗಮನಿಸಿದ ತಂದೆ ಅಜಯ್ ಟ್ರೋಲಿಗರ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಅಜಯ್ ದೇವಗನ್ ಅಭಿನಯದ ‘ಟೋಟಲ್ ಧಮಾಲ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿರುವ ದೇವಗನ್ ಮುಂಬೈನಲ್ಲಿ ಮಾಧ್ಯಮಗಳ ಮುಂದೆ ರಿಯಾಕ್ಟ್ ಮಾಡಿದ್ದಾರೆ. ‘ನನ್ನನ್ನು ನೀವು ಜಡ್ಜ್ ಮಾಡಬಹುದು ಆದರೆ ನನ್ನ ಮಕ್ಕಳನ್ನಲ್ಲ. ಕಾಜೋಲ್ ಹಾಗೂ ನಾನು ನಟರಾದ ಕಾರಣ ಇದೆಲ್ಲಾ ಆಗುತ್ತಿದೆ. ಆದ್ದರಿಂದ ಅವರು ಕ್ಯಾಮೆರ ಮುಂದೆ ಕಾಣಿಸಿಕೊಂಡು ಇದನ್ನೆಲ್ಲಾ ಎದುರಿಸಬೇಕಾಗಿದೆ. ಒಬ್ಬರ ಉಡುಗೆ-ನಡಿಗೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರಿಗೆ ಬೇಸರವಾಗುತ್ತದೆ. ಅದೇ ತರ ನನ್ನ ಮಕ್ಕಳು ಕೂಡಾ’ ಎಂದು ಮಾತನಾಡಿದ್ದಾರೆ.

ಇಂತಹ ಟ್ರೋಲ್ ಗಳಿಗೆ ಮೊದಲಿಗೆ ತುಂಬಾ ಮನನೊಂದುಕೊಳ್ಳುತ್ತಿದ್ದ ನೈಸಾ ಈಗ ಅಂತಹ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಅವಳ ಫೋಟೋ ಎಡಿಟ್ ಮಾಡಿ ಅಪ್ಲೋಡ್ ಮಾಡುವ ರೀತಿಗೂ ಸಹ ರಿಯಾಕ್ಟ್ ಮಾಡುವುದನ್ನು ನಿಲ್ಲಿಸಿದ್ದಾಳೆ ಎಂದು ಅಜಯ್ ದೇವಗನ್ ಹೇಳಿದ್ದಾರೆ.