Janhvi Kapoor ಫ್ರಾನ್ಸ್ ಭೇಟಿಯ ಫೋಟೋಗಳು ವೈರಲ್
ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಪ್ರಸ್ತುತ ಫ್ರಾನ್ಸ್‌ನಲ್ಲಿದ್ದಾರೆ ಮತ್ತು ಅದನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ನಟಿ ಅವರು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಚರ್ಚ್‌ನ ಹೊರಗೆ ಧ್ಯಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಚರ್ಚ್ ಸೇರಿದಂತೆ ಹಲವೆಡೆ ತೆಗೆದ ಸೆಲ್ಫಿಗಳನ್ನು ಸಹ ಹಂಚಿಕೊಂಡಿದ್ದಾರೆ. ಮದರ್ ಮೇರಿ, ಜೀಸಸ್, ಚರ್ಚ್, ಫ್ಲವರ್ ಸೇರಿದಂತೆ ಹಲವು ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.

ಜಾನ್ವಿ ತನ್ನ ಫ್ರಾನ್ಸ್ ಪ್ರವಾಸದ ಚಿತ್ರಗಳನ್ನು Instagram ನಲ್ಲಿ ಅಪ್‌ಲೋಡ್ ಮಾಡಿದ್ದು, 'vive la france (Long Live France)' ಎಂದು ಶೀರ್ಷಿಕೆ ನೀಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಂಶುಲಾ ಕಪೂರ್, 'ಫೋಮೋ' ಎಂದು ಹೇಳಿದ್ದಾರೆ.
ಜಾನ್ವಿ ಕಪೂರ್ ಅವರು ಚರ್ಚ್‌ನ ಹೊರಗೆ ಧ್ಯಾನ ಭಂಗಿಯಲ್ಲಿ ಕುಳಿತಿರುವ ಫೋಟೋವನ್ನು ತೋರಿಸಿ, ಚಲನಚಿತ್ರ ನಿರ್ಮಾಪಕ ಶರಣ್ ಶರ್ಮಾ 'ದಯವಿಟ್ಟು ಫೋಟೋ 5 ವಿವರಿಸಿ, ಬೆಸ್ಟ್' ಎಂದು ಕಾಮೆಂಟ್ ಮಾಡಿದ್ದಾರೆ
'ಅವರು ತಮ್ಮ ಪ್ರೀತಿಪಾತ್ರರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ' ಎಂದು ಅಭಿಮಾನಿಯೊಬ್ಬರು ಆಕೆಯ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 'ಬಹುಶಃ ಮಣಿರತ್ನಂ ಸಂಗೀತವನ್ನು ಕೇಳುತ್ತಿದ್ದರು ಮತ್ತು ಯೋಗ ಮಾಡುತ್ತಿದ್ದಾರೆ' ಎಂದು ಇನ್ನೊಬ್ಬರು ಹೇಳಿದರು.
ಎರಡು ದಿನಗಳ ಹಿಂದೆ, ಜಾನ್ವಿ ಶಾಪಿಂಗ್ ಸೆಂಟರ್‌ನಲ್ಲಿ ನಾಚ್ ಪಂಜಾಬನ್ ಹುಕ್‌ಸ್ಟೆಪ್ ಮಾಡುವ ಫನ್ನಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋಗೆ ಸೂಪರ್ ಮಾರ್ಕೆಟ್‌ನಲ್ಲಿ ಬವಾಲ್ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಕಳೆದ ವಾರ ಜಾನ್ವಿ ತನ್ನ ಫ್ರಾನ್ಸ್ ಪ್ರವಾಸದ ಮೊದಲ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಪರಿಸರ ಮತ್ತು ಫ್ರೆಂಚ್ ಸಂಸ್ಕೃತಿಯ ಕೆಲವು ಫೋಟೋಗಳು ಸೇರಿದ್ದವು.
ಸದ್ಯ ಜಾನ್ವಿ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬವಾಲ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಇದರಲ್ಲಿ ಅವರು ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಈಗಾಗಲೇ ಗುಡ್ ಲಕ್ ಜೆರ್ರಿ ಮತ್ತು ಮಿಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಅವರು ಕೊನೆಯದಾಗಿ 2021 ರ ರೂಹಿ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ಕಾಣಿಸಿಕೊಂಡರು. ರಾಜ್‌ಕುಮಾರ್ ಜೊತೆಗಿನ ಅವರ ಎರಡನೇ ಚಿತ್ರ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಚಿತ್ರವನ್ನು ಶರಣ್ ಶರ್ಮಾ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಅವರು ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.