- Home
- Entertainment
- Cine World
- ಕಟ್-ಔಟ್ ಡ್ರೆಸ್‌ನಲ್ಲಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಜಾನ್ವಿ ಕಪೂರ್ ಹಾಟ್ ಲುಕ್!
ಕಟ್-ಔಟ್ ಡ್ರೆಸ್‌ನಲ್ಲಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಜಾನ್ವಿ ಕಪೂರ್ ಹಾಟ್ ಲುಕ್!
ಜಾನ್ವಿ ಕಪೂರ್ (Janhvi Kapoor) ತಮ್ಮ ಮುಂಬರುವ ಚಿತ್ರ ಮಿಲೀ ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರ ಈ ಚಿತ್ರ ನವೆಂಬರ್ 4 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದ ಬಿಡುಗಡೆಗೆ ಮುಂಚಿತವಾಗಿ, ಜಾನ್ವಿ ಮನೋಕ್ರೊಮ್ ಕಟ್-ಔಟ್ ಡ್ರೆಸ್‌ನ ಹೊಸ ಫೋಟೋಶೂಟ್ ಫೋಠೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ವಿಡಿಯೋ ಮತ್ತು ಹಾಟ್ ಫೋಟೋಗಳು ಸಖತ್ ವೈರಲ್ ಆಗಿವೆ.

ಬಾಲಿವುಡ್ ಯಂಗ್ ದಿವಾ ಜಾನ್ವಿ ಕಪೂರ್ ಈ ಬಾರಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಅವರು ಮನೋಕ್ರೊಮ್ ಕಟ್-ಔಟ್ ಡ್ರೆಸ್‌ನಲ್ಲಿ ಸಖತ್ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ
ಹಿಂದಿ ಚಿತ್ರರಂಗದ ಕೆಲವು ಹಾಟೆಸ್ಟ್ ನಟಿಯರಲ್ಲಿ ಜಾನ್ವಿ ಕಪೂರ್ ಒಬ್ಬರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬೋಲ್ಡ್ ಲುಕ್‌ನಲ್ಲಿ ಜಾನ್ವಿ ಕಪೂರ್ ಯಾವುದೇ ಟಾಪ್ ನಟಿಯರೊಂದಿಗೆ ಸ್ಪರ್ಧಿಸಬಹುದು.
ಇತ್ತೀಚಿನ ಫೋಟೋಶೂಟ್‌ನಲ್ಲಿ ಅವರು ಮಾದಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ 'ಮಿಲಿ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಅವರು ತಮ್ಮಅನುಯಾಯಿಗಳಿಗಾಗಿ ಹೊಸ ಲುಕ್ ಅನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.
ಫೋಟೋ ಶೂಟ್‌ಗಾಗಿ ನಟಿ ಸ್ಟನ್ನಿಂಗ್ ಏಕವರ್ಣದ ಕಟ್-ಔಟ್ ಬಾಡಿಕಾನ್ ಉಡುಪನ್ನು ಆರಿಸಿಕೊಂಡಿದ್ದಾರೆ,ಜಾಹ್ನವಿ ಕಪೂರ್ ಧರಿಸಿದ್ದ ಏಕವರ್ಣದ ಕಟ್-ಔಟ್ ಬಾಡಿಕಾನ್ ಡ್ರೆಸ್ ಬೆಲೆ ಕೇವಲ 6,990 ರೂ ಮಾತ್ರವಂತೆ.
ಜಾನ್ವಿ ಕಪೂರ್ ಧರಿಸಿರುವ ಬಾಡಿಕಾನ್ ಡ್ರೆಸ್ ಫ್ರಿಸ್ಕಿ ಬ್ರಾಂಡ್‌ನದು. ಈ ಉದ್ದನೆಯ ತೋಳಿಲ್ಲದ ಮಿಡಿ ಉಡುಗೆಯು ಸ್ಕೂಪ್ಡ್ ನೆಕ್‌ಲೈನ್ ಹೊಂದಿದೆ. ಕಪ್ಪು ಬಣ್ಣದ ಈ ಡ್ರೆಸ್ ಮೇಲೆ ಬಿಳಿ ಬಣ್ಣದ ಪಟ್ಟಿ ಇದೆ.
ಜಾನ್ವಿ ಕಪೂರ್ ಲೈಟ್ ಮೇಕಪ್ ಮಾಡಿದ್ದಾರೆ. ಬೋಲ್ಡ್ ಮಸ್ಕರಾ ಮತ್ತು ಐಲೈನರ್‌ನ ಜೊತೆ ನ್ಯೂಡ್ ಲಿಪ್‌ಸ್ಟಿಕ್ ಬಳಸಿರುವ ಜಾನ್ವಿ ತನ್ನ ಲುಕ್‌ಗೆ ನೈಸರ್ಗಿಕವಾಗಿ ಹೊಳಪು ಕೊಟ್ಟಿದ್ದಾರೆ. ಹಾಗೇ ನಟಿ ಯಾವುದೇ ಆಕ್ಸೆಸರಿಗಳನ್ನು ಧರಿಸಿಲ್ಲ
ಜಾನ್ವಿ ಕಪೂರ್ ಅವರ ತಂದೆಯ ನಿರ್ಮಾಣ ಸಂಸ್ಥೆಯಾದ 'ಬೋನಿ ಕಪೂರ್ ಪ್ರೊಡಕ್ಷನ್ಸ್‌ನ'ಮಿಲಿ' ಚಿತ್ರವು ನವೆಂಬರ್ 4 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ. ಈ ಚಿತ್ರವನ್ನು ಮಾತುಕುಟ್ಟಿ ಕ್ಸೇವಿಯರ್ನಿರ್ದೇಶಿಸಿದ್ದಾರೆ ಮತ್ತು ಇದು ಮಲಯಾಳಂನ 'ಹೆಲೆನ್' ಚಿತ್ರದ ರಿಮೇಕ್ ಆಗಿದೆ. 'ಮಿಲಿ' ಚಿತ್ರದಲ್ಲಿ ಮನೋಜ್ ಪಹ್ವಾ ಮತ್ತು ಸನ್ನಿ ಕೌಶಲ್ ಕೂಡ ನಟಿಸಿದ್ದಾರೆ.
'ಮಿಲಿ' ಹೊರತುಪಡಿಸಿ, ಜಾನ್ವಿ ಕಪೂರ್ ವರುಣ್ ಧವನ್ ಜೊತೆ 'ಬಾವಲ್' ಮತ್ತು ರಾಜ್‌ಕುಮಾರ್ ರಾವ್ ಜೊತೆ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಎರಡು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಈ ಎರಡೂ ಸಿನಿಮಾಗಳಿಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.