ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಜಾನ್ವಿ ಹಾಟ್ನೆಸ್; 'ಮಿಲಿ' ಫೋಟೋ ವೈರಲ್
ಜಾನ್ವಿ ಕಪೂರ್ ಸದ್ಯ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ನಡುವೆ ಜಾನ್ವಿ ಸಿಕ್ಕಾಪಟ್ಟೆ ಹಾಟ್ ಪೋಟೋ ಶೇರ್ ಮಾಡುತ್ತಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ದಿನದಿಂದ ದಿನಕ್ಕೆ ಹಾಟ್ ಆಗುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸುತ್ತಿದ್ದಾರೆ. ಜಾನ್ವಿ ಕಪೂರ್ ಫೋಟೋಗಳಿಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದು ಬರುತ್ತಿದೆ.
ಬಾಡಿಕಾನ್ ಬಟ್ಟೆಯಲ್ಲಿ ಮಿಂಚಿರುವ ಜಾನ್ವಿ ಫೋಟೋಗಲು ವೈರಲ್ ಆಗಿವೆ. ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ನೊರಾ ಫತೇಹಿ, ಕರೀನಾ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್ಸ್ ಸ್ಟೈಲಿಶ್ ಅಂಡ್ ಹಾಟ್ ಡ್ರೆಸ್ ಮೂಲಕ ಸದಾ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಜಾನ್ವಿ ಕೂಡ ಅದೇ ಲಿಸ್ಟ್‌ಗೆ ಸೇರಿದ್ದಾರೆ.
ಸಿಲ್ಕ್ ಸ್ಯಾಟಿನ್ ಡ್ರೆಸ್ ನಲ್ಲಿ ಮಿಂಚಿರುವ ಜಾನ್ವಿ ಫೋಟೋಗಳು ವೈರಲ್ ಆಗಿವೆ. ಜಾನ್ವಿ ಹಾಟ್ನೆಸ್‌ಗೆ ಅಭಿಮಾನಿಗಳು ಸೆಕ್ಸಿ ಗರ್ಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕರು ಹಾರ್ಟ್ ಮತ್ತು ಬೆಂಕಿ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಜಾನ್ವಿ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಮಿಲಿ ಮಲಯಾಳಂನ ಸೂಪರ್ ಹಿಟ್ ಹೆಲೆನ್ ಸಿನಿಮಾದ ರಿಮೇಕ್ ಆಗಿದೆ. 2019ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮಿಲಿ ಸಿನಿಮಾಗೆ ಬೋನಿ ಕಪೂರ್ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿಗೆ ಜಾನ್ವಿ ಅಪ್ಪನ ಸಿನಿಮಾದಲ್ಲಿ ನಟಿಸಿದ್ದಾರೆ.
ಜಾನ್ವಿ ಕಪೂರ್ ಕೊನೆಯದಾಗಿ ಗುಡ್ ಲಕ್ ಜೆರ್ರಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಜಾನ್ವಿ ಸದ್ಯ ಮಿಲಿ ಸಿನಿಮಾ ಜೊತೆಗೆ ಮಿಸ್ಟರ್ ಅಂಡ್ ಮಿಸಸ್ ಮಹಿ, ಬವಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.