MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Janhvi Kapoor Saree: ಲವೆಂಡರ್ ಕಾಂಜೀವರಂ ಸೀರೆಯಲ್ಲಿ ಜಾನ್ವಿ, ಮೆಹೆಂದಿಯಲ್ಲಿತ್ತು ಬಾಯ್‌ಫ್ರೆಂಡ್ ಹೆಸರು!

Janhvi Kapoor Saree: ಲವೆಂಡರ್ ಕಾಂಜೀವರಂ ಸೀರೆಯಲ್ಲಿ ಜಾನ್ವಿ, ಮೆಹೆಂದಿಯಲ್ಲಿತ್ತು ಬಾಯ್‌ಫ್ರೆಂಡ್ ಹೆಸರು!

ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆಯಲ್ಲಿ ಜಾನ್ವಿ ಕಪೂರ್ ಲವೆಂಡರ್ ಬಣ್ಣದ ಕಾಂಜೀವರಂ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸ್ಟೈಲಿಂಗ್, ಜ್ಯುವೆಲ್ಲರಿ ವಿಶೇಷವಾಗಿ ಮೆಹೆಂದಿ ಎಲ್ಲರ ಗಮನ ಸೆಳೆಯಿತು.

1 Min read
Author : Ravi Janekal
Published : Jul 09 2026, 01:43 PM IST
Share this Photo Gallery
  • FB
  • TW
  • Linkdin
  • Whatsapp
15
Janhvi Kapoor Stuns in Lavender Kanjeevaram Saree at Anshula Kapoor's Reception
Image Credit : instagram

Janhvi Kapoor Stuns in Lavender Kanjeevaram Saree at Anshula Kapoor's Reception

ಇತ್ತೀಚೆಗೆ ನಡೆದ ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆಯಲ್ಲಿ ಬಾಲಿವುಡ್ ಸ್ಟಾರ್ ನಟಿಯರು ಮಿಂಚಿದ್ರು. ಆದರೆ, ಎಲ್ಲರ ಕಣ್ಣು ಜಾನ್ವಿ ಕಪೂರ್ ಮೇಲಿತ್ತು. ಅವರು ಉಟ್ಟಿದ್ದ ಲವೆಂಡರ್ ರೇಷ್ಮೆ ಸೀರೆ ಮತ್ತು ಅವರ ಮಾಡರ್ನ್ ಸ್ಟೈಲ್, ಸಂಪ್ರದಾಯ ಮತ್ತು ಆಧುನಿಕತೆಯ ಅದ್ಭುತ ಮಿಶ್ರಣವಾಗಿತ್ತು. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
A Royal Kanjeevaram Saree Inspired by Tradition
Image Credit : instagram

A Royal Kanjeevaram Saree Inspired by Tradition

ಜಾನ್ವಿ ಧರಿಸಿದ್ದು ಮನೀಶ್ ಮಲ್ಹೋತ್ರಾ ವಿನ್ಯಾಸದ ಲವೆಂಡರ್ ಮತ್ತು ಗೋಲ್ಡ್ ಬಣ್ಣದ ಕಾಂಜೀವರಂ ರೇಷ್ಮೆ ಸೀರೆ. ಇದರ ಅಗಲವಾದ ಕಸೂತಿ ಬಾರ್ಡರ್ ಸೀರೆಗೆ ರಾಯಲ್ ಲುಕ್ ನೀಡಿತ್ತು. ದಕ್ಷಿಣ ಭಾರತದ ಸೀರೆಯ ಸೊಬಗನ್ನು ಈ ಡಿಸೈನ್‌ನಲ್ಲಿ ಸುಂದರಗೊಳಿಸಿತ್ತು. ರೇಷ್ಮೆ ಸೀರೆಗಳನ್ನು ಇಷ್ಟಪಡುತ್ತಿದ್ದ ತಮ್ಮ ತಾಯಿ, ದಿವಂಗತ ಶ್ರೀದೇವಿ ಅವರಿಗೆ ಗೌರವ ಸಲ್ಲಿಸಲು ಜಾನ್ವಿ ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.

Related Articles

Related image1
Cocktail 2 Controversy: ಜಾನ್ವಿ ಕಪೂರ್ ಬಳಿಕ ಕೃತಿ ಸನೋನ್‌ರ ಈ ದೃಶ್ಯಗಳೇ ವಿವಾದಕ್ಕೆ ಕಾರಣವಾಯ್ತಾ?
Related image2
ಜಾನ್ವಿ ಕಪೂರ್ ದಿಟ್ಟ ಹೋರಾಟಕ್ಕೆ ಶಹಬ್ಬಾಸ್ ಎಂದ 'ಮೈನ್ ವಾಪಸ್ ಆವುಂಗಾ' ನಟಿ ಅಂಜನಾ ಸುಖಾನಿ!
35
Backless Blouse and Statement Jewellery Elevated the Look
Image Credit : instagram

Backless Blouse and Statement Jewellery Elevated the Look

ಈ ಸಾಂಪ್ರದಾಯಿಕ ರೇಷ್ಮೆ ಸೀರೆಗೆ ಆಧುನಿಕ ಸ್ಪರ್ಶ ನೀಡಲು, ಜಾನ್ವಿ ಸ್ಟ್ರಾಪ್‌ಲೆಸ್ ಬ್ಯಾಕ್‌ಲೆಸ್ ಬ್ಲೌಸ್ ಧರಿಸಿದ್ದರು. ಇದು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.

45
Complete Look
Image Credit : instagram

Complete Look

ತಮ್ಮ ಲುಕ್ ಪರ್ಫೆಕ್ಟ್ ಆಗಿ ಕಾಣುವಂತೆ ಮಾಡಲು ಜಾನ್ವಿ ಸೀರೆಯೊಂದಿಗೆ ವಜ್ರದ ಆಭರಣಗಳನ್ನು ಧರಿಸಿದ್ದರು. ಇದರಲ್ಲಿ ಹೆವಿ ಚೋಕರ್ ನೆಕ್ಲೇಸ್, ಅದಕ್ಕೆ ಹೊಂದುವ ಕಿವಿಯೋಲೆ, ಡಾಬು, ತೋಳ್ಬಂದಿ, ಬಳೆ, ಉಂಗುರಗಳು ಸೇರಿದ್ದವು. ಅವರ ಮೇಕಪ್ ಮತ್ತು ಹೇರ್‌ಸ್ಟೈಲ್ ಕೂಡಾ ಈ ರಾಯಲ್ ಲುಕ್‌ಗೆ ಇನ್ನಷ್ಟು ಮೆರಗು ನೀಡಿತ್ತು.

55
Mehendi with Shikhar Pahariya's Name Became the Talking Point
Image Credit : instagram

Mehendi with Shikhar Pahariya's Name Became the Talking Point

ಆದರೆ ಅರತಕ್ಷತೆ ಕಾರ್ಯಕ್ರಮದಲ್ಲಿ ಜಾನ್ವಿ ಧರಿಸಿದ್ದ ಸೀರೆ, ಆಭರಣಗಳಿಗಿಂತ ಹೆಚ್ಚು ಗಮನ ಸೆಳೆದಿದ್ದು ಅವರ ಮೆಹೆಂದಿ! ಹೌದು ಸೂಕ್ಷ್ಮವಾಗಿ ಗಮನಿಸಿದಾಗ, ಜಾನ್ವಿ ಕೈಯಲ್ಲಿ 'ಶಿಖು' ಎಂದು ಬರೆದಿರುವುದು ಕಾಣಿಸಿತು. ಇದು ಶಿಖರ್ ಪಹಾರಿಯಾ ಅವರ ಸರ್‌ನೇಮ್ ಆಗಿದೆ. ಈ ಮೂಲಕ ಇವರಿಬ್ಬರ ಸಂಬಂಧದ ಬಗ್ಗೆ ನಡೆಯುತ್ತಿದ್ದ ಗುಸುಗುಸು ಸುದ್ದಿಗಳಿಗೆ ಮೆಹಂದಿ ಹೆಸರಿನ ಬಳಿಕ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಜಾನ್ವಿ ಇತ್ತೀಚೆಗೆ ರಾಮ್ ಚರಣ್ ಜೊತೆ 'ಪೆದ್ದಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ಒಂದು ಹಾರರ್ ಸಿನಿಮಾ ಜೊತೆಗೆ ಮತ್ತೊಂದು ದಕ್ಷಿಣ ಭಾರತದ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬಾಲಿವುಡ್
ಜಾನ್ವಿ ಕಪೂರ್
ಫ್ಯಾಷನ್
ಜೀವನಶೈಲಿ

Latest Videos
Recommended Stories
Recommended image1
Peddi Collections: ಪೆದ್ದಿ ಕಲೆಕ್ಷನ್ ಶಾಕ್! ರಾಮ್ ಚರಣ್‌ಗೆ ನಷ್ಟ, ಸಮಂತಾಗೆ ಲಾಭ, ಎರಡೂ ಒಂದೇ!
Recommended image2
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
Recommended image3
Bigg Boss Telugu 10: ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ: ಕಿಂಗ್ ಕೇಳಿದ ಸಂಭಾವನೆ ಎಷ್ಟು?
Related Stories
Recommended image1
Cocktail 2 Controversy: ಜಾನ್ವಿ ಕಪೂರ್ ಬಳಿಕ ಕೃತಿ ಸನೋನ್‌ರ ಈ ದೃಶ್ಯಗಳೇ ವಿವಾದಕ್ಕೆ ಕಾರಣವಾಯ್ತಾ?
Recommended image2
ಜಾನ್ವಿ ಕಪೂರ್ ದಿಟ್ಟ ಹೋರಾಟಕ್ಕೆ ಶಹಬ್ಬಾಸ್ ಎಂದ 'ಮೈನ್ ವಾಪಸ್ ಆವುಂಗಾ' ನಟಿ ಅಂಜನಾ ಸುಖಾನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved