MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Peddi Collections: ಪೆದ್ದಿ ಕಲೆಕ್ಷನ್ ಶಾಕ್! ರಾಮ್ ಚರಣ್‌ಗೆ ನಷ್ಟ, ಸಮಂತಾಗೆ ಲಾಭ, ಎರಡೂ ಒಂದೇ!

Peddi Collections: ಪೆದ್ದಿ ಕಲೆಕ್ಷನ್ ಶಾಕ್! ರಾಮ್ ಚರಣ್‌ಗೆ ನಷ್ಟ, ಸಮಂತಾಗೆ ಲಾಭ, ಎರಡೂ ಒಂದೇ!

ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ರಾಮ್ ಚರಣ್ ನಟನೆಗೆ ಮೆಚ್ಚುಗೆ ವ್ಯಕ್ತವಾದರೂ, ಸಿನಿಮಾ ಈಗ ಭಾರಿ ನಷ್ಟದೊಂದಿಗೆ ತನ್ನ ಓಟ ಮುಗಿಸುತ್ತಿದೆ. 

2 Min read
Author : Naveen Kodase
Published : Jul 09 2026, 01:13 PM IST
Share this Photo Gallery
  • FB
  • TW
  • Linkdin
  • Whatsapp
16
ಪೆದ್ದಿ ಸಿನಿಮಾದಲ್ಲಿ ತಾರೆಗಳ ದಂಡು
Image Credit : Asianet News

ಪೆದ್ದಿ ಸಿನಿಮಾದಲ್ಲಿ ತಾರೆಗಳ ದಂಡು

ರಾಮ್ ಚರಣ್ ನಾಯಕರಾಗಿ ನಟಿಸಿರುವ 'ಪೆದ್ದಿ' ಸಿನಿಮಾವನ್ನು ಬುಚ್ಚಿಬಾಬು ಸಾನಾ ನಿರ್ದೇಶಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿದ್ದು, ಜಗಪತಿ ಬಾಬು ಮತ್ತು ಶಿವರಾಜ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜೂನ್ 04ರಂದು ತೆರೆ ಕಂಡಿದ್ದ ಪೆದ್ದಿ ಸಿನಿಮಾ
Image Credit : others

ಜೂನ್ 04ರಂದು ತೆರೆ ಕಂಡಿದ್ದ ಪೆದ್ದಿ ಸಿನಿಮಾ

ವೃದ್ಧಿ ಸಿನಿಮಾಸ್, ಮೈತ್ರಿ ಮೂವೀಸ್, ಮತ್ತು ಸುಕುಮಾರ್ ರೈಟಿಂಗ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ವೆಂಕಟ ಸತೀಶ್ ಕಿಲಾರು ನಿರ್ಮಾಪಕರು. 'ಗೇಮ್ ಚೇಂಜರ್' ನಂತಹ ದೊಡ್ಡ ಡಿಸಾಸ್ಟರ್ ನಂತರ ರಾಮ್ ಚರಣ್ ಮಾಡಿದ ಈ ಸಿನಿಮಾ, ಜೂನ್ 4 ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಗಳಿಸಿತ್ತು.

Related Articles

Related image1
400 ಕೋಟಿ ಬಾಚಿದ ರಾಮ್ ಚರಣ್-ಶಿವಣ್ಣ ಸಿನಿಮಾ 'ಪೆದ್ದಿ' OTTಗೆ: ಸ್ಟ್ರೀಮಿಂಗ್ ಯಾವಾಗ, ಎಲ್ಲಿ?
Related image2
'ಪೆದ್ದಿ' ಚಿತ್ರದಿಂದ ಜಾನ್ವಿ ಕಪೂರ್‌ಗೆ ಬಂಪರ್: ವೃತ್ತಿಜೀವನದ ಅತಿದೊಡ್ಡ ಸಂಭಾವನೆ ಸುದ್ದಿ ವೈರಲ್!
36
ಪೆದ್ದಿಗೆ ಹೊಡೆತ ಕೊಟ್ಟ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ'
Image Credit : Instagram/peddimovie

ಪೆದ್ದಿಗೆ ಹೊಡೆತ ಕೊಟ್ಟ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ'

'ಪೆದ್ದಿ' ಸಿನಿಮಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಮೊದಲ ಮತ್ತು ಎರಡನೇ ವಾರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆದರೆ ಮೂರನೇ ವಾರದಿಂದ ಕಲೆಕ್ಷನ್ ಕುಸಿಯಿತು. ಇದೇ ವೇಳೆ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಬಂದಿದ್ದರಿಂದ 'ಪೆದ್ದಿ'ಗೆ ದೊಡ್ಡ ಹೊಡೆತ ಬಿತ್ತು. ಈಗ ಈ ಸಿನಿಮಾ ಬಹುತೇಕ ತನ್ನ ಪ್ರದರ್ಶನ ಮುಗಿಸಿದೆ. ಕೆಲವೇ ಕೆಲವು ಥಿಯೇಟರ್‌ಗಳಲ್ಲಿ, ಅಂದರೆ 10ಕ್ಕಿಂತ ಕಡಿಮೆ ಚಿತ್ರಮಂದಿರಗಳಲ್ಲಿ ದಿನಕ್ಕೆ ಒಂದೇ ಶೋ ನಡೆಯುತ್ತಿದೆ ಅಷ್ಟೇ.

46
ಥಿಯೇಟರ್‌ಗಳಲ್ಲಿ 35 ದಿನ ಪೂರೈಸಿದ ಪೆದ್ದಿ ಸಿನಿಮಾ
Image Credit : Asianet News

ಥಿಯೇಟರ್‌ಗಳಲ್ಲಿ 35 ದಿನ ಪೂರೈಸಿದ ಪೆದ್ದಿ ಸಿನಿಮಾ

'ಪೆದ್ದಿ' ಸಿನಿಮಾ ಥಿಯೇಟರ್‌ಗಳಲ್ಲಿ 35 ದಿನ ಪೂರೈಸಿದೆ. Sacnilk ವರದಿ ಪ್ರಕಾರ, ಈ ಚಿತ್ರ ಇಲ್ಲಿಯವರೆಗೆ ಒಟ್ಟು 341 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾರತದ ಗ್ರಾಸ್ ಕಲೆಕ್ಷನ್ 288 ಕೋಟಿ ರೂ. ಆಗಿದ್ದರೆ, ನೆಟ್ ಕಲೆಕ್ಷನ್ 243.83 ಕೋಟಿ ರೂ. ಇದೆ. ವಿದೇಶದಲ್ಲಿ 53 ಕೋಟಿ ರೂ. ಗಳಿಸಿದೆ. ಈ ಚಿತ್ರದ ಬ್ರೇಕ್ ಈವನ್ ಆಗಲು 220 ಕೋಟಿ ರೂ. ಬೇಕಿತ್ತು. ಆದರೆ ಗಳಿಸಿದ್ದು 170 ಕೋಟಿ ರೂ. ಶೇರ್ ಮಾತ್ರ. ಹಾಗಾಗಿ, ಹಿಟ್ ಆಗಲು ಬೇಕಿದ್ದ ಇನ್ನೂ 50 ಕೋಟಿ ರೂ. ಕೊರತೆಯಿಂದಾಗಿ, ಸಿನಿಮಾ ಅಷ್ಟೇ ಮೊತ್ತದ ನಷ್ಟದೊಂದಿಗೆ ಮುಕ್ತಾಯಗೊಳ್ಳಲಿದೆ.

56
ಪೆದ್ದಿ ಸಿನಿಮಾದಿಂದ 50 ಕೋಟಿ ರುಪಾಯಿ ನಷ್ಟ
Image Credit : X/@vriddhicinemas

ಪೆದ್ದಿ ಸಿನಿಮಾದಿಂದ 50 ಕೋಟಿ ರುಪಾಯಿ ನಷ್ಟ

ಸದ್ಯ ಕೆಲವು ಥಿಯೇಟರ್‌ಗಳಲ್ಲಿ ಸಿನಿಮಾ ಓಡುತ್ತಿದ್ದರೂ, ಆ ಕಲೆಕ್ಷನ್ ಚಿತ್ರಮಂದಿರದ ಖರ್ಚಿಗೂ ಸಾಲುವುದಿಲ್ಲ. ಹಾಗಾಗಿ ನಿರ್ಮಾಪಕರಿಗೆ ಯಾವುದೇ ಹಣ ಬರುವುದಿಲ್ಲ. ಒಟ್ಟಿನಲ್ಲಿ ಈ ಸಿನಿಮಾ 50 ಕೋಟಿ ರೂ. ನಷ್ಟದೊಂದಿಗೆ ಮುಗಿಯಲಿದೆ ಎಂದು ಟ್ರೇಡ್ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ಈ ಚಿತ್ರದಲ್ಲಿನ ರಾಮ್ ಚರಣ್ ನಟನೆಗೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ. ಇದು ರಾಷ್ಟ್ರಪ್ರಶಸ್ತಿ ಮಟ್ಟದ ಪರ್ಫಾರ್ಮೆನ್ಸ್ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

66
ರಾಮ್ ಚರಣ್ ನಷ್ಟ, ಸಮಂತಾ ಲಾಭ ಎರಡೂ ಒಂದೇ!
Image Credit : Asianet News

ರಾಮ್ ಚರಣ್ ನಷ್ಟ, ಸಮಂತಾ ಲಾಭ ಎರಡೂ ಒಂದೇ!

ಇನ್ನೊಂದೆಡೆ, ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರ 90 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಬಿಡುಗಡೆಗೂ ಮುನ್ನವೇ 5 ಕೋಟಿ ರೂ. ಲಾಭ ಗಳಿಸಿ ಬ್ರೇಕ್ ಈವನ್ ಆಗಿತ್ತು. ಥಿಯೇಟರ್‌ನಿಂದ 45 ಕೋಟಿ ರೂ. ಶೇರ್ ಬಂದಿದೆ. ಹೀಗೆ ಒಟ್ಟಾರೆಯಾಗಿ ಸಮಂತಾಗೆ 'ಮಾ ಇಂಟಿ ಬಂಗಾರಂ' ಚಿತ್ರದಿಂದ 50 ಕೋಟಿ ರೂ. ಲಾಭ ಬಂದಿದೆ. ಕಾಕತಾಳೀಯವಾಗಿ ರಾಮ್ ಚರಣ್ ಚಿತ್ರದ ನಷ್ಟ ಮತ್ತು ಸಮಂತಾ ಚಿತ್ರದ ಲಾಭ ಎರಡೂ 50 ಕೋಟಿ ರೂ. ಆಗಿರುವುದು ವಿಶೇಷ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಮನರಂಜನಾ ಸುದ್ದಿ
ರಾಮ್ ಚರಣ್
ಟಾಲಿವುಡ್
ಸಮಂತಾ ರುತ್ ಪ್ರಭು

Latest Videos
Recommended Stories
Recommended image1
Now Playing
Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
Recommended image2
2ನೇ ಬಾರಿ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಲರ್ಸ್'​ ಸ್ವಾತಿ: ಖ್ಯಾತ ನಿರ್ದೇಶಕನ ಜೊತೆ ಮದುವೆ
Recommended image3
ಒಂದೇ ಒಂದು ದಿನಕ್ಕೆ ₹24 ಲಕ್ಷ ಬಾಡಿಗೆ! ₹1 ಕೋಟಿ ಖರ್ಚು ಮಾಡಿ ಮದುವೆಯಾದ Gicchi Giligili ಪ್ರಶಾಂತ್‌ ಕಲಾವಿದ?
Related Stories
Recommended image1
400 ಕೋಟಿ ಬಾಚಿದ ರಾಮ್ ಚರಣ್-ಶಿವಣ್ಣ ಸಿನಿಮಾ 'ಪೆದ್ದಿ' OTTಗೆ: ಸ್ಟ್ರೀಮಿಂಗ್ ಯಾವಾಗ, ಎಲ್ಲಿ?
Recommended image2
'ಪೆದ್ದಿ' ಚಿತ್ರದಿಂದ ಜಾನ್ವಿ ಕಪೂರ್‌ಗೆ ಬಂಪರ್: ವೃತ್ತಿಜೀವನದ ಅತಿದೊಡ್ಡ ಸಂಭಾವನೆ ಸುದ್ದಿ ವೈರಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved