Janhvi Kapoor ಬೋಲ್ಡ್ ಮತ್ತು ಬ್ಯಾಕ್‌ಲೆಸ್ ಲುಕ್ Kim Kardashian ಎಂದ ನೆಟಿಜನ್ಸ್
ಜಾನ್ವಿ ಕಪೂರ್ (Janhvi Kapoor) ತಮ್ಮ ಫ್ಯಾಷನ್ ಕಾರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಜಾನ್ವಿ ಬುದುವಾರ ರಾತ್ರಿ ಕಷಿನ್ ಮತ್ತು ಫ್ರೆಂಡ್ ಜೊತೆ ಡಿನ್ನರ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ನಟಿ ಧರಿಸಿದ್ದ ಬ್ಯಾಕ್‌ಲೆಸ್ ನೀಲಿ ಜಂಪ್‌ಸೂಟ್‌ನಲ್ಲಿ ಅವರು ಸಖತ್ ಹಾಟ್ ಕಾಣುತ್ತಿದ್ದರು . ಆದರೆ ಇದು ಕೆಲವು ನೆಟಿಜನ್ಸ್‌ಗೆ ಸರಿ ಬರಲಿಲ್ಲ ಮತ್ತು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಜಾನ್ವಿ ತಮ್ಮ ಬೋಲ್ಡ್ ಮತ್ತು ಬ್ಯೂಟಿಫುಲ್ ಪೋಟೋಗಳ ಮೂಲಕ ಹೆಚ್ಚು ಗಮನ ಸೆಳೆಯುತ್ತಾರೆ. ಬಿಕಿನಿಯಲ್ಲಿನ ಪೂಲ್ ಫೋಟೋಗಳಿಂದ ಹಿಡಿದು ಬ್ಯಾಕ್‌ಲೆಸ್ ಡ್ರೆಸ್‌ಗಳು, ಥೈ ಹೈ ಸ್ಲಿಟ್ ಹೊಂದಿರುವ ಗೌನ್‌ಗಳು ಮತ್ತು ಪ್ಲಂಗಿಂಗ್ ನೆಕ್‌ಲೈನ್ ಔಟ್‌ಫಿಟ್‌ಗಳ ಮೂಲಕ ನಟಿ ಸದ್ದು ಮಾಡುತ್ತಾರೆ.
ಜಾನ್ವಿಯ ಫ್ಯಾಶನ್ ಸೆನ್ಸ್ ನಿಸ್ಸಂದೇಹವಾಗಿ ಬಾಲಿವುಡ್‌ನಲ್ಲಿ ಬೆಸ್ಟ್. ಅದರ ಹೊರತಾಗಿಯೂ, ನಟಿ ಇತ್ತೀಚೆಗೆ ಟ್ರೋಲ್ ಆಗುತ್ತಿದ್ದಾರೆ. ಹಾಲಿವುಡ್ ನಟಿ ಕಿಮ್ ಕಾರ್ಡಶಿಯಾನ್ ಅವರನ್ನು ಜಾನ್ವಿ ನಕಲು ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಬುಧವಾರ ರಾತ್ರಿ ಜಾನ್ವಿ ತನ್ನ ಕಸಿನ್ ಮತ್ತು ಸ್ನೇಹಿತರೊಂದಿಗೆ ಡಿನ್ನರ್ ಡೇಟ್‌ಗೆ ನೀಲಿ ಜಂಪರ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಆದರೆ ನೆಟಿಜನ್ಸ್ ಅವರ ಮೇಲೆ ದಾಳಿ ಮಾಡಿದರು ಮತ್ತು ಅವರನ್ನು 'Wannabe Kim Kardashian' ಎಂದು ಕರೆದರು.
ಟ್ರೋಲ್‌ಗಳು ಜಾನ್ವಿ ಕಪೂರ್ ಅವರನ್ನು ಕಿಮ್ ಕಾರ್ಡಶಿಯಾನ್ ಅವರೊಂದಿಗೆ ಅಸಹ್ಯಕರ ರೀತಿಯಲ್ಲಿ ಹೋಲಿಸಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಜಾನ್ವಿ ಶಿಮ್ಮರಿಂಗ್ ಸಿಲ್ವರ್ ಸ್ಟ್ರಾಪಿ ಗೌನ್‌ನಲ್ಲಿ ಫೋಟೋಗಳನ್ನು ಹಾಕಿದಾಗ, ಅವರ ಲುಕ್ ಅನ್ನು ಕಿಮ್ ಕಾರ್ಡಶಿಯಾನ್ ಮತ್ತು ಅರಿಯಾನಾ ಗ್ರಾಂಡೆಗೆ ಹೋಲಿಸಲಾಯಿತು.
ಏಕೆಂದರೆ ಜಾನ್ವಿ ಕಪೂರ್ ತನ್ನ ಕೂದಲನ್ನು ಪೋನಿಟೇಲ್‌ನಲ್ಲಿ ಹಿಂದಕ್ಕೆ ಎಳೆದುಕೊಂಡಿದ್ದು ಆಕೆಯನ್ನು ಕಿಮ್ ಕಾರ್ಡಶಿಯಾನ್‌ನಂತೆ ಕಾಣುವಂತೆ ಮಾಡಿತ್ತು ಮತ್ತು ಗೌನ್ ಅವರ ಸುಂದರವಾದ ಪರ್ಪೇಕ್ಟ್ ಫಿಗರ್ ಅನ್ನು ತೋರಿಸಿತ್ತು
ಜಾನ್ವಿ ಕಪೂರ್ ಬುಧವಾರ ರಾತ್ರಿ ಮುಂಬೈನ ವರ್ಲಿ ಪ್ರದೇಶದಲ್ಲಿನ ಐಷಾರಾಮಿ ಜಪಾನೀಸ್ ರೆಸ್ಟೋರೆಂಟ್‌ನಲ್ಲಿ ತನ್ನ ಕಸಿನ್ ಶನಯಾ ಕಪೂರ್ ಮತ್ತು ಸ್ನೇಹಿತೆ ಅನನ್ಯಾ ಪಾಂಡೆಯೊಂದಿಗೆ ರಾತ್ರಿ ಊಟಕ್ಕೆ ಹೋಗಿದ್ದರು.
ಒಬ್ಬ ಪಾಪರಾಜಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಜಾನ್ವಿ ಕಪೂರ್ ರೆಸ್ಟೋರೆಂಟ್‌ನಿಂದ ಹೊರಬಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜಾನ್ವಿ ತನ್ನ ಕಾರಿನಲ್ಲಿ ಕುಳಿತಾಗ ಪಾಪ್‌ಗಳಿಗೆ ಬೈ ಹೇಳಿದರು.
ಜಾನ್ವಿ ಕಪೂರ್ ಅವರ ಚಿಕ್ ಮತ್ತು ಕಂಫರ್ಟಬಲ್ ಜಂಪ್‌ಸೂಟ್ ಲುಕ್‌ಗೆ 'Wannabe Kim Kardashian' ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಆಕೆಯ ಲುಕ್ ಅನ್ನು ಪ್ರೀತಿಸಿದ ಅನೇಕರು, ಕಾಮೆಂಟ್‌ಗಳ ವಿಭಾಗದಲ್ಲಿ ಬೆಂಕಿ ಮತ್ತು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ
ಇತ್ತೀಚೆಗೆ, ಲಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಜಾನ್ವಿ ಕಪೂರ್ ಡಿಸೈನರ್ ಪುನಿತ್ ಬಾಲನ ಅವರ 'ಲಕ್ಷ್ಮಿ' ಕಲೆಕ್ಷನ್‌ನ ಬ್ಯಾಕ್‌ಲೆಸ್ ಚೋಲಿಯನ್ನು ಧರಿಸಿದ್ದರು. ಜಾನ್ವಿ ಪುನಿತ್ ಅವರಿಗೆ ಶೋಸ್ಟಾಪರ್ ಆಗಿದ್ದರು.
ಕೆಲಸ ಮುಂಭಾಗದಲ್ಲಿ, ಜಾಹ್ನವಿ ಕಪೂರ್ ನಟ ವರುಣ್ ಧವನ್ ಅವರ ಮುಂಬರುವ ಚಿತ್ರ 'ಬವಾಲ್'ನಲ್ಲಿ ಕೆಲಸ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಜಾನ್ವಿ ಮತ್ತು ವರುಣ್ ಪರಸ್ಪರ ಜೋಡಿಯಾಗುತ್ತಿದ್ದಾರೆ.