FDCI x Lakme Fashion Week ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ Janhvi ರ‍್ಯಾಂಪ್ ವಾಕ್
ಅದು ಬಿಕಿನಿಯಾಗಿರಲಿ, ಸ್ಟ್ರಾಪ್ಪಿ ಡ್ರೆಸ್ ಆಗಿರಲಿ, ಸಂಜೆಯ ಕಾಕ್‌ಟೈಲ್ ಗೌನ್ ಆಗಿರಲಿ ಅಥವಾ ವಧುವಿನ ಉಡುಗೆಯಾಗಿರಲಿ, ಜಾನ್ವಿ (Janhvi Kapoor) ಅವರು ಧರಿಸುವ ಪ್ರತಿಯೊಂದು ಉಡುಪಿನಲ್ಲೂ ಸುಂದರವಾಗಿ ಕಾಣುತ್ತಾರೆ. FDCI x Lakme Fashion Week ನ ರಾಂಪ್‌ನಲ್ಲಿ ಫ್ಯಾಶನ್ ಡಿಸೈನರ್ ಪುನಿತ್ ಬಾಲಾನಾಗೆ (Punit Balana) ರ‍್ಯಾಂಪ್ ವಾಕ್ ಮಾಡಿದಾಗ ಜಾನ್ವಿ ಕಪೂರ್ ಎಲ್ಲರ ಗಮನ ಸೆಳೆಯುವಲ್ಲಿ ಹಿಂದೆ ಬೀಳಲಿಲ್ಲ ಮತ್ತು ಮೊತ್ತೊಮ್ಮೆ ಅವರು ಎಲ್ಲಾ ಫ್ಯಾಷನ್‌ಗೂ ಸೈ ಎಂದು ಸಾಬೀತು ಪಡಿಸಿದ್ದಾರೆ.
ಡಿಸೈನರ್ ಪುನಿತ್ ಬಾಲನಾ ಅವರ ಇತ್ತೀಚಿನ 'ಲಕ್ಷ್ಮಿ' ಸಂಗ್ರಹವನ್ನು ಧರಿಸಿದ ಜಾನ್ವಿ, ಕಪೂರ್, ಶನಿವಾರದ ಕಾರ್ಯಕ್ರಮದ ಶೋಸ್ಟಾಪರ್ ಆಗಿದ್ದರು. ಈ ಸಮಯದಲ್ಲಿ ಅವರು ಧರಿಸಿದ್ದ ಬ್ಯಾಕ್‌ಲೆಸ್ ಚೋಲಿಯೊಂದಿಗೆ ವಧುವಿನ ಲೆಹೆಂಗಾದಲ್ಲಿ ಮಿಲಿಯನ್ ಹೃದಯಗಳನ್ನು ಗೆದ್ದರು.
ಪುನಿತ್ ಬಾಲನಾ ಅವರ ಸಂಗ್ರಹವು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಮತ್ತು ಒಲವನ್ನು ಪ್ರತಿಬಿಂಬಿಸುತ್ತದೆ. ಜಾನ್ವಿ ಕಪೂರ್ ಅದನ್ನು ಧರಿಸಿಯ ಡಿಸೈನರ್ ಕೆಲಸಕ್ಕೆ ಪೂರ್ಣ ಪ್ರಮಾಣ ನ್ಯಾಯ ಒದಗಿಸಿದ್ದಾರೆ.
ಜಾನ್ವಿ ಕಪೂರ್ ಶನಿವಾರದಂದು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಪುನಿತ್ ಬಾಲನಾ ಅವರ ಮಾಡ್ರನ್ ಅಂಶಗಳನ್ನು ಒಳಗೊಂಡಿರುವ ಎಥ್ನಿಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಜಾನ್ವಿ ಕಪೂರ್ ತ್ರೀ ಪೀಸ್ ಕೆಂಪು ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ಅವರು ಕ್ರಾಪ್ ಟಾಪ್ ಧರಿಸಿದ್ದಾರೆ. ಟಾಪ್ ಹಿಂಭಾಗದಲ್ಲಿರುವ ಡೋರಿಸ್ ಮತ್ತು ಡ್ರೆಸ್‌ನಲ್ಲಿರುವ ಕನ್ನಡಿ ಕೆಲಸವು ಸಾಂಪ್ರದಾಯಿಕ ಅಂಶಗಳಿಂದ ಕೂಡಿದೆ.
ಜಾನ್ವಿ ಕಪೂರ್ ಧರಿಸಿದ್ದ ಈ ಬಿಳಿ ಲೆಹೆಂಗಾ-ಚೋಲಿ ಉಡುಪನ್ನು ಸರಿಯಾದ ಸಮತೋಲನವನ್ನು ಹೇಗೆ ಮಾಡುವುದು ಎಂಬುದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ.
ಡಿಸೈನರ್ ಪುನಿತ್ ಬಾಲನಾ ಪುನೀತ್ ಅವರ ಲೆಹೆಂಗಾಗಳು ಹೆಚ್ಚಾಗಿ ರೇಷ್ಮೆ ಬಟ್ಟೆಯಲ್ಲಿ ನೇಯ್ಗೆ ಮಾಡಲಾಗಿತ್ತು ಮತ್ತು ಬೆರಗುಗೊಳಿಸುವ ಕಸೂತಿ ಕೆಲಸವನ್ನು ಹೊಂದಿದ್ದವು.
ಈ ಲೆಹೆಂಗಾ ದೊಡ್ಡ ಹೂವಿನ ಪ್ರಿಂಟ್‌ಗಳಿಂದ ಕೂಡಿದೆ ಲೆಹೆಂಗಾ-ಚೋಲಿ ಜೊತೆಗೆ ಬಂದಿರುವ ಬಿಳಿ ಬಣ್ಣದ ದುಪಟ್ಟಾವು ಝರ್ದೋಜಿ ಕೆಲಸವನ್ನು ಹೊಂದಿರುವ ದಪ್ಪವಾದ ಗೋಲ್ಡನ್ ಬಾರ್ಡರ್ ಹೊಂದಿದೆ.