ಅಲ್ಲು ಅರ್ಜುನ್‌ಗೆ ಬಿಗ್ ಶಾಕ್, ಇಂಡಿಯಾದ ನಂಬರ್ ಒನ್ ಹೀರೋ ಇವರೇ!
ಭಾರತದಲ್ಲಿ ಪಾಪುಲರ್ ಆದ ಟಾಪ್ 10 ನಟರ ಲಿಸ್ಟ್ ಅನ್ನು ಓರ್ಮಾಕ್ಸ್ ಮೀಡಿಯಾ ರಿಲೀಸ್ ಮಾಡಿದೆ. ಅದರಲ್ಲಿ ಯಾರ್ಯಾರು ಇದ್ದಾರೆ ನೋಡೋಣ.

ಭಾರತದಲ್ಲಿ ಪಾಪುಲರ್ ಆದ ಟಾಪ್ 10 ಜನಪ್ರಿಯ ನಟರ ರ‍್ಯಾಂಕಿಂಗ್ ಲಿಸ್ಟ್ ರಿಲೀಸ್ ಆಗಿದೆ. ಈ ರ‍್ಯಾಂಕಿಂಗ್ ಲಿಸ್ಟ್ ಅನ್ನು ಓರ್ಮಾಕ್ಸ್ ಮೀಡಿಯಾ ರಿಲೀಸ್ ಮಾಡಿದೆ. 2025 ಫೆಬ್ರವರಿ ತಿಂಗಳ ಪ್ರಕಾರ ಈ ಲಿಸ್ಟ್ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಸೌತ್ ಇಂಡಿಯಾ ನಟರ ಹವಾ ಜಾಸ್ತಿ ಇದೆ.
ಪ್ರಭಾಸ್ ಸದ್ಯಕ್ಕೆ `ದಿ ರಾಜಾ ಸಾಬ್`ನಲ್ಲಿ ನಟಿಸ್ತಾ ಇದ್ದಾರೆ. ಇದರ ಜೊತೆಗೆ `ಫೌಜಿ` ಚಿತ್ರೀಕರಣ ನಡೀತಿದೆ. ಹಾಗೇ ಸಂದೀಪ್ ರೆಡ್ಡಿ ವಂಗ ಜೊತೆ `ಸ್ಪಿರಿಟ್` ಮಾಡಬೇಕಿದೆ. ಇದರ ಜೊತೆಗೆ ಪ್ರಶಾಂತ್ ವರ್ಮ ಜೊತೆ ಒಂದು ಮೂವಿಗೆ ಕಮಿಟ್ ಆಗಿದ್ದಾರೆ.
ಪಾಪುಲರ್ ಇಂಡಿಯನ್ ನಟರ ಲಿಸ್ಟ್‌ನಲ್ಲಿ ನಟ ವಿಜಯ್ ಸೆಕೆಂಡ್ ಪ್ಲೇಸ್‌ನಲ್ಲಿ ಇದ್ದಾರೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದ್ರಿಂದ ಅವರ ಬಗ್ಗೆ ನ್ಯೂಸ್ ಬರ್ತಾನೇ ಇರುತ್ತೆ. ಅವರ 'ಜನನಾಯಗನ್' ಸಿನಿಮಾ ಶೂಟಿಂಗ್ ಕೂಡ ಈಗ ನಡೀತಿದೆ.
ಭಾರತದಲ್ಲಿನ ಟಾಪ್ 10 ಪಾಪುಲರ್ ನಟರ ಲಿಸ್ಟ್‌ನಲ್ಲಿ ನಟ ಪ್ರಭಾಸ್ ನಂ.1 ಸ್ಥಾನಲ್ಲಿದ್ದಾರೆ. ಪುಷ್ಪ 2 ಹೀರೋ ಅಲ್ಲು ಅರ್ಜುನ್ ಥರ್ಡ್ ಪ್ಲೇಸ್‌ನಲ್ಲಿ ಇದ್ದಾರೆ. ಶಾರುಖ್ ಖಾನ್‌ಗೆ ಫೋರ್ಥ್ ಪ್ಲೇಸ್ ಸಿಕ್ಕಿದೆ. ಇದಕ್ಕೂ ಮುಂಚೆ ಶಾರುಖ್ ಖಾನ್ ಈ ಲಿಸ್ಟ್‌ನಲ್ಲಿ ಫಸ್ಟ್ ಪ್ಲೇಸ್‌ನಲ್ಲಿ ಇರ್ತಿದ್ರು.
ಗೇಮ್ ಚೇಂಜರ್ ಚಿತ್ರದ ನಾಯಕ ರಾಮ್ ಚರಣ್ ಐದನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಮಹೇಶ್ ಬಾಬು ಆರನೇ ಸ್ಥಾನದಲ್ಲಿದ್ದರೆ, ಗುಡ್ ಬ್ಯಾಡ್ ಅಗ್ಲಿ ಹೀರೋ ಅಜಿತ್ ಕುಮಾರ್ ಏಳನೇ ಸ್ಥಾನದಲ್ಲಿದ್ದಾರೆ. ಜೂನಿಯರ್ ಎನ್‌ಟಿಆರ್ ಎಂಟನೇ ಸ್ಥಾನದಲ್ಲಿದ್ದರೆ, ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಕೊನೆಯ ಎರಡು ಸ್ಥಾನಗಳಲ್ಲಿದ್ದಾರೆ.