ಮಗುವನ್ನು ದತ್ತು ಪಡೆದು ತಾಯ್ತನವನ್ನು ಸಂಭ್ರಮಿಸಿದ ಸಿನಿಮಾ ತಾರೆಯರು
ಭಾರತೀಯ ಚಿತ್ರರಂಗದ ಈ ನಟಿಯರು ಮಕ್ಕಳನ್ನು ದತ್ತು ಪಡೆಯುವ ಮೂಲಕ ತಮ್ಮ ತಾಯ್ತನವನ್ನು ಸಂಭ್ರಮಿಸಿ, ಬೆಸ್ಟ್ ತಾಯಿ ಎನಿಸಿಕೊಂಡಿದ್ದಾರೆ. ಇವರಲ್ಲಿ ಸಿಂಗಲ್ ಪೇರೆಂಟ್ ಕೂಡ ಇದ್ದಾರೆ. ಜೊತೆಗೆ ಮದುವೆತಯಾದವರು ಕೂಡ ಇದ್ದಾರೆ. ಯಾರೆಲ್ಲಾ ಈ ಲಿಸ್ಟ್ ನಲ್ಲಿದ್ದಾರೆ ನೋಡೋಣ.

ಮಗು ದತ್ತು ಪಡೆದ ನಟಿಯರು
ತಾಯ್ತನ ಅನ್ನೋದು ಹೆಣ್ಣಿನ ಜೀವನದ ಒಂದು ಸಂಭ್ರಮದ ಭಾಗ ಹೌದು, ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಅದನ್ನು ಸಂಭ್ರಮಿಸಲು ಸಾಧ್ಯವಾಗೋದಿಲ್ಲ. ಭಾರತೀಯ ಚಿತ್ರರಂಗದ ಹಲವು ನಟಿಯರು ಸಹ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಮ್ಮ ತಾಯ್ತನವನ್ನು ಸಂಭ್ರಮಿಸಿದ್ದಾರೆ. ಅವರು ಯಾರ್ಯಾರು ನೋಡೋಣ.
ಅಭಿರಾಮಿ
ರಕ್ತಕಣ್ಣೀರು, ಲಾಲಿಹಾಡು, ದಶರಥ, ಕೋಟಿಗೊಬ್ಬ 3 ಸಿನಿಮಾದಲ್ಲಿ ನಟಿಸಿದ ನಟಿ ಅಭಿರಾಮಿ ಮತ್ತು ಆಕೆಯ ಪತಿ ರಾಹುಲ್ ಪವನನ್ 2022ರಲ್ಲಿ ಹೆಣ್ಣುಮಗುವನ್ನು ದತ್ತು ಪಡೆದು, ಕಲ್ಕಿ ಎಂದು ಹೆಸರಿಟ್ಟರು. ಇತ್ತೀಚೆಗಷ್ಟೇ ನಟಿ ಮಗುವಿನ ಮುಖ ರಿವೀಲ್ ಮಾಡಿದ್ದರು.
ಸುಶ್ಮಿತಾ ಸೇನ್
ಬಾಲಿವುಡ್ ನ ಜನಪ್ರಿಯ ನಟಿ, ವಿಶ್ವಸುಂದರಿ ಸುಶ್ಮಿತಾ ಸೇನ್ ಮೊದಲ ಮಗಳು ರಿನೀಯನ್ನು 2000ನೇ ಇಸವಿಯಲ್ಲಿ ಮತ್ತು ಎರಡನೇ ಮಗಳು ಅಲಿಶಾಳನ್ನು 2010ರಲ್ಲಿ ದತ್ತು ಪಡೆದರು. ಸಿಂಗಲ್ ಮದರ್ ಆಗಿದ್ದುಕೊಂಡು ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ ನಟಿ.
ಶೋಭನಾ
ಮಲಯಾಳಂನ ಜನಪ್ರಿಯ ನಟಿ ಶೋಭನಾ ಇನ್ನೂ ಮದುವೆಯಾಗಿಲ್ಲ, ಅವರು 2011ರಲ್ಲಿ ಹೆಣ್ಣುಮಗುವನ್ನು ದತ್ತು ಪಡೆದು ಅನಂತ ನಾರಾಯಣಿ ಎಂದು ಹೆಸರಿಟ್ಟರು. ಇವರು ಸಿಂಗಲ್ ಪೇರೆಂಟ್ ಆಗಿದ್ದಾರೆ. ಇತ್ತೀಚೆಗೆ ತಾಯಿ ಮತ್ತು ಮಗಳು ಜೊತೆಯಾಗಿ ಭರತನಾಟ್ಯ ನೃತ್ಯ ಪ್ರದರ್ಶನ ಕೂಡ ನೀಡಿದ್ದರು.
ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್ 2017ರಲ್ಲಿ ನಿಶಾ ಕೌರ್ ವೆಬರ್ ನ್ನು ದತ್ತು ಪಡೆದರು, ಬಳಿಕ ಬಾಡಿಗೆ ತಾಯ್ತನದ ಮೂಲಕ 2018ರಲ್ಲಿ ಮತ್ತಿಬ್ಬರು ಟ್ವಿನ್ ಗಂಡು ಮಕ್ಕಳಿಗೆ ತಾಯಿಯಾದರು ಸನ್ನಿ. ಆ ಮೂಲಕ ತಾವು ಗ್ರೇಟ್ ತಾಯಿ ಅನ್ನೋದನ್ನು ನಟಿ ಸಾಬೀತು ಪಡಿಸಿದ್ದರು.
ರವೀನಾ ಟಂಡನ್
ರವೀನಾ ಟಂಡನ್ ಅವರಿಗೆ ಮದುವೆಯಾಗಿ ಮಕ್ಕಳೂ ಇದ್ದಾರೆ ನಿಜಾ. ಆದರೆ ಮದುವೆಗೂ ಮುನ್ನ ತಮ್ಮ 21ನೇ ವಯಸ್ಸಿನಲ್ಲೇ ರವೀನಾ ತಮ್ಮ ದೂರದ ಸಂಬಂಧಿಯ ಮರಣದ ನಂತರ ಅವರ ಇಬ್ಬರು ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ. ಈವಾಗ ರವೀನಾ ಇಬ್ಬರು ಮೊಮ್ಮಕ್ಕಳ ಅಜ್ಜಿ ಕೂಡ ಹೌದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

