Kerala Adoption Battle: ಕರುಳ ಕುಡಿಗಾಗಿ ಹೋರಾಡಿ ಗೆದ್ದ ಅಮ್ಮ, ಕಂದ ಮರಳಿ ತಾಯಿ ಮಡಿಲಿಗೆ!

* ದತ್ತು ಮಗುವಿನಿಂದಾಗಿ ಎರಡು ರಾಜ್ಯಗಳ ನಡುವೆ ಮುನಿಸು

* ಹೆತ್ತವರ ಅನುಮತಿ ಇಲ್ಲದೇ ಮಗು ದತ್ತು ಕೊಟ್ಟ ಸಂಸ್ಥೆ

* ಅನುಪಮಾ ಹೋರಾಟಕ್ಕೆ ಜಯ, ತಾಯಿ ಮಡಿಲು ಸೇರಿದ ಕಂದ

 

Kerala Anupama and Ajith get justice baby on mothers lap parents won battle pod

ತಿರುವನಂತಪುರಂ(ನ.24): ಕೇರಳದಲ್ಲಿ ಭಾರೀ ಸದ್ದು ಮಾಡಿದ್ದ ಅಕ್ರಮ ದತ್ತು ಪ್ರಕರಣ (Adoption Case) ಕೊನೆಗೂ ಸುಖಾಂತ್ಯ ಕಂಡಿದೆ. ಡಿಎನ್‌ಎ ಟೆಸ್ಟ್‌ವರೆಗೂ (DNA Test)  ತಲುಪಿದ್ದ ಪ್ರಕರಣದಲ್ಲಿ ಮಗುವಿನ ಹೆತ್ತ ಪೋಷಕರ ಹೋರಾಟಕ್ಕೆ ಜಯ ಸಿಕ್ಕಿದೆ. ಮುದ್ದು ಕಂದ ಮತ್ತೆ ತನ್ನ ತಾಯಿ ಮಡಿಲು ಸೇರಿದೆ. ಹೌದು ಕೇರಳದ (Kerala) ಅನುಪಮಾ ಮತ್ತಾಕೆಯ ಸಂಗಾತಿ ಅಜಿತ್‌ಗೆ (Anupama And Ajith) ಕೊನೆಗೂ ನ್ಯಾಯ ಸಿಕ್ಕಿದೆ. ಹೌದು ತಿರುವನಂತಪುರಂ ಕೌಟುಂಬಿಕ ನ್ಯಾಯಾಲಯ ಮಗುವನ್ನು ಬಿಡುಗಡೆ ಮಾಡುವಂತೆ ಆದೇಶಿದೆ. ಈ ಆದೇಶದಂತೆ ಒಂದು ವರ್ಷದ  ಕಂದ ಏಡನ್ ಅನು ಅಜಿತ್‌ನನ್ನು ಆತನ ತಾಯಿ ಅನುಪಮಾಗೆ ಹಸ್ತಾಂತರಿಸಲಾಗಿದೆ. ಡಿಎನ್‌ಎ ಪರೀಕ್ಷೆಯ ಫಲಿತಾಂಶಗಳನ್ನು ಒಳಗೊಂಡಂತೆ ಡಿಡಬ್ಲ್ಯೂಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ನ್ಯಾಯಾಲಯದ ಆದೇಶ ಹೊರಬಿದ್ದಿದೆ.

ಈ ಎಲ್ಲಾ ಪ್ರಕ್ರಿಯೆಗಳು ನ್ಯಾಯಾಧೀಶರ ಕೊಠಡಿಯಲ್ಲಿ ನಡೆದವು. ಮಗುವನ್ನು ಕೊಡುವ ಮುನ್ನ ಮಗುವಿನ ತಂದೆ ಅಜಿತ್‌ನನ್ನೂ ಚೇಂಬರ್‌ಗೆ ಕರೆಸಲಾಗಿತ್ತು. ಮಗುವನ್ನು ಚೆನ್ನಾಗಿ ಬೆಳೆಸಬೇಕು ಎಂದು ಕೌಟುಂಬಿಕ ನ್ಯಾಯಾಲಯದ (Thiruvananthapuram Family Court) ನ್ಯಾಯಾಧೀಶ ಬಿಜು ಮೆನನ್ ಅನುಪಮಾ ಅವರಿಗೆ ಸ್ಪಷ್ಟವಾಗಿ ಸೂಚಿಸಿದೆ. ಇನ್ನು ಮಗುವನ್ನು ಹಾಜರುಪಡಿಸುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಸೂಚಿಸಿದ ನ್ಯಾಯಾಲಯ, ವೈದ್ಯರನ್ನು ಕರೆಸಿ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ವರ್ಗಾವಣೆ ಮಾಡುವಂತೆ ಆದೇಶಿಸಿದೆ. 

Adoption Battle| 1 ವರ್ಷದ ಮಗುವಿಗಾಗಿ ಕೇರಳ- ಆಂಧ್ರ ಜಗಳ, DNA ಟೆಸ್ಟ್‌ವರೆಗೆ ತಲುಪಿದ ಕೇಸ್!

ಇನ್ನು ಸರ್ಕಾರ ಆದಷ್ಟು ಬೇಗ ಈ ಪ್ರಕರಣವನ್ನು ಪರಿಗಣಿಸಬೇಕು ಮತ್ತು ಮಗುವಿನ ತಾಯಿಯ ಭಾವನೆಗಳನ್ನು ಪರಿಗಣಿಸಿ ಸರ್ಕಾರವು ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಅನುಪಮಾ ಈ ಹಿಂದೆ ಒತ್ತಾಯಿಸಿದ್ದರು. ಈ ಮಗು ಅನುಪಮಾ ಮತ್ತು ಆಕೆಯ ಸಂಗಾತಿ ಅಜಿತ್‌ರವರದ್ದು ಹೌದೇ ಅಲ್ಲವೇ ಎಂಬುವುದಕ್ಕೆ ಡಿಎನ್‌ಎ ಫಲಿತಾಂಶ ಬಹಳ ನಿರ್ಣಾಯಕವಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಕಂದನ ನಿಜವಾದ ಹೆತ್ತವರು ಅನುಪಮಾ ಹಾಗೂ ಅಜಿತ್ ಎಂಬುವುದು ಸಾಬೀತಾಗಿದ್ದು, ಕಕೊನೆಗೂ ಈ ಪ್ರಕರಣ ಸುಖಾಂತ್ಯ ಕಂಡಿದೆ. ಇನ್ನು ಈ ಪ್ರಕರಣವನ್ನು ಮೊಟ್ಟ ಮೊದಲು ಏಷ್ಯಾನೆಟ್‌ ನ್ಯೂಸ್‌ (Asianet News) ಭೇದಿಸಿತ್ತು ಎಂಬುವುದು ಉಲ್ಲೇಖನೀಯ. 

ಏನಿದು ಪ್ರಕರಣ?

ಅಕ್ಟೋಬರ್ 19, 2020ರಂದು ಗಂಡು ಮಗುವಿಗೆ ಅನುಪಮಾ (Anupama S Chandran)ಜನ್ಮ ನೀಡಿದ್ದರು. ಆದರೆ ಅನುಮತಿಯಿಲ್ಲದೆ ಆಕೆಯ ಹೆತ್ತವರು ಮಗುವನ್ನು ದತ್ತು ನೀಡಿದ್ದರು. ಅನುಪಮಾಗೆ ಆಗ ವಿವಾಹವಾಗಿರದೇ ಇದ್ದುದೇ ಇದಕ್ಕೆ ಕಾರಣವಾಗಿತ್ತು. ಅಲ್ಲದೇ ಅನುಪಮಾ ಹೆತ್ತವರಿಗೆ ಆಕೆ ಹಾಗೂ ಅಜಿತ್ (Ajith) ನಡುವಿನ ಸಂಬಂಧವೂ ಇಷ್ಟವಿರಲಿಲ್ಲ. ಇನ್ನು ಅನುಪಮಾ ಸೋದರಿಯ ವಿವಾಹವಾದ ನಂತರವೇ ಅವರಿಬ್ಬರ ಸಂಬಂಧ ಒಪ್ಪುವುದಾಗಿಯೂ ಹೇಳಿದ್ದ ಕುಟುಂಬ ಆಕೆಯ ಮಗುವನ್ನು ಆಕೆಗೆ ತಿಳಿಯದಂತೆ ಒಂದು ವರ್ಷದ ಹಿಂದೆ ಕೆಎಸ್‌ಸಿಸಿಡಬ್ಲ್ಯು  (KSCCW) ಮೂಲಕ ದತ್ತು ನೀಡಿತ್ತು. ಬಳಿಕ ಅನುಪಮಾಗೆ ಮಗುವನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆಂದು ತಿಳಿಸಿದ್ದರು. ಈ ಮಗು ಕಳೆದೊಂದು ವರ್ಷದಿಂದ ಆಂಧ್ರಪ್ರದೇಶದ ದಂಪತಿಯ ಆರೈಕೆಯಲ್ಲಿತ್ತು.

Kerala Anupama and Ajith get justice baby on mothers lap parents won battle pod

ಧರಣಿ ನಡೆಸಿದ್ದ ಅನುಪಮಾ 

ಅನುಪಮಾ ಎಸ್ ಚಂದ್ರನ್ ಮತ್ತು ಅವರ ಸಂಗಾತಿ ಅಜಿತ್ (Ajith) ತಮ್ಮ ಮಗುವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕೆಎಸ್‌ಸಿಸಿಡಬ್ಲ್ಯೂ(KSCCW)ಕಚೇರಿಯ ಎದುರು ಹಲವಾರು ದಿನಗಳಿಂದ ಧರಣಿ ನಡೆಸಿದ್ದರು. ಹೀಗಿರುವಾಗ, ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18 ರಂದು ಆದೇಶವನ್ನು ಹೊರಡಿಸಿ, ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು KSCCW ಗೆ ನಿರ್ದೇಶನ ನೀಡಿತ್ತು.

ಆದೇಶದ ನಂತರ ಕೆಎಸ್‌ಸಿಸಿಡಬ್ಲ್ಯು ಅಧಿಕಾರಿಗಳ ನೇತೃತ್ವದ ತಂಡ ಆಂಧ್ರಪ್ರದೇಶಕ್ಕೆ ತೆರಳಿ ದಂಪತಿಯಿಂದ ಮಗುವನ್ನು ಶನಿವಾರ ವಾಪಸ್ ಪಡೆದಿದೆ. ಭಾನುವಾರ ರಾತ್ರಿ ಮಗುವಿನೊಂದಿಗೆ ತಂಡವು ತಿರುವನಂತಪುರಂ ವಿಮಾನ ನಿಲ್ದಾಣ ತಲುಪಿತ್ತು. CWC ಯ ನಿರ್ದೇಶನದಂತೆ ಮಗುವನ್ನು ಮಕ್ಕಳ ಆರೈಕೆ ಸಂಸ್ಥೆಗೆ ನಿಯೋಜಿಸಲಾಗಿತ್ತು. CWC ಯ ಆದೇಶದ ಪ್ರಕಾರ, ಮಗುವಿನ ಜೈವಿಕ ಪೋಷಕರನ್ನು ಕಂಡುಹಿಡಿಯಲು DNA ಪರೀಕ್ಷೆಯ ಸಹಾಯವನ್ನು ತೆಗೆದುಕೊಂಡಿದ್ದು, ಸದ್ಯ ಒಂದು ವರ್ಷದ ಮಗು ಹೆತ್ತವ್ವನ ಮಡಿಲು ಸೇರಿದೆ. 

Latest Videos
Follow Us:
Download App:
  • android
  • ios