- Home
- Entertainment
- Cine World
- ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ
ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ
ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ, ಖ್ಯಾತ ಸಿಂಗರ್ ಕ್ರಶ್ ಲಿಸ್ಟ್‌ನಲ್ಲಿ ಮದುವೆಯಾದವರೇ ಹೆಚ್ಚಿದ್ದಾರೆ. ತಮ್ಮ ಕ್ರಶ್ ಲಿಸ್ಟ್ ಬಹಿರಂಗಪಡಿಸಿದ್ದಾರೆ.

ಮದುವೆಯಾದರೆ ಏನೂ, ನನಗೆ ಇಷ್ಟ
ಖ್ಯಾತ ಗಾಯಕರಾದ ಬಿನ್ನಿ ಕೃಷ್ಣಕುಮಾರ್ ಮತ್ತು ಕೃಷ್ಣಕುಮಾರ್ ಪುತ್ರಿ ಶಿವಾಂಗಿ ಕೃಷ್ಣಕುಮಾರ್ ಗಾಯಕಿಯಾಗಿ ಮಾತ್ರವಲ್ಲ, ಸಂದರ್ಶನ್ ಸೇರಿದಂತೆ ವೈರಲ್ ವಿಡಿಯೋಗಳ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ತಮ್ಮ ಅಫೇರ್ಸ್ ಕುರಿತು ಮೌನ ಮುರಿದಿದ್ದಾರೆ. ತಮ್ಮ ಪ್ರೀತಿ, ಇಷ್ಟದ ಕುರಿತು ಹೇಳಿಕೆ ನೀಡಿ ಭಾರಿ ಕೋಲಾಹಲ ಸೃಷ್ಟಿಸಿದ್ದಾರೆ. ಮದುವೆಯಾದರೇ ಏನಂತೆ ನನಗೆ ಇಷ್ಟ , ನನ್ನ ಪ್ರೀತಿ ಮುಂದುವರಿಯವರಿದೆ ಎಂದು ಹೇಳುವ ಮೂಲಕ ಕ್ರಶ್ ಲಿಸ್ಟ್ ಹೇಳಿದ್ದಾರೆ.
ನಟರ ಲಿಸ್ಟ್ ಹೇಳಿದ ಗಾಯಕಿ
ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಶಿವಾಂಗಿ ಕೃಷ್ಣಕುಮಾರ್, ತಮ್ಮ ಕ್ರಶ್‌ಗಳ ಬಗ್ಗೆ ಹೇಳಿಕೊಂಡ ಮಾತುಗಳು ಸಖತ್ ಚರ್ಚೆಯಾಗುತ್ತಿವೆ. ಮಲೆಯಾಳಂ ಸಿನಿಮಾ, ಟಿವಿಗಳಲ್ಲಿ ಭಾರಿ ಚಿರಪರಿಚಿತವಾಗಿರುವ ಶಿವಾಂಗಿ ಇದೀಗ ತಮ್ಮ ಕ್ರಶ್ ಲಿಸ್ಟ್ ನೀಡಿದ್ದಾರೆ. ಭಾರಿ ಜನಪ್ರಿಯತೆ ಗಳಿಸಿರುವ ನಟ ಉಣ್ಣಿ ಮುಕುಂದನ್, ಸಂದೀಪ್ ಪ್ರದೀಪ್ ಸೇರಿದಂತೆ ಹಲವು ನಟರ ಮೇಲೆ ತಮಗೆ ಕ್ರಶ್ ಇದೆ ಎಂದು ಶಿವಾಂಗಿ ಹೇಳಿದ್ದಾರೆ. ತಮಿಳಿನ 'ಸೂಪರ್ ಸಿಂಗರ್ ಸೀಸನ್ 7' ಶೋ ಮೂಲಕ ಶಿವಾಂಗಿ ಹೆಚ್ಚು ಜನಪ್ರಿಯರಾದರು.
ಅವರಿಗೆ ಮದುವೆಯಾಗಿದೆ, ಆದರೂ ಪರ್ವಾಗಿಲ್ಲ
"ನನ್ನ ಕ್ರಶ್ ಲಿಸ್ಟ್‌ನಲ್ಲಿ ಮೊದಲು ಉಣ್ಣಿ ಮುಕುಂದನ್, ಎರಡನೆಯವರು ಧ್ರುವ್ ವಿಕ್ರಮ್. ಮೂರನೇದಾಗಿ ಮಲಯಾಳಂನವ್ರು ತುಂಬಾ ಜನ ಇದ್ದಾರೆ. ನಟ ಆಸಿಫ್ ಅಲಿ, ಅವ್ರಿಗೆ ಮದುವೆ ಆಗಿದೆ, ಆದ್ರೂ ಪರವಾಗಿಲ್ಲ ಎಂದಿದ್ದಾರೆ. ಆಮೇಲೆ ಸಂದೀಪ್, 'ಪಡಕ್ಕಳಂ' ಸಂದೀಪ್. ಒಂದು ವೇಳೆ ಸಂದೀಪ್ ಎಲ್ಲಾದ್ರೂ ಸಿಕ್ಕಿದ್ರೆ, 'ನಾನು ನಿಮ್ಮ ದೊಡ್ಡ ಫ್ಯಾನ್, ನಿಮ್ಮ 'ಪಡಕ್ಕಳಂ' ಸಿನಿಮಾ ಅಂದ್ರೆ ನನಗೆ ಸಖತ್ ಇಷ್ಟ. ಅದ್ರಲ್ಲೂ ಆ ಮೂರು ಪಾತ್ರಗಳಂತೂ ತುಂಬಾ ಇಷ್ಟವಾಯ್ತು. ಅದನ್ನ ನೋಡಿ ನನಗೇನೋ ಒಂಥರಾ ಆಗೋಯ್ತು' ಅಂತ ಹೇಳ್ತೀನಿ," ಎಂದು ಶಿವಾಂಗಿ ನಗುತ್ತಾ ಹೇಳಿದರು. ಇತ್ತೀಚೆಗೆ ಕೇರಳದಲ್ಲಿ ನಡೆದ ಅವಾರ್ಡ್ ಶೋ ಒಂದರಲ್ಲಿ ಶಿವಾಂಗಿ ಈ ರೀತಿ ಮಾತನಾಡಿದ್ದಾರೆ.
ಸಿನಿಮಾದಲ್ಲೂ ಗಾಯಕಿ ಶಿವಾಂಗಿ ಸಕ್ರಿಯ
ಗಾಯನದ ಜೊತೆಗೆ ಶಿವಾಂಗಿ ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ. ಸಿಬಿ ಚಕ್ರವರ್ತಿ ನಿರ್ದೇಶನದ 'ಡಾನ್' ಚಿತ್ರದ ಮೂಲಕ ಇವರು ಸಿನಿರಂಗಕ್ಕೆ ಕಾಲಿಟ್ಟರು. 2022ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಿವಾಂಗಿ ನಟಿಸಿದ 'ಲಿಲ್ಲಿ' ಪಾತ್ರ ಎಲ್ಲರ ಗಮನ ಸೆಳೆದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

