- Home
- Entertainment
- Cine World
- Dating Chance: ಸನಾ ಡೇಟಿಂಗ್ ಪ್ರಪೋಸಲ್‌ಗೆ ಏನಂತಾರೆ 'ಬ್ಯಾಟಿಂಗ್ ಸ್ಟಾರ್'..? ಆ ನಟಿಯ 'ಗ್ರೀನ್ ಸಿಗ್ನಲ್' ವರ್ಕೌಟ್ ಆಗುತ್ತಾ?
Dating Chance: ಸನಾ ಡೇಟಿಂಗ್ ಪ್ರಪೋಸಲ್‌ಗೆ ಏನಂತಾರೆ 'ಬ್ಯಾಟಿಂಗ್ ಸ್ಟಾರ್'..? ಆ ನಟಿಯ 'ಗ್ರೀನ್ ಸಿಗ್ನಲ್' ವರ್ಕೌಟ್ ಆಗುತ್ತಾ?
ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಸನಾ ‘ಶ್ರೇಯಸ್ ಅಯ್ಯರ್ ಅಂದ್ರೆ ನನಗೆ ತುಂಬಾ ಇಷ್ಟ, ಅವರ ವ್ಯಕ್ತಿತ್ವ ಮತ್ತು ಮೈದಾನದಲ್ಲಿ ಅವರು ಆಡುವ ಶೈಲಿಗೆ ನಾನು ಫಿದಾ ಆಗಿದ್ದೇನೆ’ ಎಂದು ಬಹಿರಂಗವಾಗಿಯೇ ಪ್ರೀತಿಯ ಬಾಣ ಬಿಟ್ಟಿದ್ದಾರೆ. ಮುಂದೇನು ಎಣ ಬಗ್ಗೆ ಗುಸುಗುಸು ಪಿಸುಪಿಸು ಶುರವಾಗಿದೆ!

ಶ್ರೇಯಸ್ ಮೇಲೆ 'ಕ್ಲೀನ್ ಬೌಲ್ಡ್' ಆದ್ರೂ ಖ್ಯಾತ ನಟಿ!
ಭಾರತದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಎನ್ನುವುದು ಎರಡು ಕಣ್ಣುಗಳಿದ್ದಂತೆ. ಇವೆರಡೂ ಒಂದಾದಾಗ ಅಲ್ಲಿ ಸೃಷ್ಟಿಯಾಗುವ ಮ್ಯಾಜಿಕ್ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ ಜೋಡಿಗಳ ಸಾಲಿಗೆ ಈಗ ಮತ್ತೊಂದು ಹೊಸ "ಪ್ರೇಮ ಸಂಚಲನ" ಸೇರ್ಪಡೆಯಾಗುವ ಸೂಚನೆ ಸಿಕ್ಕಿದೆ.
ಟೀಮ್ ಇಂಡಿಯಾದ ಹ್ಯಾಂಡ್ಸಮ್ ಹಂಕ್ ಮತ್ತು ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮೇಲೆ ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ಅಕ್ಷರಶಃ ಮನಸೋತಿದ್ದಾರೆ! ಅಷ್ಟಕ್ಕೂ ಈ ನಟಿ ಯಾರು ಗೊತ್ತೇ? ಬಿಗ್ ಬಾಸ್ ಒಟಿಟಿ ಸೀಸನ್ ವಿಜೇತೆ ಮತ್ತು ಕಿರುತೆರೆಯ ಮೋಹಕ ನಟಿ ಸನಾ ಮಕ್ಬೂಲ್.
ಶ್ರೇಯಸ್‌ಗೆ 'ಗ್ರೀನ್ ಸಿಗ್ನಲ್' ಕೊಟ್ಟ ಸನಾ ಮಕ್ಬೂಲ್!
ಇತ್ತೀಚೆಗೆ ನಡೆದ ಜನಪ್ರಿಯ ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಸನಾ (Sana Makbul), ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಕೇಳುತ್ತಿದ್ದಂತೆಯೇ ನಾಚಿ ನೀರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅಂದ್ರೆ ನನಗೆ ತುಂಬಾ ಇಷ್ಟ, ಅವರ ವ್ಯಕ್ತಿತ್ವ ಮತ್ತು ಮೈದಾನದಲ್ಲಿ ಅವರು ಆಡುವ ಶೈಲಿಗೆ ನಾನು ಫಿದಾ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಪ್ರೀತಿಯ ಬಾಣ ಬಿಟ್ಟಿದ್ದಾರೆ.
"ಒಂದು ವೇಳೆ ಶ್ರೇಯಸ್ ಅಯ್ಯರ್ ನನ್ನನ್ನು ಡೇಟಿಂಗ್‌ಗೆ ಕರೆದರೆ ನಾನು ಸ್ವಲ್ಪವೂ ಯೋಚಿಸದೆ ಓಕೆ ಹೇಳುತ್ತೇನೆ. ಅವರೊಂದಿಗೆ ಡೇಟಿಂಗ್ ಮಾಡಲು ನನಗೆ ಯಾವುದೇ ಅಭ್ಯಂತರವಿಲ್ಲ" ಎಂದು ಮುಸಿಮುಸಿ ನಗುತ್ತಾ ಸನಾ ತಮ್ಮ ಹೃದಯದ ಮಾತನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಕುತೂಹಲ ಮೂಡಿಸಿದ್ದಾರೆ.
ನಟರ ಮೇಲೆ ಇಲ್ಲ ನಂಬಿಕೆ, ಕ್ರಿಕೆಟಿಗರೇ ಇವರಿಗೆ ಲಕ್ಕಿ!
ಸನಾ ಮಕ್ಬೂಲ್ ಅವರಿಗೆ ಸಿನಿಮಾ ರಂಗದ ನಟರ ಜೊತೆ ಡೇಟಿಂಗ್ ಮಾಡಲು ಸ್ವಲ್ಪವೂ ಇಷ್ಟವಿಲ್ಲವಂತೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. "ನಟನಾ ಕ್ಷೇತ್ರದಲ್ಲಿ ಜೀವನ ಅಷ್ಟೊಂದು ಸ್ಥಿರವಾಗಿರುವುದಿಲ್ಲ (No stability). ಇಂದು ಕೆಲಸ ಇರಬಹುದು, ನಾಳೆ ಇಲ್ಲದಿರಬಹುದು.
ಆದರೆ ಕ್ರಿಕೆಟಿಗರ ಜೀವನಶೈಲಿ ಮತ್ತು ಅವರ ಶಿಸ್ತು ನನಗೆ ಇಷ್ಟವಾಗುತ್ತದೆ" ಎಂದಿದ್ದಾರೆ. ಅಷ್ಟೇ ಅಲ್ಲದೆ, ಅರ್ಶ್‌ದೀಪ್ ಸಿಂಗ್ ಅವರ ಲುಕ್ ಕೂಡ ಇಷ್ಟವಂತೆ. ಆದರೆ ಅವರು ಆಲ್ರೆಡಿ ಕಮಿಟೆಡ್ ಎಂದು ಗೊತ್ತಾದ ಮೇಲೆ ಸನಾ ಅವರ ಸಂಪೂರ್ಣ ಗಮನ ಈಗ 'ಕಿಂಗ್' ಅಯ್ಯರ್ ಕಡೆಗೆ ತಿರುಗಿದೆ!
ಒಂದು ಕಡೆ ಪ್ರೇಮ ಪತ್ರ, ಇನ್ನೊಂದು ಕಡೆ ಪ್ಲೇಆಫ್ ಟೆನ್ಷನ್!
ನಟಿ ಸನಾ ಮಕ್ಬೂಲ್ ಇಷ್ಟೆಲ್ಲಾ ಪ್ರೇಮ ಪ್ರಸ್ತಾವನೆ ಸಲ್ಲಿಸುತ್ತಿದ್ದರೆ, ಮೈದಾನದಲ್ಲಿ ಶ್ರೇಯಸ್ ಅಯ್ಯರ್ ಪರಿಸ್ಥಿತಿ ಮಾತ್ರ ಬಾಣಲೆಯಿಂದ ಒಲೆಗೆ ಬಿದ್ದಂತಾಗಿದೆ. ಐಪಿಎಲ್ 2026ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿರುವ ಅಯ್ಯರ್, ಪ್ಲೇಆಫ್ ಹಂತಕ್ಕೆ ತಂಡವನ್ನು ಕೊಂಡೊಯ್ಯಲು ಬೆವರು ಸುರಿಸುತ್ತಿದ್ದಾರೆ. ತಂಡವು ಸತತ ಸೋಲುಗಳಿಂದ ಕಂಗೆಟ್ಟಿದ್ದು, ಈಗ ಮಾಡು ಇಲ್ಲವೇ ಮಡಿ ಪಂದ್ಯಗಳನ್ನು ಎದುರಿಸುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂದಿನ ಪಂದ್ಯ ಅಯ್ಯರ್ ಪಾಲಿಗೆ ಜೀವನ-ಮರಣದ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ, ಮೈದಾನದಲ್ಲಿ ರನ್ ಗಳಿಸಲು ಅಯ್ಯರ್ ಹೋರಾಡುತ್ತಿದ್ದರೆ, ಮೈದಾನದ ಹೊರಗೆ ಸುಂದರ ನಟಿಯರು ಅವರನ್ನೇ ನೋಡುತ್ತಾ ಕುಳಿತಿದ್ದಾರೆ. ಅಯ್ಯರ್ ಅವರ ಈ ಹೊಸ ಅಡ್ಮೈರರ್ ಬಗ್ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, "ಅಯ್ಯರ್ ಭಾಯ್, ಫೀಲ್ಡ್‌ನಲ್ಲಿ ಸಿಕ್ಸರ್ ಹೊಡೆಯೋದು ಇರಲಿ, ಇಲ್ಲಿ ಇವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ನೋಡಿ!" ಎಂದು ಟ್ರೋಲ್ ಮಾಡುತ್ತಿದ್ದಾರೆ.
ಸನಾ ಮಕ್ಬೂಲ್ ಅವರ ಈ ಮುಕ್ತ ಪ್ರೇಮ ನಿವೇದನೆಗೆ ನಮ್ಮ 'ಬ್ಯಾಟಿಂಗ್ ಸ್ಟಾರ್' ಹೇಗೆ ಪ್ರತಿಕ್ರಿಯಿಸುತ್ತಾರೆ? ಕ್ರಿಕೆಟ್ ಮತ್ತು ಸಿನಿಮಾದ ಈ ಹೊಸ ಲವ್ ಸ್ಟೋರಿ ಮದುವೆ ಮಂಟಪದವರೆಗೆ ಹೋಗುತ್ತಾ? ಕಾದು ನೋಡೋಣ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

