ಸಮಂತಾ Valentine's Day ಯಾರು ಜೊತೆ ಸೆಲಬ್ರೆಟ್ ಮಾಡಿದ್ದಾರೆ ನೋಡಿ!
ಸಾಮಾಜಿಕ ಮಾಧ್ಯಮ ಪುಟಗಳು ವ್ಯಾಲೆಂಟೈನ್ಸ್ ಡೇ (Valentine's Day) ಫೋಟೋಗಳು ಮತ್ತು ಪ್ರಸಿದ್ಧ ಜೋಡಿಗಳ ವೀಡಿಯೊಗಳಿಂದ ತುಂಬಿವೆ. ಕೆಲವರು ಪ್ರೀತಿ ತುಂಬಿದ ಸಂದೇಶಗಳನ್ನೂ ಹಂಚಿಕೊಂಡಿದ್ದಾರೆ. ಕೆಲವರು ಡಿನ್ನರ್ ಡೇಟ್‌ಗಳಿಗಾಗಿ ಹೊರಗೆ ಹೋದರು, ಮತ್ತು ಇತರರು ತಮ್ಮ ಪ್ರೀತಿಗಾಗಿ ಮನೆಯಲ್ಲಿ ಸರ್‌ಪ್ರೈಸ್ ಪ್ಲಾನ್ ಮಾಡಿದ್ದರು. ಇದರ ನಡುವೆ ಟಾಲಿವುಡ್ (Tollywood) ನಟಿ ಸಮಂತಾ ರುತ್ ಪ್ರಭು (Samantha Ruth Prabhu ) ಪ್ರೇಮಿಗಳ ದಿನವನ್ನು ಹೇಗೆ ಆಚರಿಸಿದರು ಗೊತ್ತಾ? ವಿವರ ಇಲ್ಲಿದೆ.

ದಿ ಫ್ಯಾಮಿಲಿ ಮ್ಯಾನ್ (The Family Man) ಸ್ಟಾರ್ ಸಮಂತಾ ರುತ್ ಪ್ರಭು ಅವರು ಈ ವರ್ಷ ಪ್ರೇಮಿಗಳ ದಿನವನ್ನು ವಿಶಿಷ್ಟ ವಿಧಾನದಲ್ಲಿ ಆಚರಿಸಿದ್ದಾರೆ. ಸಮಂತಾ ಪ್ರೇಮಿಗಳ ದಿನವನ್ನು ಹೇಗೆ ಆಚರಿಸಿದರು ಎಂಬುದನ್ನು ಸೋಶಿಯಲ್ ಮೀಡಿಯಾ (Social Media)ದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷ ಪತಿ ನಾಗ ಚೈತನ್ಯ (Naga Chaithanya) ಅವರಿಂದ ಬೇರ್ಪಟ್ಟ ನಂತರ ಸಮಂತಾ ರುತ್ ಪ್ರಭು ಈ ವರ್ಷ ಯಾರ ಜೊತೆ ಪ್ರೇಮಿಗಳ ದಿನವನ್ನು ಆಚರಿಸಿದರು ಗೊತ್ತಾ? ಸಮಂತಾ ತಮ್ಮ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಷನ್‌ನ ಎರಡು ಫೋಟೋಗಳನ್ನು ಸಹ ಅಪ್‌ಡೇಟ್ ಮಾಡಿದ್ದಾರೆ.
ಸಮಂತಾ ರುತ್ ಪ್ರಭು ಅವರು ತಮ್ಮ Instagram ಸ್ಟೋರಿಗಳ ಮೂಲಕ ವ್ಯಾಲೆಂಟೈನ್ಸ್ ಡೇ ಅಂದು ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬೀದಿ ನಾಯಿಯ ಹೊಟ್ಟೆ ಮಸಾಜ್ ಮಾಡುತ್ತಿರುವ ಫೋಟೋವನ್ನು ನಟಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಶೇರ್ ಮಾಡಿರುವ ಫೋಟೋ ಮೇಲೆ 'ಪಪ್ಪಿ ಲವ್' ಎಂದು ಬರೆದಿರುವ ಸ್ಟಿಕ್ಕರ್ ಅನ್ನು ಸಹ ಬಳಸಿದ್ದಾರೆ.
ಪ್ರೀತಿಯ ದಿನದಂದು ಪ್ರೀತಿಯನ್ನು ಹರಡಲು ಸಮಂತಾ ಈ ವಿಶೇಷ ಮತ್ತು ಕ್ಯೂಟ್ ವಿಧಾನವನ್ನು ಆರಿಸಿಕೊಂಡರು. ಇದಲ್ಲದೆ, ಸಮಂತಾ ತನ್ನ ಸ್ನೇಹಿತರಿಂದ ಹೂಗುಚ್ಛ ಮತ್ತು ಸ್ಟ್ರಾಬೆರಿಗಳನ್ನು ಸಹ ಗಿಫ್ಟ್ ಆಗಿ ಪಡೆದರು.
ಇತ್ತೀಚೆಗಷ್ಟೇ ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಸಮಂತಾ ಒಂಟಿಯಾಗಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರು ನಟರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು.
ಸಮಂತಾ ಮತ್ತು ನಾಗ ಚೈತನ್ಯ 2009ರಲ್ಲಿ ತಮ್ಮ ಚಿತ್ರ ಯೇ ಮಾಯಾ ಚೇಸಾವೆ ಸೆಟ್‌ನಲ್ಲಿ ಭೇಟಿಯಾದರು. 2014ರಲ್ಲಿ ಆಟೋ ನಗರ ಸೂರ್ಯ ಚಿತ್ರೀಕರಣದ ನಂತರ ಡೇಟಿಂಗ್ ಪ್ರಾರಂಭಿಸಿದರು. ಈ ಜೋಡಿ 2017ರಲ್ಲಿ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.