- Home
- Entertainment
- Cine World
- Samantha To Sign another Special Song: ವಿಜಯ್ ದೇವರಕೊಂಡ ಜೊತೆ ಸಮಂತಾ ಐಟಂ ಸಾಂಗ್?
Samantha To Sign another Special Song: ವಿಜಯ್ ದೇವರಕೊಂಡ ಜೊತೆ ಸಮಂತಾ ಐಟಂ ಸಾಂಗ್?
ಊ ಅಂಟಾವಾ ಹಾಡಿನ ಬೆನ್ನಲ್ಲೇ ಸಮಂತಾಗೆ ಹೆಚ್ಚಿದ ಡಿಮ್ಯಾಂಡ್ ಬಾಲಿವುಡ್ ಸಿನಿಮಾ ಲಿಗರ್‌ನಲ್ಲಿ ಸೊಂಟ ಬಳುಕಿಸಲಿದ್ದಾರಾ ಸಮಂತಾ ? ರಶ್ಮಿಕಾ ಬಾಯ್‌ಫ್ರೆಂಡ್ ಜೊತೆ ಸಮಂತಾ ಐಟಂ ಸಾಂಗ್?

ಸಮಂತಾ ರುಥ್ ಪ್ರಭು ಅವರ ಮೊದಲ ಐಟಂ ಸಾಂಗ್ ಊ ಅಂಟಾವಾ ಮಾವಾ ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ ಸಮಂತಾ ತಮ್ಮ ಬೋಲ್ಡ್ ಲುಕ್ ಹಾಗೂ ಡ್ಯಾನ್ಸ್‌ನಿಂದ ಸುದ್ದಿಯಲ್ಲಿದ್ದಾರೆ.
ಚಿತ್ರತಂಡ ಬಿಡುಗಡೆ ಮಾಡುವ ವೀಡಿಯೋ ಸಾಂಗ್‌ಗಾಗಿ ಹಲವರು ಬಹಳ ಸಮಯ ಕಾಯುತ್ತಿದ್ದರು. ಸಿನಿಮಾ ರಿಲೀಸ್ ಆದ ಮೇಲಂತೂ ಹಾಡಿನ ತುಣುಕು ಎಲ್ಲೆಡೆ ಹರಿದಾಡುತ್ತಿದೆ.
ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯಂತೆ ಸ್ಯಾಮ್ ಮತ್ತೊಂದು ಸ್ಪೆಷಲ್ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೌದು ಸಮಂತಾ ಅಭಿಮಾನಿಗಳಿಗೆ ಖುಷಿಕೊಟ್ಟಿರೋ ಈ ಸುದ್ದಿ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ.
ಐಟಂ ಸಾಂಗ್‌ಗಾಗಿ ವಿಜಯ್ ದೇವರಕೊಂಡ ಅವರ ಲಿಗರ್ ತಯಾರಕರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅನನ್ಯಾ ಪಾಂಡೆ ನಟಿಸಿರೋ ಲಿಗರ್ ವಿಜಯ್ ದೇವರಕೊಂಡ ಅವರ ಬಾಲಿವುಡ್ ಡಿಬಟ್ ಸಿನಿಮಾ.
ಐಟಂ ಸಾಂಗ್‌ಗಾಗಿ ವಿಜಯ್ ದೇವರಕೊಂಡ ಅವರ ಲಿಗರ್ ತಯಾರಕರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಅನನ್ಯಾ ಪಾಂಡೆ ನಟಿಸಿರೋ ಲಿಗರ್ ವಿಜಯ್ ದೇವರಕೊಂಡ ಅವರ ಬಾಲಿವುಡ್ ಡಿಬಟ್ ಸಿನಿಮಾ.
ಈ ಹಾಡು ಅಭಿಮಾನಿಗಳಿಗೆ ಟ್ರೀಟ್ ಆಗಿ ಹೊರಹೊಮ್ಮಿದ್ದರಿಂದ 2021 ರ ಅತ್ಯಂತ ಹೆಚ್ಚು ವೈರಲ್ ಹಾಡುಗಳಲ್ಲಿ ಒಂದಾಗಿರುವುದರಿಂದ, ಲಿಗರ್ ತಯಾರಕರು ಈ ವಿಶೇಷ ಹಾಡಿಗಾಗಿ ಸಮಂತಾ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಸ್ಯಾಮ್ ಮತ್ತೊಂದು ಐಟಂ ಸಾಂಗ್ ಸೈನ್ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ನೋಡಬೇಕಾಗಿದೆ. ಮತ್ತೊಂದೆಡೆ, ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಸಮಂತಾ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಯಾಮ್ ಪ್ರಸ್ತುತ ಹಾಲಿವುಡ್ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ಅವರ ಮುಂಬರುವ ಚಿತ್ರದಲ್ಲಿ ದ್ವಿಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ 'ಅರೇಂಜ್‌ಮೆಂಟ್ಸ್ ಆಫ್ ಲವ್' ಎಂದು ಹೆಸರಿಡಲಾಗಿದೆ.
ಇದನ್ನು ಭಾರತೀಯ ಬರಹಗಾರ ಟೈಮೆರಿ ಎನ್. ಮುರಾರಿ ಬರೆದಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಸೀಸನ್ 2 ರಲ್ಲಿ ಸಮಂತಾ ಅದ್ಭುತ ಅಭಿನಯದ ನಂತರ ನಟಿ ನಾರ್ತ್‌ನಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ.
ನಟಿ ತಮ್ಮ 2 ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ವಿಘ್ನೇಶ್ ಶಿವನ್ ಅವರ 'ಕಾತುವಾಕುಲಾ ರಂಡ್ ಕಾದಲ್' ಹಾಗೂ ಗುಣಶೇಖರ್ ನಿರ್ದೇಶನದ 'ಶಾಕುಂತಲಂ'ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ