ಕೋಟಿಯಲ್ಲಿ ಸಂಭಾವನೆ ಪಡೀತಿದ್ದ ಬಾಲಿವುಡ್ ನಟಿ; ಸ್ಟಾರ್ಡಮ್ಗೆ ಸೈಡ್ಲೈನ್ ಆಗ್ತೀವಿ ಅಂತ ಸೂಪರ್ಸ್ಟಾರ್ಗಳೇ ಹೆದರಿದ್ರು!
ಬಾಲಿವುಡ್ನಲ್ಲಿ ಹಲವಾರು ವರ್ಷಗಳ ಹಿಂದೆ ನಟರು ಮಾತ್ರ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಿದ್ದರು. ಇಂಥಾ ಸಮಯದಲ್ಲಿಯೂ ಬಾಲಿವುಡ್ನಲ್ಲಿ ಅನೇಕ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟಿಯೊಬ್ಬರಿದ್ದರು. ಇವರ ಜೊತೆ ನಟಿಸಲು ಸೂಪರ್ಸ್ಟಾರ್ಗಳೇ ಹೆದರ್ತಿದ್ರು.
ಬಾಲಿವುಡ್ನಲ್ಲಿ ನಟಿಯರು ಎಷ್ಟೇ ದೊಡ್ಡ ಪಾತ್ರದಲ್ಲಿ ನಟಿಸಿದರೂ ನಟರಿಗಿಂತ ಕಡಿಮೆ ಸಂಭಾವನೆ ಪಡೆಯುವ ಕಾಲವೊಂದಿತ್ತು. ಹಲವಾರು ವರ್ಷಗಳ ಹಿಂದೆ ನಟರು ಮಾತ್ರ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಿದ್ದರು. ಇಂಥಾ ಸಮಯದಲ್ಲಿಯೂ ಬಾಲಿವುಡ್ನಲ್ಲಿ ಅನೇಕ ನಟರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟಿಯೊಬ್ಬರಿದ್ದರು.
ಹಲವು ಫೇಮಸ್ ನಟರು ಚಿತ್ರರಂಗದಲ್ಲಿ ಬೇಡಿಕೆಯಲ್ಲಿದ್ದ ಸಮಯದಲ್ಲಿಯೂ ಈ ನಟಿ, ಚಿತ್ರವೊಂದಕ್ಕೆ ಭರ್ತಿ 1 ಕೋಟಿ ರೂ.ಗಳನ್ನು ಪಡೆದರು. ಹಿಂದಿನ ಕಾಲದಲ್ಲಿ ಕೋಟಿಯಲ್ಲಿ ಪೇಮೆಂಟ್ ಪಡೆದ ಭಾರತದ ಮೊದಲ ನಟಿ ಕೂಡಾ ಹೌದು. ಇಲ್ಲಿ ನಾವು ಹೇಳುತ್ತಿರುವುದು ಬಾಲಿವುಡ್ನ ಸೂಪರ್ಸ್ಟಾರ್ ಶ್ರೀದೇವಿ ಬಗ್ಗೆ.
ಬಾಲಿವುಡ್ನಲ್ಲಿ ಶ್ರೀದೇವಿ ಅವರನ್ನು 'ಲೇಡಿ ಅಮಿತಾಬ್ ಬಚ್ಚನ್' ಎಂದು ಕರೆಯುತ್ತಿದ್ದರು. ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಹಲವು ನಟ, ನಿರ್ಮಾಪಕರೊಂದಿಗೆ ಶ್ರೀದೇವಿ ಹೆಸರು ಥಳುಕು ಹಾಕಿಕೊಂಡಿತ್ತು. ವರದಿಗಳ ಪ್ರಕಾರ, ಶ್ರೀದೇವಿ ತನ್ನ ಸಹನಟ ಜೀತೇಂದ್ರ ಅವರೊಂದಿಗೆ ಸಂಬಂಧ ಹೊಂದಿದ್ದರು.
ಒಬ್ಬ ಮಹಿಳೆಯ ಮನೆ ಒಡೆದು ಸ್ವಂತ ಮನೆ ರೂಪಿಸಿಕೊಳ್ಳುವ ಹುಡುಗಿ ನಾನಲ್ಲ ಎಂದು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಆದರೆ ಕೊನೆಗೂ ಶ್ರೀದೇವಿ ಈಗಾಗಲೇ ವಿವಾಹವಾಗಿದ್ದ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾಗಲು ನಿರ್ಧರಿಸಿದರು.
ಶ್ರೀದೇವಿ ಆ ಕಾಲದ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಅವರ ಸ್ಟಾರ್ಡಮ್ ಎಷ್ಟರ ಮಟ್ಟಕ್ಕೆ ತಲುಪಿತ್ತು ಎಂದರೆ ಜನರು ಅವರನ್ನು ತೆರೆಯ ಮೇಲೆ ನೋಡಲು ಮಾತ್ರ ಚಿತ್ರಮಂದಿರಗಳಿಗೆ ಬರುತ್ತಿದ್ದ ಅಭಿಮಾನಿಗಳಿದ್ದರು. ಚಲನಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳಿಗೆ ಸಹಿ ಹಾಕಲು ಅವರ ಮನೆಯಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದರು,
ಶ್ರೀದೇವಿ ಆ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಗುರುತಿಸಿಕೊಂಡಿದ್ದರು. ಈಕೆ ತನ್ನ ಸಿನಿಮಾಗಳಿಗೆ ಕೋಟಿಗಟ್ಟಲೆ ಶುಲ್ಕ ಪಡೆಯುತ್ತಿದ್ದರು. ಆಗಿನ ಕೆಲವು ಪುರುಷ ಕಲಾವಿದರು ಸಹ ಅಷ್ಟೊಂದು ಹಣ ಗಳಿಸುತ್ತಿರಲಿಲ್ಲ. ಸಲ್ಮಾನ್ ಖಾನ್ ಅವರಂತಹ ಸೂಪರ್ ಸ್ಟಾರ್ ಕೂಡ ಶ್ರೀದೇವಿಯ ಮುಂದೆ ತಾವು ನಟಿಸಿದರೆ ಜನರು ಗಮನಿಸುವುದಿಲ್ಲ ಎಂದು ಭಾವಿಸಿದ್ದರಿಂದ ಅವರ ಜೊತೆ ಕೆಲಸ ಮಾಡಲು ಹೆದರುತ್ತಿದ್ದರು ಎನ್ನಲಾಗಿದೆ.
ಹೀಗಿದ್ದೂ, ಸಲ್ಮಾನ್ ಮತ್ತು ಶ್ರೀದೇವಿ 'ಚಂದ್ರಮುಖಿ' ಮತ್ತು 'ಚಂದ್ ಕಾ ತುಕ್ಡಾ' ಈ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ಮಾಡಿದರು. ಆದರೆ ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಐದು ದಶಕಗಳ ತನ್ನ ವೃತ್ತಿಜೀವನದಲ್ಲಿ, ಶ್ರೀದೇವಿ ಅಂತಹ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಅದನ್ನು ಅವರ ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ.
ಅವರು ಕೊನೆಯ ಬಾರಿಗೆ 'ಮಾಮ್' ಚಿತ್ರದಲ್ಲಿ ಕಾಣಿಸಿಕೊಂಡರು. ಶ್ರೀದೇವಿ ತನ್ನ 54ನೇ ವಯಸ್ಸಿನಲ್ಲಿ ಬಾತ್ಟಬ್ನಲ್ಲಿ ಬಿದ್ದು ಸಾವನ್ನಪ್ಪಿದರು. ಆದರೂ ಇವತ್ತಿಗೂ ಬಾಲಿವುಡ್ನ ಲೇಡಿ ಸೂಪರ್ಸ್ಟಾರ್ ಎಂದೇ ಗುರುತಿಸಿಕೊಂಡಿದ್ದಾರೆ.