MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮಗಳಿಗೆ ಅತ್ಯಾಚಾರ ಬೆದರಿಕೆ: ವಿಕೃತ ಮನಸ್ಸುಗಳಿಗೆ ಅನುಷ್ಕಾ ಶರ್ಮಾ ಹೇಳಿದ್ದಿಷ್ಟು!

ಮಗಳಿಗೆ ಅತ್ಯಾಚಾರ ಬೆದರಿಕೆ: ವಿಕೃತ ಮನಸ್ಸುಗಳಿಗೆ ಅನುಷ್ಕಾ ಶರ್ಮಾ ಹೇಳಿದ್ದಿಷ್ಟು!

ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ 10 ವಿಕೆಟ್‌ಗಳ ಸೋಲು ಕಂಡ ನಂತರ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) ಮೇಲೆ ಧರ್ಮದ ಆಧಾರದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮಾಡಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಇಂತಹ ಟೀಕೆಗಳ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದರು ಮತ್ತು ಶಮಿಗೆ ಪರ ನಿಂತಿದ್ದರು. ಇದರ ಬೆನ್ನಲ್ಲೇ ನೆಟ್ಟಿಗನೊಬ್ಬ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kolhi) ಅವರ 10 ತಿಂಗಳ ಮಗಳು ವಾಮಿಕಾಗೆ (Vamika) ಅತ್ಯಾಚಾರ (Rape) ಕೊಲೆ ಬೆದರಿಕೆಯನ್ನು (death threats) ಹಾಕಿದ್ದಾನೆ. ಇದಕ್ಕೆ ಅನುಷ್ಕಾ ತಿರುಗೇಟು ನೀಡಿದ್ದಾರೆ. 

2 Min read
Suvarna News | Asianet News
Published : Nov 04 2021, 03:46 PM IST
Share this Photo Gallery
  • FB
  • TW
  • Linkdin
  • Whatsapp
110

ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ ಸೋಲು ಕಂಡ ನಂತರ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಮೇಲೆ ಧರ್ಮದ ಆಧಾರದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮಾಡಿದ್ದರು. ನಂತರ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಶಮಿಯ ಪರ ನಿಂತರು ಮತ್ತು ಟ್ರೋಲ್‌ಗಳನ್ನು ಖಂಡಿಸಿದ್ದರು.

210

‘ಬೆನ್ನು ಮೂಳೆ ಹೊಂದಿಲ್ಲದ ಕೆಲವು ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿಯ ಕುರಿತು ಅವಹೇಳನ ಮಾಡುತ್ತಿದ್ದಾರೆ. ಧರ್ಮವನ್ನು ಮುಂದಿಟ್ಟು ಟೀಕಿಸುವುದು ಮನುಷ್ಯತ್ವದ ಅತ್ಯಂತ ಕೀಳು ಮನೋಭಾವ’ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

310
वामिका कोहली

वामिका कोहली

ಧರ್ಮ ಅತ್ಯಂತ ಪವಿತ್ರ ಹಾಗೂ ವೈಯುಕ್ತಿಕ ವಿಷಯ. ನಾವಿಲ್ಲಿ ಮೈದಾನದಲ್ಲಿ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅರಿವಿಲ್ಲದೇ ಕೆಲವು ಜನರು ಹೀಗೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ, ಎಂದಿದ್ದರು ಭಾರತದ ಕ್ರಿಕೆಟ್ ಕ್ಯಾಪ್ಟನ್.  ಎಂದು ಕೊಹ್ಲಿ ಹೇಳಿದ್ದರು. ವಿರಾಟ್ ಕೊಹ್ಲಿ ಈ ರೀತಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ನೆಟ್ಟಿಗನೊಬ್ಬ ತನ್ನ ವಿಕೃತ ಮನೋಭಾವವನ್ನು ತೋರಿಸಿದ್ದಾನೆ.

410

ನೆಟ್ಟಿಗನೊಬ್ಬ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ  ಅವರ 10 ತಿಂಗಳ ಮಗಳು ವಾಮಿಕಾಗೆ ಅತ್ಯಾಚಾರ  ಸಾವಿನ ಬೆದರಿಕೆಯನ್ನು  ಹಾಕಿದ್ದಾನೆ.  ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾಗೆ ಆನ್‌ಲೈನ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆಗಳು ಬಂದ ನಂತರ ಟಿವಿ ನಟ ಅಭಿನವ್ ಶುಕ್ಲಾ ಅವರ ಬೆಂಬಲಕ್ಕೆ ಬಂದರು. 

 

510

ಆನ್‌ಲೈನ್ ಬ್ಯಾಶಿಂಗ್ ವಿರುದ್ಧ ಮೊಹಮ್ಮದ್ ಶಮಿಯನ್ನು ಬೆಂಬಲಿಸಿದ ನಂತರ ಟ್ರೋಲ್‌ಗಳು ವಿರಾಟ್ ಅವರನ್ನು ಗುರಿಯಾಗಿಸಲು ಪ್ರಾರಂಭಿಸಿದರು. 2021 ರ ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಎರಡು ಆರಂಭಿಕ ಪಂದ್ಯಗಳನ್ನು ಸೋತ ನಂತರ ಭಾರತೀಯ ಕ್ರಿಕೆಟ್ ತಂಡದ ಫ್ಯಾನ್ಸ್‌  ವಿರುದ್ಧ  ಅಕ್ರೋಶಗೊಂಡಿದ್ದಾರೆ.

610

ವಿರಾಟ್ ಮಗುವಿನ ಮೇಲಿನ ರೇಪ್‌ ಕೊಲೆಯ ಬೆದರಿಕೆಯನ್ನು  ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಖಂಡಿಸಲಾಗುತ್ತಿದೆ. ಪಾಕಿಸ್ತಾನಿ ವೇಗಿ ಮೊಹಮ್ಮದ್ ಅಮೀರ್ ಮತ್ತು ಮಾಜಿ ಪಾಕಿಸ್ತಾನಿ ನಾಯಕ ಇಂಜಮಾಮ್-ಉಲ್-ಹಕ್ ಸಹ ವಿರಾಟ್‌ ಕೊಹ್ಲಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಇಂಜಮಾಮ್-ಉಲ್-ಹಕ್ ಇದನ್ನು 'ನಾಚಿಕೆಗೇಡಿನ  ಕೃತ್ಯ' ಎಂದು ಖಂಡಿಸಿದ್ದಾರೆ.

710

ಈ ಟ್ರೋಲ್‌ಗಳಿಗೆ ತಿರುಗೇಟು ನೀಡಿದ  ವಿರಾಟ್‌ ಪತ್ನಿ ಅನುಷ್ಕಾ  ವಯಸ್ಕರ ಕೆಟ್ಟ ಆಲೋಚನೆಗಳನ್ನು ಸರಿಪಡಿಸುವುದಕ್ಕಿಂತ ಬಲಶಾಲಿ ಮಕ್ಕಳನ್ನು ತಯಾರು ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ಅನುಷ್ಕಾ ಅವರ ಪೋಸ್ಟ್‌ನಲ್ಲಿ, Coach it's easier to build strong children than to repair broken men' ಎಂದು ಬರೆದಿದ್ದಾರೆ.

810

ದೆಹಲಿ ಮಹಿಳಾ ಆಯೋಗವು ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಠಿಣ ಮತ್ತು ತಕ್ಷಣದ ಕ್ರಮವನ್ನು ಆರಂಭಿಸಿದೆ. ಈ ನಡುವೆ  ಬಿಗ್ ಬಾಸ್ 14 ರ ಸ್ಪರ್ಧಿ ಅಭಿನವ್ ಶುಕ್ಲಾ   ಟ್ವಿಟ್ ಮಾಡಿ ಈ ಕೃತ್ಯವನ್ನು ಖಂಡಿಸಿ ವಿರಾಟ್‌ ಮತ್ತು ಅನುಷ್ಕಾರನ್ನು ಬೆಂಬಲಿಸಿದ್ದಾರೆ.

910

ಅನುಷ್ಕಾ ಮತ್ತು ವಿರಾಟ್ ಅವರ ಅಭಿಮಾನಿಗಳು ಕೂಡ ಬೇಬಿ ವಾಮಿಕಾ ಅವರನ್ನು ಗುರಿಯಾಗಿಸಿರುವ ಟ್ರೋಲ್‌ಗಳನ್ನು ಖಂಡಿಸಿದ್ದಾರೆ. 'ಇಂತಹ ಮನಸ್ಥಿತಿಯ ಜನರು ನಮ್ಮ ಸಮಾಜದಲ್ಲಿ ಇನ್ನೂ ಇದ್ದಾರೆ, ಕೆಲವೊಮ್ಮೆ ನಮ್ಮ ದೇಶದಲ್ಲಿ ಸಾಮಾಜಿಕ ಮಾಧ್ಯಮ ಟ್ರೋಲರ್‌ಗಳನ್ನು ಪತ್ತೆಹಚ್ಚಲು ಮತ್ತು ಅ ಅವರನ್ನು ಬಂಧಿಸಲು ಸರಿಯಾದ ವ್ಯವಸ್ಥೆ ಇರಬೇಕು ಎಂದು ನನಗೆ ಅನಿಸುತ್ತದೆ' ಎಂದು ಕಾಮೆಂಟ್‌ ಮಾಡಿದ್ದಾರೆ. 

1010

ಭಾರತೀಯ ಕ್ರಿಕೆಟಿಗನೊಬ್ಬನ ಪುಟ್ಟ ಮಗುವಿನ ಮೇಲೆ ಈ ರೀತಿ ಬೆದರಿಕೆ  ಬರುತ್ತಿರುತ್ತಿರುವುದು ಇದೇ ಮೊದಲಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 2020 ರ ಸಮಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ  ಅವರ ಕಳಪೆ ಪ್ರದರ್ಶನದ ನಂತರ ಅವರ ಮಗಳು ಝಿವಾ ಮೇಲೆ ಸಹ ಅತ್ಯಾಚಾರದ ಬೆದರಿಕೆಗಳನ್ನು ಬಂದಿದ್ದವು.

About the Author

SN
Suvarna News
ಬಾಲಿವುಡ್
ಟೀಮ್ ಇಂಡಿಯಾ
ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved