ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ ಬಾಲಿವುಡ್ ತಾರೆಯರು: ಫೋಟೋಸ್
ಮನೀಷ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ತಾರೆಗಳು ಒಬ್ಬರಿಗಿಂತ ಒಬ್ಬರು ಚಂದ ಚಂದದ ಸಂಪ್ರದಾಯಿಕ ಬಟ್ಟೆ ತೊಟ್ಟು ಮಿಂಚಿದ್ದು. ರೇಖಾರಿಂದ ಹಿಡಿದು ಕಿಯಾರಾ-ಸಿದ್ಧಾರ್ಥ್ ಜೋಡಿವರೆಗೂ ಎಲ್ಲರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.
ರೇಖಾ ಅವರ ಸ್ಟೈಲಿಶ್ ಲುಕ್
ಬಾಲಿವುಡ್‌ನಲ್ಲಿ ಈಗ ದೀಪಾವಳಿ ಪಾರ್ಟಿ ಶುರುವಾಗಿದೆ. ನಿನ್ನೆ ರಾತ್ರಿ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಯಲ್ಲಿ 70ರ ಹರೆಯದ ರೇಖಾ ಎಂದಿನಂತೆ ನವವಧುವಿನಂತೆ ಸಿಂಗರಿಸಿಕೊಂಡು ಬಂದಿದ್ದರು. ಕೇಸರಿ ಬಣ್ಣದ ಬನಾರಸಿ ಸೀರೆ, ನೆತ್ತಿಬೊಟ್ಟು, ಭಾರವಾದ ಕಿವಿಯೋಲೆಗಳು ಮತ್ತು ಕೈ ತುಂಬಾ ಬಳೆಗಳನ್ನು ಧರಿಸಿದ್ದ ರೇಖಾ ಅಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಕಿಯಾರಾ ಮತ್ತು ಸಿದ್ಧಾರ್ಥ್
ಹಾಗೆಯೇ ಬಾಲಿವುಡ್‌ನ ನವಜೋಡಿ ಕಿಯಾರಾ ಅಡ್ವಾಣಿ ಪತಿ ಸಿದ್ಧಾರ್ಥ್ ಮಲ್ಹೋತ್ರ ಜೊತೆ ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಗೆ ಬಂದಿದ್ದರು. ಇಬ್ಬರೂ ಒಂದೇ ರೀತಿಯ ಒಬ್ಬರಿಗೊಬ್ಬರಿಗೆ ಮ್ಯಾಚ್ ಆಗುವಂತಹ ಬಣ್ಣದ ಉಡುಪುಗಳನ್ನು ಧರಿಸಿದ್ದರು. ಇಬ್ಬರೂ ಅದ್ಭುತವಾಗಿ ಕಾಣುತ್ತಿದ್ದರು.
ಅರ್ಪಿತಾ ಮತ್ತು ಆಯುಷ್
ಹಾಗೆಯೇ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಪತಿ ಆಯುಷ್ ಶರ್ಮಾ ಕೂಡ ಮನೀಷ್ ಮಲ್ಹೋತ್ರ ಅವರ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಇಬ್ಬರೂ ತಮ್ಮ ಲುಕ್‌ನಿಂದ ಎಲ್ಲರನ್ನೂ ಆಕರ್ಷಿಸಿದರು.
ಶಾಹಿದ್, ಮೀರಾ ಮತ್ತು ಗೌರಿ
ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಾಜಪೂತ್ ಜೊತೆ ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಗೆ ಆಗಮಿಸಿದ್ದರು ಇಬ್ಬರೂ ಚಿನ್ನದ-ಬೆಳ್ಳಿ ಮಿಶ್ರಿತ ಬಣ್ಣದ ಸಂಯೋಜನೆಯ ಉಡುಪುಗಳನ್ನು ಧರಿಸಿದ್ದರು. ಇದೇ ಪಾರ್ಟಿಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಚಿನ್ನದ ಬಣ್ಣದ ಅಂಚುಳ್ಳ ಕಪ್ಪು ಸೀರೆಯಲ್ಲಿ ಕಾಣಿಸಿಕೊಂಡರು.
ಸಂಜಯ್ ಮತ್ತು ಮಹಿಪ್
ಸಂಜಯ್ ಕಪೂರ್ ಪತ್ನಿ ಮಹಿಪ್ ಕಪೂರ್ ಜೊತೆ ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಕಪ್ಪು ಬಣ್ಣದ ಸಂಪ್ರದಾಯಿಕ ಧಿರಿಸಿನಲ್ಲಿ ಬಂದ ಈ ಜೋಡಿ ಛಾಯಾಗ್ರಾಹಕರಿಗೆ ಫೋಸ್ ಕೊಟ್ಟರು.
ದಿಶಾ ಮತ್ತು ಕಾರ್ತಿಕ್
ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಯಲ್ಲಿ ದಿಶಾ ಪಟಾನಿ ಕೂಡ ಮಿಂಚಿದರು. ಚಿನ್ನದ ಬಣ್ಣದ ಸೀರೆ ಮತ್ತು ನ್ಯೂಡ್ ಮೇಕಪ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಹಾಗೆಯೇ ಕಾರ್ತಿಕ್ ಆರ್ಯನ್ ಕಪ್ಪು ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು.
ಅಂಗದ್, ನೇಹಾ ಮತ್ತು ಪೂಜಾ
ಅಂಗದ್ ಬೇಡಿ ಪತ್ನಿ ನೇಹಾ ಧೂಪಿಯಾ ಜೊತೆ ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಗೆ ಬಂದಿದ್ದರು. ಈ ಜೋಡಿ ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡರು. ಪೂಜಾ ಹೆಗ್ಡೆ ಕೂಡ ಈ ಸಂದರ್ಭದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಹುಮಾ ಮತ್ತು ಫಾತಿಮಾ
ಮನೀಷ್ ಮಲ್ಹೋತ್ರ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡಡ್ ನಟಿ ಹುಮಾ ಖುರೇಷಿ ಮತ್ತು ಫಾತಿಮಾ ಸನಾ ಶೇಖ್ ನಗುತ್ತಾ ಛಾಯಾಗ್ರಾಹಕರಿಗೆ ಫೋಸ್ ಕೊಟ್ಟರು.