ಸುಶಾಂತ್ ಸಿಂಗ್ ರಜಪೂತ್ ಆತ್ಮ*ಹತ್ಯೆ ಮಾಡಿಕೊಂಡಿಲ್ಲ! ಕೊಲೆ ಹಿಂದಿದ್ಯಾ ಇವರ ಕೈವಾಡ?
ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಆರು ವರ್ಷ ಕಳೆದಿದೆ. ಈಗ್ಲೂ ಅವರದ್ದು ಆತ್ಮ*ಹತ್ಯೆಯಾ ಇಲ್ಲ ಕೊಲೆಯಾ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆತ್ಮ*ಹತ್ಯೆ ಅಂತ ಕೇಸ್ ಮುಗಿಸಿದ್ರೂ ಇದು ಕೊಲೆ ಎನ್ನುವವರ ಸಂಖ್ಯೆ ಹೆಚ್ಚಿದೆ.

ಸುಶಾಂತ್ ಸಿಂಗ್ ರಜಪೂತ್ ಪುಣ್ಯತಿಥಿ
ಜೂನ್ 14 ಬಂದ್ರೆ ಬಾಲಿವುಡ್ ಮಾತ್ರವಲ್ಲ ಭಾರತದ ಕೋಟ್ಯಾಂತರ ಅಭಿಮಾನಿಗಳ ಕಣ್ಣಲ್ಲಿ ಈಗ್ಲೂ ನೀರು ಬರುತ್ತೆ. ಅದಕ್ಕೆ ಕಾರಣ ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್. ಕಡಿಮೆ ಅವಧಿಯಲ್ಲೇ ಬಾಲಿವುಡ್ ಆಳಲು ಶುರು ಮಾಡಿದ್ದ ಸುಶಾಂತ್ ಸಿಂಗ್ ಗೆ ಪ್ರಸಿದ್ಧಿಯೇ ಮುಳುವಾದಂತಿತ್ತು. ಆರು ವರ್ಷಗಳ ಹಿಂದೆ ಜೂನ್ 14 ರಂದು ಸುಶಾಂತ್ ಸಿಂಗ್ ಸಾವು ಅಭಿಮಾನಿಗಳನ್ನು ದುಃಖಕ್ಕೆ ದೂಡಿತ್ತು.
ಇದು ಕೊಲೆ ?
ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಒಳಗಿನಿಂದ ಬಾಗಿಲು ಹಾಕಲಾಗಿತ್ತು. ಮೈ ಮೇಲೆ ಯಾವುದೇ ಗಾಯವಿಲ್ಲ ಎಂಬ ಮರಣೋತ್ತರ ಪರೀಕ್ಷೆ ವರದಿ ನಂತ್ರ ಸುಶಾಂತ್ ಸಿಂಗ್ ಆತ್ಮ*ಹತ್ಯೆ ಮಾಡ್ಕೊಂಡಿದ್ದಾರೆ, ಅವರು ಖಿನ್ನತೆಗೆ ಒಳಗಾಗಿದ್ದರು ಅಂತ ವರದಿ ನೀಡಲಾಯ್ತು. ಆದ್ರೆ ಇದು ಆತ್ಮ*ಹತ್ಯೆ ಅಲ್ಲ ಕೊಲೆ ಎನ್ನುವ ವಾದ ಅನೇಕರಿಂದ ಕೇಳಿ ಬರ್ತಾನೇ ಇದೆ. ಈಗ ಡಾ. ಎನ್. ಕೆ. ಶರ್ಮಾ ಕೂಡ ಇದನ್ನೇ ಹೇಳಿದ್ದಾರೆ.
ಶರ್ಮಾ ಹೇಳೋದೇನು?
ಡಾ. ಎನ್ .ಕೆ. ಶರ್ಮಾ ಫಾಸ್ಟ್ ಲೈಫ್ ಸ್ಪೇಷಲಿಸ್ಟ್. ಅವರು ಜನರ ಹಿಂದಿನ ಜನ್ಮ ಹಾಗೂ ಅವರ ಆತ್ಮದ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಅವರ ಪ್ರಕಾರ, ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಲೆ ಮಾಡಲಾಗಿದೆ. ಕೆಲ ರಾಜಕೀಯ ನಾಯಕರು, ಮಹಾರಾಷ್ಟ್ರ ಸಿನಿಮಾ ಇಂಡಸ್ಟ್ರಿಯ ಕೆಲ ದಿಗ್ಗಜರು ಇದ್ರಲ್ಲಿ ಕೈ ಜೋಡಿಸಿದ್ದಾರೆ ಅಂತ ಶರ್ಮಾ ಹೇಳಿದ್ದಾರೆ. ಆದ್ರೆ ಯಾರು ಎಂಬುದನ್ನು ಶರ್ಮಾ ಹೇಳಿಲ್ಲ.
ಹೇಗೆ ನಡೆದಿತ್ತು ಕೊಲೆ?
ಡಾ. ಎನ್. ಕೆ. ಶರ್ಮಾ ಪ್ರಕಾರ, ಸುಶಾಂತ್ ಸಿಂಗ್ ಮನೆಗೆ ಬಂದು ಅವರನ್ನು ಹತ್ಯೆ ಮಾಡಲಾಗಿದೆ. ಆತ್ಮ*ಹತ್ಯೆ ರೀತಿಯಲ್ಲಿ ಕೊಲೆ ನಡೆದಿದೆ. ಮೊದಲು ಅವರ ಕೈ- ಕಾಲುಗಳನ್ನು ಬಿಗಿಯಲಾಗಿದೆ. ನಂತ್ರ ಕತ್ತಿಗೆ ಕುಣಿಕೆ ಬಿಗಿಯಲಾಗಿದೆ ಅಂತ ಡಾ. ಎನ್. ಕೆ. ಶರ್ಮಾ ಹೇಳಿದ್ದಾರೆ.
ಧೋನಿ ಸಿನಿಮಾ ಕಾರಣವಾಯ್ತಾ?
ಡಾ. ಎನ್. ಕೆ. ಶರ್ಮಾ ಈ ಬಗ್ಗೆ ಅನೇಕರಿಂದ ಮಾಹಿತಿ ಪಡೆದಿದ್ದಾರೆ. ಧೋನಿ ಸಿನಿಮಾ ನಂತ್ರ ಸುಶಾಂತ್ ಸಿಂಗ್ ಪ್ರಸಿದ್ಧಿ ಹೆಚ್ಚಾಯ್ತು. ಅವರಿಗೆ ಸಾಕಷ್ಟು ಸಿನಿಮಾ ಸಿಗಲು ಶುರುವಾಗಿತ್ತು. ಆದ್ರೆ ಇದನ್ನು ಅನೇಕರು ಸಹಿಸಲಿಲ್ಲ. ಇದು ಕೂಡ ಅವರ ಹತ್ಯೆಗೆ ಕಾರಣ ಎಂದು ಶರ್ಮಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

