ನಟಿ ಶಿಲ್ಪಾ ಶೆಟ್ಟಿ ಬಳಕುವ ಸೊಂಟದ ಗುಟ್ಟು ರಟ್ಟು: ಅಸಲಿಯತ್ತು ಬೇರೆನೇ ಇರೋದು ಕಣ್ರಿ
ಯೋಗ ದಿನದಂದು ಸದಾ ಹೈಲೈಟ್ ಆಗುವ ಶಿಲ್ಪಾ ಶೆಟ್ಟಿಯವರ ಫಿಟ್ನೆಸ್ ಮತ್ತು ಬಳುಕುವ ಸೊಂಟದ ಬಗ್ಗೆ ಎಲ್ಲರಿಗೂ ಅಚ್ಚರಿ. ಆದರೆ, ಪ್ಲಾಸ್ಟಿಕ್ ಸರ್ಜನ್ ಡಾ. ಪ್ರಶಾಂತ್ ಡಿಜಿರೆ ಅವರ ಪ್ರಕಾರ, ಶಿಲ್ಪಾ ಅವರಂತಹ ನಟಿಯರ ಸೌಂದರ್ಯದ ಹಿಂದೆ ಯೋಗ, ಡಯೆಟ್ ಜೊತೆಗೆ ಪ್ಲಾಸ್ಟಿಕ್ ಸರ್ಜರಿಯ ಪಾತ್ರವೂ ಇರಬಹುದು.

ಸೆಲೆಬ್ರಿಟಿಗಳು ಹೈಲೈಟ್
ಇಂದು ಅರ್ಥಾತ್ ಜೂನ್ 21 ಯೋಗ ದಿನ. ಯೋಗ ದಿನಾಚರಣೆ ಬಂದಾಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವವರು ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ ಸೇರಿದಂತೆ ಕೆಲವು ಸೆಲೆಬ್ರಿಟಿಗಳು. ಅದರಲ್ಲಿಯೂ 52ರ ಹರೆಯದಲ್ಲಿಯೂ ಸಕತ್ ಸ್ಮಾರ್ಟ್ ಆಗಿ, ಅಷ್ಟೇ ಜೋಕ್ ಮಾಡುತ್ತಾ ನಗುನಗುತ್ತಾ ಇರುವ ಶಿಲ್ಪಾ ಶೆಟ್ಟಿಯೇ ಈ ದಿನದ ಹೈಲೈಟ್.
ಯೋಗಪಟು ಶಿಲ್ಪಾ
ಯಾವುದೇ ಆಸನಗಳನ್ನೂ ಸಲೀಸಾಗಿ ಮಾಡುವಲ್ಲಿ ಶಿಲ್ಪಾ ಅವರದ್ದು ಎತ್ತಿದ ಕೈ. ಯಾವ ಯೋಗಾಸನವನ್ನೂ ಅವರು ಮಾಡಬಲ್ಲರು. ಇದರಿಂದ ಅವರು ಸಿಕ್ಕಾಪಟ್ಟೆ ಹೆಲ್ತಿ ಆಗಿರುವುದು ದಿಟವೇ. ಅಷ್ಟಕ್ಕೂ ದಿನವೂ ಯೋಗಾಸನ ಮಾಡಿದರೆ ಅದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ. ಇದು ಕೂಡ ನಿಜವೇ.
ಬಳಕುವ ಬಳ್ಳಿ
ಆದರೆ, ಇದರ ಹೊರತಾಗಿಯೂ ಶಿಲ್ಪಾ ಶೆಟ್ಟಿಯ ವಿಷ್ಯಕ್ಕೆ ಬರುವುದಾದರೆ, ಅವರ ಸೊಂಟವನ್ನು ನೋಡಿದಾಗ ಎಷ್ಟೋ ಮಹಿಳೆಯರಿಗೆ ಅಬ್ಬಾ ತಮ್ಮ ಸೊಂಟವೂ ಹೀಗೆಯೇ ಇರಬಾರದೆ ಎಂದುಕೊಳ್ಳುತ್ತಾರೆ. ಸ್ವಲ್ಪವೂ ಕೊಬ್ಬು ಇಲ್ಲದ ಸೊಂಟವದು. ಶಿಲ್ಪಾ ಅಷ್ಟೇ ಅಲ್ಲದೇ ಬಹುತೇಕ ನಟಿಯರ ಸೊಂಟವೂ ಇದೇ ರೀತಿ ಇದೆ.
ಯೋಗ, ವರ್ಕ್ಔಟ್ ನಿಜವೇ, ಆದರೆ...
ಇದಕ್ಕೆ ಕಾರಣ, ಹಲವು ನಟಿಯರು ತಮ್ಮ ಚಾರ್ಮ್ನೆಸ್ ಉಳಿಸಿಕೊಳ್ಳಲು ಯೋಗ, ವರ್ಕ್ಔಟ್ ಮಾಡುವುದು ಇದೆ. ಡಯೆಟ್ ಫಾಲೋ ಮಾಡುತ್ತಾರೆ. ಎಲ್ಲವೂ ನಿಜವೇ ಜೊತೆಗೆ ಇದು ಒಳ್ಳೆಯದೇ. ಆದರೆ ಹಾಗೆಂದು ಹೀಗೆ ಮಾಡಿಬಿಟ್ಟರೆ ಸೊಂಟ ಶಿಲ್ಪಾ ಶೆಟ್ಟಿ ರೀತಿ ಕಾಣತ್ತೆ ಅಂದುಕೊಂಡರೆ ಅದು ಶುದ್ಧ ತಪ್ಪು ಎನ್ನುತ್ತಾರೆ ಪ್ಲಾಸ್ಟಿಕ್ ಸರ್ಜನ್ ಡಾ. ಪ್ರಶಾಂತ್ ಡಿಜಿರೆ.
ಅಸಲಿಯತ್ತೇ ಬೇರೆ
ನೀವು ನೋಡಿದಂತೆ ಶಿಲ್ಪಾ ಶೆಟ್ಟಿ ಯೋಗ ಪಟು ನಿಜ. ಆದರೆ ಯೋಗ ಮಾಡಿದ ತಕ್ಷಣ ಎಲ್ಲರ ಅದರಲ್ಲಿಯೂ ಹೆಚ್ಚಾಗಿ ಮಗುವಾದ ಮೇಲೆ ಹೆಂಗಸರ ಸೊಂಟ ಹೀಗೆ ಇರುವುದು ನೈಸರ್ಗಿಕ ಕ್ರಿಯೆ ಅಲ್ಲ. ಮಗುವಾದ ಮೇಲೆ ದೇಹದಲ್ಲಿ ಆಗುವ ಬದಲಾವಣೆಯಿಂದ ಯೋಗಾಭ್ಯಾಸ ಮಾಡಿದರೆ ಫಿಟ್ ಆಗಿರಬಹುದು. ಆದರೆ ನಟಿಯರು ಈ ರೀತಿಯಲ್ಲಿ ಕಾಣಿಸಿಕೊಳ್ಳುವ ಹಿಂದೆ ಇರೋದು ಬೇರೆಯದ್ದೇ ಎಂದಿದ್ದಾರೆ ಡಾಕ್ಟರ್.
ಪ್ಲಾಸ್ಟಿಕ್ ಸರ್ಜರಿ ಮೊರೆ
ಅವರು ಹೇಳಿದ ಪ್ರಕಾರ, ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದರಿಂದ ಅವರ ಸೊಂಟದ ಸುತ್ತಲೂ ಕೊಬ್ಬ ಶೇಖರಣೆ ಆಗದಂತೆ ತಡೆಯುತ್ತದೆ. (ಕೆಲವು ಬಾರಿ ಇದು ತುಂಬಾ ಅಪಾಯಕಾರಿಯೂ ಹೌದು). ಬಳಿಕ ಅದನ್ನು ಹಾಗೆಯೇ ಮೆಂಟೇನ್ ಮಾಡುವುದು ಕೂಡ ಚಾಲೆಂಜ್ ಆಗಿದೆ. ಆಗ ಯೋಗ, ವರ್ಕ್ಔಟ್ ಎಲ್ಲವೂ ಆಗಬೇಕು. ಆದರೆ ನೈಸರ್ಗಿಕವಾಗಿ ಇವರದ್ದು ಈ ರೀತಿಯ ಸೊಂಟ ಎಂದರೆ ಅದು ತಪ್ಪು ಎಂದಿದ್ದಾರೆ.
18 ವರ್ಷಗಳಿಂದ ಸಕ್ಕರೆ
ಶಿಲ್ಪಾ ಶೆಟ್ಟಿ ಅವರು ತಾವು 18 ವರ್ಷಗಳಿಂದ ಸಕ್ಕರೆ ಬಿಟ್ಟಿರುವುದಾಗಿ ಹೇಳಿದ್ದಾರೆ. ಸಕ್ಕರೆ ಬಿಡುವುದು ತುಂಬಾ ಒಳ್ಳೆಯದೇ. ಆದರೆ ಅದೊಂದೇ ಈ ರೀತಿಯ ಸೊಂಟಕ್ಕೆ ಕಾರಣವಲ್ಲ, ಅಷ್ಟಕ್ಕೂ ಸೆಲೆಬ್ರಿಟಿಗಳು ಹೇಳೋದೆಲ್ಲಾ ನಿಜವಲ್ಲ ಎಂದೂ ಬಳಕುವ ಬಳ್ಳಿಯ ರಹಸ್ಯವನ್ನು ತೆರೆದಿಟ್ಟಿದ್ದಾರೆ ಪ್ಲಾಸ್ಟಿಕ್ ಸರ್ಜನ್ ಡಾ. ಪ್ರಶಾಂತ್ ಡಿಜಿರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

