- Home
- Entertainment
- Cine World
- ಆ ಹೀರೋಯಿನ್ ಗಾಗಿ ಪತ್ನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ರು ಸೂಪರ್ ಸ್ಟಾರ್ ರಜನಿಕಾಂತ್!
ಆ ಹೀರೋಯಿನ್ ಗಾಗಿ ಪತ್ನಿಗೆ ಡಿವೋರ್ಸ್ ಕೊಡಲು ರೆಡಿಯಾಗಿದ್ರು ಸೂಪರ್ ಸ್ಟಾರ್ ರಜನಿಕಾಂತ್!
ಸೂಪರ್ ಸ್ಟಾರ್ ರಜನಿಕಾಂತ್ ವಿವಾಹದ ಬಳಿಕ ತಮ್ಮ ಸಹ ನಟಿಯೊಬ್ಬರ ಪ್ರೀತಿಯಲ್ಲಿ ಬಿದ್ದು, ತಮ್ಮ ಪತ್ನಿಗೆ ಡಿವೋರ್ಸ್ ಕೊಡಲು ನಿರ್ಧರಿಸಿದ್ದರು. ಆದರೆ ಕೆ. ಬಾಲಚಂದರ್ ಮಧ್ಯಸ್ಥಿಕೆಯಿಂದಾಗಿ, ಮನಸ್ಸು ಬದಲಾಯಿಸಿದ್ದರು ರಜನಿ. ಆ ನಟಿ ಯಾರು ಗೊತ್ತಾ?

ದಕ್ಷಿಣ ಭಾರತದ ಸ್ಟಾರ್ ನಟ ರಜನಿಕಾಂತ್
ರಜನಿಕಾಂತ್, ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಈ ಅಪ್ರತಿಮ ನಟನಿಗೆ ಭಾರತದಲ್ಲಿ ದೇವರಂತಹ ಸ್ಥಾನಮಾನವಿದೆ, ಅವರ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವರ ಪೋಸ್ಟರ್‌ಗಳ ಮೇಲೆ ಹಾಲಿನ ಅಭಿಷೇಕವೂ ನಡೆಯುತ್ತೆ ಮತ್ತು ದೇವಾಲಯಗಳಲ್ಲಿ ಅವರಿಗಾಗಿ ಕಾಣಿಕೆಗಳನ್ನು ಅರ್ಪಿಸಲಾಗುತ್ತದೆ. ಆಗಸ್ಟ್ 15, 1975 ರಂದು, ರಜನಿಕಾಂತ್ ತಮ್ಮ ಚೊಚ್ಚಲ ಚಿತ್ರ ಅಪೂರ್ವ ರಾಗಂಗಳ್‌ನೊಂದಿಗೆ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಂಡರು. ನಂತರ ಸ್ಟಾರ್ ನಟನಾಗಿ ಮಿಂಚಿದರು.
ಈ ನಟಿಗಾಗಿ ಪತ್ನಿಗೆ ಡಿವೋರ್ಸ್ ಕೊಡಲು ನಿರ್ಧಾರ
ರಜನಿಕಾಂತ್ ಅವರ ವೃತ್ತಿಜೀವನವು ಯಾವಾಗಲೂ ಗಮನ ಸೆಳೆಯುತ್ತಿದ್ದರೂ, ಅವರ ವೈಯಕ್ತಿಕ ಜೀವನವು ಸದಾ ಸುದ್ದಿಯಲ್ಲಿರುತ್ತಿದ್ದುದು ಸುಳ್ಳಲ್ಲ. ದಕ್ಷಿಣ ಭಾರತದ ಚಲನಚಿತ್ರಗಳ ಕೆಲವು ಪ್ರಮುಖ ನಟಿಯರೊಂದಿಗೆ ರಜನಿಕಾಂತ್ ರಿಲೇಶನ್’ಶಿಪ್ ನಲ್ಲಿದ್ದರು ಎನ್ನುವ ಮಾತು ಕೂಡ ಇದೆ.. ನಾಗಾರ್ಜುನ ಅವರ ಎರಡನೇ ಪತ್ನಿ ಅಮಲಾ ಅವರಿಗಾಗಿ ರಜನಿಕಾಂತ್ ತಮ್ಮ ಪತ್ನಿ ಲತಾ ರಂಗಾಚಾರಿಗೆ ವಿಚ್ಛೇದನ ಮಾಡಲು ಸಿದ್ಧರಾಗಿದ್ದರು ಎಂದು ನಿಮಗೆ ತಿಳಿದಿದೆಯೇ?
ಅಮಲಾ ಪ್ರೀತಿಯಲ್ಲಿ ಬಿದ್ದ ರಜನಿ
ರಜನಿಕಾಂತ್ ಮತ್ತು ಅಮಲಾ ‘ಮಾಪ್ಪಿಲ್ಲೈ’, ‘ಕೋಡಿ ಪರಕ್ಕುತ್ತು’ ಮತ್ತು ‘ವೆಲೈಕಾರನ್’ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಜನ ಇಷ್ಟಪಟ್ಟಿದ್ದರು. 1987 ರಲ್ಲಿ 'ವೆಲೈಕಾರನ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್ ಅವರಿಗೆ ಅಮಲಾ ಮೇಲೆ ಪ್ರೀತಿಯಾಗಿತ್ತು. ಅಮಲಾ ಸಿನಿಮಾ ಸೆಟ್ ಗೆ ರಜನಿ ಬಂದು ಬಹಳ ಗಂಟೆಗಳ ಕಾಲ ಇರುತ್ತಿದ್ದರು ಎನ್ನುವ ಸುದ್ದಿ ಕೂಡ ಇದೆ.
ಪತ್ನಿಗೆ ವಿಚ್ಚೇದನ ಕೊಡುವ ಯೋಚನೆ
ರಜನಿಕಾಂತ್ ಮತ್ತು ಅಮಲಾ ನಡುವಿನ ಸಂಬಂಧ ಎಷ್ಟು ಗಂಭೀರವಾಯಿತು ಎಂದರೆ ನಟ ತಮ್ಮ ಪತ್ನಿ ಲತಾ ರಂಗಾಚಾರಿಗೆ ವಿಚ್ಛೇದನ ನೀಡುವ ಬಗ್ಗೆ ಯೋಚಿಸಿದರು. ಹಲವಾರು ವರದಿಗಳ ಪ್ರಕಾರ, ಅವರು ಲತಾ ಅವರಿಗೆ ನೋಟಿಸ್ ಸಹ ಕಳುಹಿಸಿದ್ದಾರೆ. ಅವರ ವಿಚ್ಛೇದನದ ವದಂತಿಯು ನಟನ ಅಭಿಮಾನಿಗಳನ್ನು ಕೆರಳಿಸಿತು, ಅವರು ಅವರ ಚಲನಚಿತ್ರಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದರು ಎನ್ನುವ ಗಾಸಿಪ್ ಕೂಡ್ ಇದೆ.
ನಿರ್ದೇಶಕ ಕೆ ಬಾಲಚಂದ್ರನ್ ಮದ್ಯಪ್ರವೇಶದಿಂದ ನಿರ್ಧಾರ ಬದಲಿಸಿದ ರಜನಿ
ವಿಷಯ ಗಂಭೀರವಾಗುತ್ತಿದ್ದಂತೆ, ಚಿಂತಿತರಾದ ಲತಾ, ರಜನಿಕಾಂತ್ ಅವರ ಮೆಂಟರ್ ಆಗಿದ್ದ ಚಲನಚಿತ್ರ ನಿರ್ಮಾಪಕ ಕೆ. ಬಾಲಚಂದರ್ ಜೊತೆ ಮಾತನಾಡಿದರು. ಕೆ ಬಾಲಚಂದರ್ ಪರಿಸ್ಥಿತಿಯನ್ನು ನಿಭಾಯಿಸಿ, ಪತ್ನಿಗೆ ವಿಚ್ಛೇದನ ನೀಡಿದರೆ ಕುಟುಂಬ ಒಡೆಯುವುದಲ್ಲದೇ, ನಟನಾಗಿ ಅವರ ಖ್ಯಾತಿಗೆ ಕಳಂಕ ತರುತ್ತದೆ ಎಂದು ಬಾಲಚಂದರ್ ರಜನಿಕಾಂತ್ ಅವರಿಗೆ ತಿಳಿಸಿದರು. ಬಾಲಚಂದರ್ ಅವರ ಮಧ್ಯಸ್ಥಿಕೆಯ ನಂತರ, ರಜನಿಕಾಂತ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು ಮತ್ತು ಶೀಘ್ರದಲ್ಲೇ ವದಂತಿಗಳು ಸಹ ನಿಂತುಹೋದವು.
ಸಂದರ್ಶನಕ್ಕೆಂದು ಬಂದ ಲತಾ ಮೇಲೆ ಮೊದಲ ನೋಟದಲ್ಲೆ ಲವ್
ರಜನಿಕಾಂತ್ ಮತ್ತು ಕಾಲೇಜು ವಿದ್ಯಾರ್ಥಿನಿ ಲತಾ ರಂಗಾಚಾರಿ ಭೇಟಿ ತುಂಬಾ ಆಕಸ್ಮಿಕ. ಚೆನ್ನೈನ ಎಥಿರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದ ಲತಾ ಅವರನ್ನು ಕಾಲೇಜು ಮ್ಯಾಗಜಿನ್ ಗಾಗಿ ರಜನಿಕಾಂತ್ ಅವರನ್ನು ಸಂದರ್ಶನ ಮಾಡಲು ನಿಯೋಜಿಸಲಾಯಿತು. ಸಂದರ್ಶನಕ್ಕಾಗಿ ರಜನಿಕಾಂತ್ ಲತಾ ಅವರನ್ನು ಭೇಟಿಯಾದಾಗ, ಮೊದಲ ಭೇಟಿಯಲ್ಲೆ ರಜನಿಗೆ ಲತಾ ಮೇಲೆ ಲವ್ ಆಗಿತ್ತು, ಅವರು ಸಂದರ್ಶನದ ಸಮಯದಲ್ಲೇ ಲತಾಗೆ ಪ್ರಪೋಸ್ ಮಾಡಿದ್ದರು.
ರಜನಿಕಾಂತ್-ಲತಾ ಮದುವೆ ಮತ್ತು ಮಕ್ಕಳು
ಒಬ್ಬ ಸ್ಟಾರ್ ನಟನನ್ನು ಮದುವೆಯಾಗುವ ವಿಚಾರ ಥ್ರಿಲ್ಲಿಂಗ್ ಎನಿಸಿದರೂ ಸಹ, ಲತಾ ಶಾಂತವಾಗಿದ್ದಳು ಮತ್ತು ತನ್ನ ಕುಟುಂಬದೊಂದಿಗೆ ಈ ಬಗ್ಗೆ ಚರ್ಚಿಸಬೇಕು ಎಂದು ಹೇಳಿದರಂತೆ. ರಜನಿಕಾಂತ್ ಅವರ ವಿನಮ್ರ ಸ್ವಭಾವವೇ ಲತಾ ಅವರನ್ನು ಆಕರ್ಷಿಸಿತು. ಚಿತ್ರರಂಗದಲ್ಲಿ ಅಷ್ಟೊಂದು ಪ್ರಸಿದ್ಧ ಹೆಸರಾಗಿದ್ದರೂ, ರಜನಿಕಾಂತ್ ತುಂಬಾ ವಿನಮ್ರರಾಗಿದ್ದರು. ಅವರು ಲತಾ ಪೋಷಕರನ್ನು ಭೇಟಿಯಾದರು, ಮತ್ತು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ದಂಪತಿಗಳು ಫೆಬ್ರವರಿ 26, 1981 ರಂದು ತಿರುಪತಿಯ ಪ್ರಸಿದ್ಧ ಭಗವಾನ್ ಬಾಲಾಜಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿ ವಿವಾಹವಾದರು. ಶೀಘ್ರದಲ್ಲೇ, ಅವರು ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳ ಪೋಷಕರಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

