ಪೊನ್ನಿಯಿನ್ ಸೆಲ್ವನ್: ಮಣಿರತ್ನಂಗೆ ಐಶ್ವರ್ಯ ರೈ, ತ್ರಿಶಾ ಸ್ನೇಹ ಇಷ್ಟವಿರಲಿಲ್ಲ!
ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಮಣಿರತ್ನಂ (Mani Ratnam) ಅವರ ಮುಂಬರುವ ಚಿತ್ರ 'ಪೊನ್ನಿಯನ್ ಸೆಲ್ವನ್ - ಭಾಗ 1' ನಲ್ಲಿ (Ponniyin Selvan) ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಇಬ್ಬರು ನಾಯಕಿಯರು ಒಟ್ಟಿಗೆ ಇರುವುದನ್ನು ರತ್ನಂ ಅವರು ಬಯಸಲಿಲ್ಲ ಎಂದು ತ್ರಿಶಾ ಕೃಷ್ಣನ್ ಬಹಿರಂಗಪಡಿಸಿದ್ದಾರೆ. ಇದ್ಕಕೆ ಕಾರಣವೇನು ಗೊತ್ತಾ?
ಐಶ್ವರ್ಯಾ ರೈ ನಟಿಸಿರುವ ಪೊನ್ನಿಯಿನ್ ಸೆಲ್ವನ್ - ಭಾಗ I, ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರ ಕನಸಿನ ಯೋಜನೆ. ಈ ಸಿನಿಮಾ ಸೆಪ್ಟೆಂಬರ್ 30, ಶುಕ್ರವಾರದಂದು ಬೃಹತ್ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಕಲ್ಕಿ ಕೃಷ್ಣಮೂರ್ತಿಯವರ ಹೆಸರಾಂತ ಕಾದಂಬರಿ ಆಧರಿಸಿದ ಈ ಐತಿಹಾಸಿಕ ಡ್ರಾಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ. ಪೊನ್ನಿಯಿನ್ ಸೆಲ್ವನ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಅದರ ಪಾತ್ರದಲ್ಲಿ ಭಾರತೀಯ ಚಿತ್ರರಂಗದ ಕೆಲವು ಪ್ರಸಿದ್ಧ ಸ್ಟಾರ್ಸ್ ಇದ್ದಾರೆ.
ಚಿತ್ರದಲ್ಲಿ, ನಟಿ ತ್ರಿಶಾ ಕೃಷ್ಣನ್ ಇಳಯ ಪಿರಟ್ಟಿ ಕುಂದವೈ ದೇವಿ ಪಾತ್ರವನ್ನು ನಿರ್ವಹಿಸಿದರೆ, ಐಶ್ವರ್ಯಾ ರೈ ಬಚ್ಚನ್ ಅವರು ನಂದಿನಿ ಪಾತ್ರ ನಿರ್ವಹಿಸಿದ್ದಾರೆ.ಚಿತ್ರದಲ್ಲಿ ತ್ರಿಶಾ ಮತ್ತು ಐಶ್ವರ್ಯ ರೈ ಸಾಂಪ್ರದಾಯಿಕ ಎದುರಾಳಿಗಳಾಗಿ ನಟಿಸುತ್ತಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಟೀಸರ್‌ನಲ್ಲಿ ನಂದಿನಿ ಮತ್ತು ಕುಂದವೈ ಮುಖಾಮುಖಿ ಕ್ಷಣ ಜನರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಚಿತ್ರದ ಈ ಎರಡು ಪ್ರಮುಖ ಮಹಿಳೆಯರು ನಿಜ ಜೀವನದಲ್ಲಿ ವಿಭಿನ್ನ ಬಂಧವನ್ನು ಹೊಂದಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ತ್ರಿಶಾ ಚಿತ್ರದಲ್ಲಿ ಐಶ್ವರ್ಯಾ ಅವರೊಂದಿಗೆ ಪರದೆಯನ್ನು ಹಂಚಿಕೊಂಡ ಅನುಭವವನ್ನು ಹೇಳಿಕೊಂಡಿದ್ದಾರೆ ಮತ್ತು ನಿರ್ದೇಶಕ ಮಣಿರತ್ನಂ ಅವರಿಬ್ಬರು ಒಟ್ಟಿಗೆ ಇರಲು ಬಿಡುತ್ತಿರಲಿಲ್ಲ ಎಂಬುದನ್ನೂ ಬಹಿರಂಗಪಡಿಸಿದರು. ಆದರೆ ತೆರೆ ಮೇಲೆ ನಟಿಸುವ ಪಾತ್ರಗಳಿಗಿಂತ ಇವರು ಭಿನ್ನವಾಗಿ ನಟಿಯರು ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದರು
ಅದೃಷ್ಟವಶಾತ್, ನನ್ನ ಶೂಟಿಂಗ್ ಮೊದಲನೇ ದಿನದಂದು ನಾನು ಅವರನ್ನು ಭೇಟಿಯಾಗಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ಮನಸ್ಸಿಸಿಂದಲೂ ತುಂಬಾ ಸುಂದರವಾಗಿದ್ದಾರೆ. ಅವರೊಟ್ಟಿಗೆ ತೆರೆ ಹಂಚಿ ಕೊಳ್ಳುವುದು ಒಂದು ದೊಡ್ಡ ಸವಾಲಾಗಿತ್ತು. ಏಕೆಂದರೆ ಈ ಚಿತ್ರದಲ್ಲಿ ನಾವು ಒಬ್ಬರನ್ನೊಬ್ಬರು ಹೆಚ್ಚು ಇಷ್ಟಪಡಬಾರದು, ಎಂದು ತ್ರಿಶಾ ಕೃಷ್ಣನ್ ಹೇಳಿದ್ದಾರೆ.
'ಆದರೆ ನಾವು ಸೆಟ್‌ನಲ್ಲಿ ತುಂಬಾ ಚೆನ್ನಾಗಿ ಹೊಂದಿ ಕೊಂಡಿದ್ದೆವು. ಆದರೆ ಬಹಳಷ್ಟು ಸಾರಿ ಮಣಿರತ್ನಂ ಸರ್ ಬಂದು ನೀವು ತುಂಬಾ ಮಾತನಾಡುತ್ತಿದ್ದೀರಿ. ಮಾತು ನಿಲ್ಲಿಸಿ. ನನ್ನ ದೃಶ್ಯಕ್ಕಾಗಿ ನಾನು ಈ ಒಡನಾಟವನ್ನು ಹೊಂದಲು ಬಿಡುವುದಿಲ್ಲ,' ಎಂದು ಹೇಳುತ್ತಿದ್ದರು ಎಂಬ ವಿಷಯವನ್ನು ತ್ರಿಶಾ ಬಹಿರಂಗಪಡಿಸಿದ್ದಾರೆ.
'ಅವರ ಜೊತೆ ಕೆಲಸ ಮಾಡವುದೊಂದು ಅದ್ಭುತ ಅನುಭವ. ಅವರೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬರೂ ನನ್ನ ಮಾತು ಒಪ್ಪುತ್ತಾರೆ ಎಂದು ನನಗೆ ಗ್ಯಾರಂಟಿ ಇದೆ. ಅವರು ವಾರ್ಮ್ ಮತ್ತು ನಾನು ಕೆಲಸ ಮಾಡಿದ ಅತ್ಯಂತ ಹಾರ್ಡ್ ವರ್ಕಿಂಗ್ ನಟರಲ್ಲಿ ಒಬ್ಬರು. ಅವರು ತಮಿಳು ಹೇಗೆ ಮಾತನಾಡಬೇಕೋ, ಹಾಗೆ ಮಾತಾಡಿದರು. 2 ಗಂಟೆಗೆ ನಮ್ಮೊಂದಿಗೆ ತಯಾರಾಗುತ್ತಿದ್ದರು. ಅವರೊಂದಿಗೆ ಪರದೆಯ ಹಂಚಿಕೊಳ್ಳವುದು ನನಗೆ ಗೌರವ,' ಎಂದು ತ್ರಿಶಾ ಐಶ್ವರ್ಯಾ ರೈ ಜೊತೆಗಿನ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡಿದ್ದಾರೆ.