ಬಾಲಿವುಡ್ ಸುಂದರಿ ಐಶ್ವರ್ಯಾಗೆ ಈ ದುರಭ್ಯಾಸವಿದೆಯಂತೆ!
ಮನುಷ್ಯ ಅಂದ ಮೇಲೆ ಏನಾದರೂ ದುರಭ್ಯಾಸವಿದ್ದೇ ಇರುತ್ತೆ. ರಾಜ್ಯದ ದೊರೆಯಾದರೇನು, ವಿಶ್ವ ಸುಂದರಿಯಾದರೇನು? ಕೆಲವು ಅಭ್ಯಾಸಗಳನ್ನು ಬಿಟ್ಟು ಬಿಡುವುದು ಯಾರಿಗೂ ಸುಲಭವಲ್ಲ. ಒಂದಲ್ಲೊಂದು ದುಶ್ಚಟಗಳಿರುತ್ತವೆ. ಹಾಗೆಯೇ ಐಶ್ವರ್ಯಾಗೂ ಈ ಅಭ್ಯಾಸವಿದೆಯಂತೆ!
ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಮುಗಿಸಿದ ಐಶ್ವರ್ಯಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿಯಾಗಿ ಮಿಂಚಿರುವ ನಟಿ, ಹಲವು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಅಭಿಮಾನಿಗಳನ್ನು ಮನೋರಂಜಿಸುವುದರಲ್ಲಿ ಅನುಮಾನವೇ ಇಲ್ಲ. ದ್ವಿ ಪಾತ್ರದಲ್ಲಿ ನಟಿಸಿದ ಐಶ್ವರ್ಯಾ ರೈ ನೋಡಲು ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಣಿರತ್ನಂ ಚಿತ್ರ. ವಿಕ್ರಮ್, ಕಾರ್ತಿ ಮತ್ತು ಜಯಂ ರವಿ ನಾಯಕ ನಟರಾಗಿ ನಟಿಸಿದ ಚಿತ್ರವಾದ್ದರಿಂದ ಸಿನಿಮಾ ಅದ್ಭುತವಾಗಿರುತ್ತೆ ಎನ್ನೋದು ಹಲವರ ಅಭಿಪ್ರಾಯ. ಒಟ್ಟಿನಲ್ಲಿ ಐಶ್ವರ್ಯಾ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಈ ಮದ್ಯೆ ಐಶ್ವರ್ಯಾ ರೈಗೆ ಸಂಬಂಧಿಸಿದ ಹಳೇ ಸುದ್ದಿಯೊಂದು ಮತ್ತೊಮ್ಮೆ ಹರಿದಾಡುತ್ತಿದೆ.
ಹಿಂದೊಮ್ಮೆ ಐಶ್ವರ್ಯಾ ರೈಗೆ ಇರುವ ಒಂದು ದುರಭ್ಯಾಸದ ಬಗ್ಗೆ ನಾದಿನಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದರು. ಅಯ್ಯೋ ಏನಪ್ಪ ಈ ಐಶ್ವರ್ಯಾಗೂ ಅದೆಂಥ ಕೊಳಕು ಅಭ್ಯಾಸ (Bad habit) ಅಂತ ಯೋಚಿಸ್ತಾ ಇದೀರಾ. ಅದೂ ಅಮಿತಾಭ್ ಸೊಸೆ ಬಗ್ಗೆ ಬಾಲಿವುಡ್ ಬಿಗ್ ಬಿ ಮಗಳು ಏನಿರಬಹುದೆಂಬ ಕುತೂಹಲವಿದ್ದರೆ, ನಾವು ಹೇಳುತ್ತೇವೆ ಕೇಳಿ. ಒಂದು ನಿಮಿಷ, ಈ ಅತ್ತಿಗೆ-ನಾದಿನ ಸಂಬಂಧದ ಬಗ್ಗೆ ನಿಮಗೇನಾದರೂ ಅನುಮಾನವಿದ್ದರೆ ಬಗೆ ಹರಿಸುತ್ತೇವೆ. ಈ ಅತ್ತಿಗೆ-ನಾದಿನಿ ನಡುವೆ ಅತ್ಯುತ್ತಮ ಬಾಂಡಿಂಗ್ (Bonding) ಇದೆ. ಒಬ್ಬರ ಕಾಲೆಳೆದುಕೊಂಡಿರುತ್ತಾರೆ ಮತ್ತೊಬ್ಬರು. ಪರಸ್ಪರ ಪ್ರೀತಿ (Love), ಗೌರವ (Respect)ವನ್ನೂ ಹಂಚಿಕೊಂಡಿದ್ದಾರೆ. ಅದೇ ಆತ್ಮೀಯತೆಯಿಂದ (Affection) ಐಶ್‌ಗಿರುವ ಕೆಟ್ಟ ಗುಣದ ಬಗ್ಗೆ ಶ್ವೇತಾ ಹೇಳಿದ್ದಾಳೆ.
ಶುರುವಾಯ್ತು ‘Ponniyin Selvan’ ಸೌಂಡ್: ಬಹು ನಿರೀಕ್ಷೆಯ ಟ್ರೈಲರ್ ಬಿಡುಗಡೆ!
ಈ ಅಭ್ಯಾಸದಿಂದ ಶ್ವೇತಾಗೆ ಆಗಾಗ ಇರಿಟೇಟ್ ಆಗುತ್ತಂತೆ. ಐಶ್ವರ್ಯಾ ಫೋನ್ ಮಾಡಿದರೆ ಬಹಳಷ್ಟು ಸಾರಿ ಪಿಕ್ ಮಾಡೋಲ್ವಂತೆ. ಅಷ್ಟೇ ಅಲ್ಲ ಕಾಲ್ ಬ್ಯಾಕ್ (Call Back) ಸಹ ಮಾಡೋಲ್ವಂತೆ. ಅಬ್ಬಾ ಐಶ್ವರ್ಯಾ ಈ ಬುದ್ಧಿ ತುಂಬಾ ರಗಳೆ ಅನ್ಸುತ್ತೆ ಅಂದಿದ್ದಾರೆ ಶ್ವೇತಾ.
ಹಿಂದೆಯೊಮ್ಮೆ ಶ್ವೇತಾ ತನ್ನ ಸಹೋದರ ಅಭಿಷೇಕ್ ಬಚ್ಚನ್ ಜೊತೆ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಪಾಲ್ಗೊಂಡಿದ್ದರು. ಈ ಶೋನಲ್ಲಿ ಈ ಒಡ ಹುಟ್ಟಿದವರು ಪರಸ್ಪರರ ಕೆಲವು ಗುಟ್ಟಿನ ವಿಷಯಗಳನ್ನು ರಟ್ಟು ಮಾಡಿದ್ದರು. ಆಗ ಶ್ವೇತಾ ಐಶ್ವರ್ಯಾರ ಕೆಲವು ದುರ್ಗುಣಗಳ ಬಗ್ಗೆಯೂ ಹೇಳಿದ್ದರು. ಸೆಲ್ಫ್ ಮೇಡ್ ಮಹಿಳೆ (Self Made Woman) ಆಕೆ. ಅದ್ಭುತ ತಾಯಿ ಎನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದರೆ ಕಾಲ್ ಬ್ಯಾಕ್ ಮಾಡದಿದ್ದಾಗ ಮಾತ್ರ ಮೈ ಎಲ್ಲಾ ಉರಿಯುತ್ತೆ ಎಂದಿದ್ದರು ಶ್ವೇತಾ. ಅಷ್ಟೇ ಅಲ್ಲ, ಟೈಮ್ ಮ್ಯಾನೇಜ್‌ಮೆಂಟ್ (Time Management) ಸಹ ಅಷ್ಟಕ್ಕಷ್ಟೇಯಂತೆ ಐಶ್‌ಗೆ!
ಇದೇ ಶೋನಲ್ಲಿ ಐಶ್ವರ್ಯಾ ಬಗ್ಗೆ ಅಭಿಷೇಕ್‌ಗೂ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸಹಜವಾಗಿಯೇ ಮಡದಿಯನ್ನು ಮನಸಾರೇ ಪ್ರೀತಿಸುತ್ತೇನೆ ಎಂದು ಹೇಳಿದ ಅಭಿಷೇಕ್, ಅವಳ ಕೆಲವು ನೇಚರ್ ಇಷ್ಟವಾಗೋಲ್ಲವೆಂದು ಮನ ಬಿಚ್ಚಿ ಮಾತನಾಡಿದ್ದರು. ಪ್ಯಾಕಿಂಗ್ (Packing) ಕೆಟ್ನಾಗಿ ಮಾಡಿಕೊಳ್ತಾರಂತೆ ಐಶ್ವರ್ಯಾ. ಅದು ಪತಿಗೆ ರಗಳೆ ಆಗುತ್ತಂತೆ. ಆದರೆ, ಐಶ್ವರ್ಯ ರೈ ಬಚ್ಚನ್ ಕುಟುಂಬದ ಸೊಸೆಯಾಗಿ, ಎಲ್ಲ ಕರ್ತವ್ಯ, ಜವಾಬ್ದಾರಿಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ ಎಂದು ಹೇಳುವುದನ್ನು ಅಭಿಷೇಕ್ ಮರೆತಿರಲಿಲ್ಲ. ಮನೆಯನ್ನು ನೋಡಿಕೊಳ್ಳುವುದರ ಜೊತೆ, ಅವರು ತನ್ನ ಕೆಲಸದ ಮೇಲೂ ಸಂಪೂರ್ಣ ಗಮನ ಹರಿಸುತ್ತಾರಂತೆ.
Ponniyin Selvan; ರಜನಿಕಾಂತ್ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯಾ ನಡೆಗೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
'ಗುರು' ಚಿತ್ರದ ಚಿತ್ರೀಕರಣದ (Shooting) ಸಮಯದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ನಡುವೆ ಪ್ರೀತಿ ಹುಟ್ಟಿತು. 2007ರಲ್ಲಿ ದಾಂಪತ್ಯ ಜೀವನಕ್ಕೆ (Married Life) ಕಾಲಿಟ್ಟ ಈ ತಾರಾ ಜೋಡಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಐಶ್ವರ್ಯ ರೈ 2018ರಲ್ಲಿ ಫನ್ನಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮತ್ತೆ ಯಾವುದೇ ಬಿ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿಲ್ಲ. ಈಗ ಅವರ ಹೊಸ ಚಿತ್ರ ತೆರೆಗೆ ಬರಲು ಸನ್ನದ್ಧವಾಗಿದೆ.