Kangana Ranaut ವೃತ್ತಿಜೀವನದ ಅತ್ಯಂತ ಕಳಪೆ ಓಪನರ್ Dhaakad
ನಿನ್ನೆ ಅಂದರೆ ಏಪ್ರಿಲ್ 20ರ ಶುಕ್ರವಾರದಂದು ತೆರೆಕಂಡ ಕಂಗನಾ ರಣಾವತ್ (Kangana Ranaut) ಅವರ ಚಲನಚಿತ್ರ 'ಧಾಕಡ್' (Dhaakad) ಅವರ ವೃತ್ತಿಜೀವನದ ಅತ್ಯಂತ ಕಡಿಮೆ ಓಪನರ್‌ಗಳಲ್ಲಿ ಒಂದಾಗಿದೆ. ಈ ಚಿತ್ರವು ಮೊದಲ ದಿನ ಕಂಗನಾ ರಣಾವತ್ ಅವರ 'ಜಡ್ಜ್‌ಮೆಂಟಲ್ ಹೈ ಕ್ಯಾ' ಮತ್ತು 'ಪಂಗಾ' ಸಿನಿಮಾಗಳಿಗಿಂತ ಕಡಿಮೆ ಗಳಿಸಿದೆ.
ಶುಕ್ರವಾರ ಬಾಲಿವುಡ್‌ನ ಎರಡು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮುಖಾಮುಖಿ ಆಗಿವೆ. ಕಂಗನಾ ರಣಾವತ್ ಅವರ ಧಾಕಡ್ ಮತ್ತು ಕಾರ್ತಿಕ್ ಆರ್ಯನ್, ಕೈರಾ ಅಡ್ವಾಣಿ ಅಭಿನಯದ 'ಭೂಲ್ ಭುಲೈಯಾ 2'. ಭೂಲ್ ಭುಲೈಯಾ 2 2022 ರ ಅತಿದೊಡ್ಡ ಬಾಲಿವುಡ್ ಓಪನರ್ ಆಗಿದ್ದರೆ, ಧಾಕಡ್ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗಿದೆ.
ಕಂಗನಾ ಅವರ ಚಿತ್ರವು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು, ಬಿಡುಗಡೆಯಾದ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕಂಗನಾ ಭರವಸೆಯನ್ನು ಧಾಕಡ್ ನುಚ್ಚುನೂರು ಮಾಡಿದೆ. ಚಿತ್ರದ ಆರಂಭದ ದಿನವೇ 4ರಿಂದ 5 ಕೋಟಿ ರುಪಾಯಿ ನಿರೀಕ್ಷೆ ಮಾಡಲಾಗಿತ್ತು ಆದರೆ ನಿರೀಕ್ಷೆಗೆ ತಕ್ಕಂತೆ ಚಿತ್ರಕ್ಕೆ ಬರಲಾಗಲಿಲ್ಲ. ಕಂಗನಾ ವೃತ್ತಿಜೀವನದ ಕೊನೆಯ ಎರಡು ಫ್ಲಾಪ್‌ಗಳಾದ 'ಜಡ್ಜ್‌ಮೆಂಟಲ್ ಹೈ ಕ್ಯಾ' ಮತ್ತು 'ಪಂಗಾ' ಗಿಂತ ಧಾಕಡ್‌ನ ಆರಂಭಿಕ ದಿನ ಕಡಿಮೆಯಾಗಿದೆ.
ಕಂಗನಾ ರಣಾವತ್ ಅವರ ಚಿತ್ರ ಧಾಕಡ್ ದೇಶದ ಸುಮಾರು 2200 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ವೆಚ್ಚ ಸುಮಾರು 85 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಕಂಗನಾ ಸುಮಾರು 20 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಚಿತ್ರದ ಆರಂಭಿಕ ಅಂಕಿಅಂಶಗಳನ್ನು ನೋಡಿದರೆ ಕಂಗನಾ ಶುಲ್ಕವನ್ನು ಹೊರತೆಗೆಯಲು ಸಹ ಧಾಕಡ್‌ಗೆ ಸಾಧ್ಯವಾಗುವುದಿಲ್ಲ.
ಇನ್ನೂ ಟ್ರೈಲರ್‌ನಿಂದ ಧಾಕಡ್ ಚಿತ್ರದ ಆರಂಭಿಕ ದಿನದಂದು ಆರಂಭಿಕ ಅಂಕಿಅಂಶಗಳ ಪ್ರಕಾರ ಕೇವಲ 1.20 ಕೋಟಿ ರೂ. ಗಳಿಸಿದೆ. ಚಿತ್ರದ ಬೆಳಗಿನ ಶೋಗಳು ಬಹುತೇಕ ಖಾಲಿಯಾಗಿದ್ದು, ಮಧ್ಯಾಹ್ನದವರೆಗೆ ಚಿತ್ರದ ಸ್ಥಿತಿ ತುಂಬಾ ಕೆಟ್ಟದಾಗಿದೆ.
‘ಢಾಕಡ್’ ಚಿತ್ರ ಮೊದಲ ದಿನ ಕಲೆಕ್ಷನ್ ಕೇವಲ ಅದು ಸಂಜೆ ಮತ್ತು ರಾತ್ರಿ ಶೋಗಳಿಂದ ನಡೆದಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ಸಾಕಷ್ಟು ಹಣ ಗಳಿಸಿದ್ದ ಝೀ ಸ್ಟುಡಿಯೋಸ್ 'ಧಾಕಡ್' ಬಿಡುಗಡೆ ಮಾಡಿದ್ದು, ಈ ಚಿತ್ರದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದೆಯಂತೆ.
ಮತ್ತೊಂದೆಡೆ, ಕಾರ್ತಿಕ್ ಆರ್ಯನ್ ಅಭಿನಯದ 'ಢಾಕಡ್' ಚಿತ್ರದ ಜೊತೆಗೆ ಬಿಡುಗಡೆಯಾದ 'ಭೂಲ್ ಭುಲೈಯಾ 2' ಮೊದಲ ದಿನವೇ ಬಚ್ಚನ್ ಪಾಂಡೆ, ಗಂಗೂಬಾಯಿ ಕಥಿಯಾವಾಡಿ ಸೇರಿದಂತೆ ಯಾವುದೇ ಬಾಲಿವುಡ್ ಚಿತ್ರ ಗಳಿಸಲು ಸಾಧ್ಯವಾಗದಂತಹ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಈ ವರ್ಷದ ಅತಿದೊಡ್ಡ ಓಪನಿಂಗ್ ಎಂದರೆ ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ', ಬಿಡುಗಡೆಯಾದ ಮೊದಲ ದಿನವೇ 13.25 ಕೋಟಿ ಗಳಿಸಿದೆ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ ಮತ್ತು ಟಬು ಅಭಿನಯದ ಚಿತ್ರ 'ಭೂಲ್ ಭುಲಯ್ಯ 2' ಈ ದಾಖಲೆಯನ್ನು ಮುರಿದು ಸುಮಾರು 14.75 ಕೋಟಿ ರೂ ಗಳಿಸಿದೆ
ಧಾಕಡ್‌ಗಿಂತ ಮೊದಲು ಕಂಗನಾ ರಣಾವತ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಕಡಿಮೆ ಓಪನಿಂಗ್ ಗಳಿಸಿದ ಚಿತ್ರಗಳು ಇಲ್ಲಿವೆ. ರಜ್ಜೋ: 2013 ರಲ್ಲಿ ಬಿಡುಗಡೆಯಾದ ಈ ಚಿತ್ರವು ತನ್ನ ಆರಂಭಿಕ ದಿನದಲ್ಲಿ 30 ಲಕ್ಷ ರೂಪಾಯಿ ಗಳಿಸಿತು. ತಲೈವಿ: ಕಂಗನಾ ಅವರ 2021 ರ ಚಿತ್ರವು ಆರಂಭಿಕ ದಿನದ ಕಲೆಕ್ಷನ್ 32 ಲಕ್ಷ ರೂ. ವೋ ಲಮ್ಹೆ: 2006 ರಲ್ಲಿ ಬಿಡುಗಡೆಯಾದ ಚಿತ್ರವು 82 ಲಕ್ಷ ರೂಪಾಯಿಗಳ ಆರಂಭಿಕ ಕಲೆಕ್ಷನ್ ಅನ್ನು ಹೊಂದಿತ್ತು. ಲೈಫ್ ಇನ್ ಎ ಮೆಟ್ರೋ: ಬಹುತಾರಾಗಣದ ಚಿತ್ರ, ಈ 2007 ರ ಚಿತ್ರ 87 ಲಕ್ಷ ಗಳಿಸಿತು. ಲುಟೇರಾ: ಈ ಚಿತ್ರವು ತನ್ನ ಆರಂಭಿಕ ದಿನದಲ್ಲಿ 1 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ವಿಯಾಗಿದೆ. 2006 ರಲ್ಲಿ ಬಿಡುಗಡೆಯಾದ ಈ ಚಿತ್ರ ಬಿಡುಗಡೆಯಾದ ದಿನವೇ 1.07 ಕೋಟಿ ಗಳಿಸಿತ್ತು.