ಇನ್ಮುಂದೆ ನಾನು ಏಕಾಂಗಿ ಎಂದು ಯಾವತ್ತೂ ಹೇಳಲ್ಲ; ಸಲ್ಮಾನ್ ಮಾತಿಗೆ ಕಂಗನಾ ಪ್ರತಿಕ್ರಿಯೆ

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕಂಗನಾ ಸಿನಿಮಾ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು, ಕಂಗನಾ ನಟನೆಯ ಬಹುನಿರೀಕ್ಷೆಯ ಧಾಕಡ್(Dhaakad) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಂಗನಾ ರಣಾವತ್ ಟ್ರೈಲರ್‌ಗೆ ಬಾಲಿವುಡ್‌ನ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Kangana Ranaut says Will never say again that I am alone after Salman Khan wishes Dhaakad sgk

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಕಂಗನಾ ಸಿನಿಮಾ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಹೌದು, ಕಂಗನಾ ನಟನೆಯ ಬಹುನಿರೀಕ್ಷೆಯ ಧಾಕಡ್(Dhaakad) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಂಗನಾ ರಣಾವತ್ ಟ್ರೈಲರ್‌ಗೆ ಬಾಲಿವುಡ್‌ನ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಕಂಗನಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ನಟಿ ಕಂಗನಾ ನೆಪೋಟಿಸಂ ವಿರುದ್ಧ ಕೂಗಾಡಿದ್ದರು. ಕರಣ್ ಜೋಹರ್(Karan Johar), ಸಲ್ಮಾನ್ ಖಾನ್(Salman Khan) ಸೇರಿದಂತೆ ಅನೇಕರ ವಿರುದ್ಧ ಆರೋಪ ಮಾಡಿದ್ದರು. ಇದೀಗ ಸಲ್ಮಾನ್ ಖಾನ್ ಕಂಗನಾ ಸಿನಿಮಾಗೆ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಂಗನಾ ಟ್ರೈಲರ್ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಂಗನಾ ರಣಾವತ್ ಧನ್ಯವಾದ ತಿಳಿಸಿದ್ದಾರೆ. ಕಂಗನಾ ಸಿನಿಮಾಗಳ ಬಗ್ಗೆ ಯಾವ ಸ್ಟಾರ್ ಕಲಾವಿದರು ಸಹ ಮಾತನಾಡುವುದಿಲ್ಲ. ಏನೇ ಹೇಳಿದರು ಕಂಗನಾ ಏನಾದರೂ ಕೆದಕಿ ತರಾಟೆ ತೆಗೆಯುತ್ತಾರೆ. ಹಾಗಾಗಿ ಕಂಗನಾ ತಂಟೆಗೆ ಹೋಗದಿರುವುದೇ ಲೇಸೆಂದು ಎಲ್ಲಾ ಸ್ಟಾರ್ ಕಲಾವಿದರು ಸೈಲೆಂಟ್ ಆಗಿರುತ್ತಾರೆ.

ಆದರೀಗ ಸಲ್ಮಾನ್ ಖಾನ್ ಕಡೆಯಿಂದ ಸಿಕ್ಕ ಬೆಂಬಲಕ್ಕೆ ಕಂಗನಾ ಫುಲ್ ಖುಷ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ದಬಂಗ್ ಹೀರೋಗೆ ಧನ್ಯವಾದಗಳು. ಗೋಲ್ಡನ್ ಹಾರ್ಟ್ ನಿಮ್ಮದು. ಇನ್ಮುಂದೆ ಚಿತ್ರರಂಗದಲ್ಲಿ ನಾನು ಏಕಾಂಗಿ ಎಂದು ನಾನು ಹೇಳುವುದಿಲ್ಲ. ಇಡೀ ಧಾಕಡ್ ಚಿತ್ರತಂಡದ ಪರವಾಗಿ ಧನ್ಯವಾದಗಳು' ಎಂದು ಕಂಗನಾ ಹೇಳಿದ್ದಾರೆ. ಅಲ್ಲದೇ ಇಡೀ ಧಾಕಡ್ ತಂಡ ಕೂಡ ಫುಲ್ ಖುಷ್ ಆಗಿದೆ. Kangana Ranaut says Will never say again that I am alone after Salman Khan wishes Dhaakad sgk

ಹುಡುಗರಿಗೆ ಹೊಡೆದಿದ್ದಾಳೆಂದು ಸುದ್ದಿ ಹಬ್ಬಿಸಿರುವುದೇ ನನ್ನ ಮದುವೆಯಾಗದಿರುವುದಕ್ಕೆ ಕಾರಣ: ಕಂಗನಾ ರಣಾವತ್

ಈ ಸಿನಿಮಾದಲ್ಲಿ ಕಂಗನಾ ಜೊತೆಗೆ ಅರ್ಜುನ್ ರಾಂಪಲ್, ದಿವ್ಯಾ ದತ್ತಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಸಿನಿಮಾಗೆ ರಜನೀಶ್ ಘಾಯ್ ಆಕ್ಷಯ್ ಕಟ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಜನೀಶ್, ಧಾಕಡ್ ನನ್ನ ಮೊದಲ ಚಿತ್ರವಾಗಿದ್ದು ಯಾವಾಗಲು ಹೃದಯಕ್ಕೆ ಹತ್ತಿರವಾಗಿರುತ್ತದೆ. ಕಂಗನಾ ಸಾಹಸದ ನಾಯಕಿ. ಕಂಗನಾ ನಟನಾ ಶಕ್ತಿ ಬಗ್ಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಅಂದಹಾಗೆ ಕಂಗನಾ ನಟನೆಯ ಧಾಕಡ್ ಸಿನಿಮಾ ಮೇ 20, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Salman Khan ಈದ್‌ ಪಾರ್ಟಿಯಲ್ಲಿ Kangana Ranaut, ಸಖತ್‌ ಖುಷಿಯಲ್ಲಿದ್ದ ನಟಿ!

ಕೆಲವು ದಿನಗಳ ಹಿಂದೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ಅವರ ಮನೆಯಲ್ಲಿ ನಡೆದ ಈದ್ ಪಾರ್ಟಿಯಲ್ಲಿ ಕಂಗನಾ ಕಾಣಿಸಿಕೊಂಡು ಎಲ್ಲರಿಗೂ ಸರ್‌ಪ್ರೈಸ್‌ ನೀಡಿದ್ದರು. ಅದೇ ಮೊದಲ ಬಾರಿಗೆ ಕಂಗನಾ  ಸಲ್ಮಾನ್‌ ಅವರ ಪಾರ್ಟಿಗೆ ಹಾಜಾರಾಗಿದ್ದು ಮತ್ತು  ಪಾರ್ಟಿಯಲ್ಲಿ ನಟಿ ತುಂಬಾ ಸಂತೋಷವಾಗಿದ್ದರು.

Latest Videos
Follow Us:
Download App:
  • android
  • ios