ತಿರುಪತಿಗೆ ಭೇಟಿ ನೀಡಿದ ನಟಿ ಕಂಗನಾ; ದೇವರ ದರ್ಶನ ಪಡೆದು ಹೇಳಿದ್ದೇನು?
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಸದ್ಯ ಬಹುನಿರೀಕ್ಷೆಯ ಧಾಕಡ್ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕಂಗನಾ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಸದ್ಯ ಬಹುನಿರೀಕ್ಷೆಯ ಧಾಕಡ್ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕಂಗನಾ ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ನಡುವೆ ಕಂಗನಾ ರಣಾವತ್ ತಿರುಪತಿಗೆ ಭೇಟಿ ನೀಡಿದ್ದಾರೆ. ಕಂಗನಾ ರಣಾವತ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ತಿರುಪತಿಗೆ ಭೇಟಿ ನೀಡಿರುವ ಫೋಟೋಗಳನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನಟಿ ಕಂಗನಾ ನೇರಳೆ ನೀಲಿ ಬಣ್ಣದ ಜರಿ ಸೀರೆ ಧರಿಸಿ ತಿರುಪತಿಗೆ ಆಗಮಿಸಿದ್ದರು. ಕಂಗನಾ ಭಕ್ತಿಯಿಂದ ವೆಂಕಟೇಶ್ವರನಲ್ಲಿ ಪ್ರಾರ್ಥನೆ ಮಾಡುತ್ತಿರುವ ಗಮನ ಸೆಳೆಯುತ್ತಿದೆ. ಅಂದಹಗಾ ಕಂಗನಾ ಈ ಮೊದಲು ಸಹ ತಿರುಪತಿಗೆ ಭೇಟಿ ನೀಡಿದ್ದರು.
ಫೋಟೋ ಶೇರ್ ಮಾಡಿರುವ ಕಂಗನಾ ಜೊತೆಗೆ, ಇಂದು ಶುಭ ಪೂರ್ಣಮಾದಂದು ನಾನು ಮತ್ತು ಧಾಕಡ್ ನಿರ್ಮಾಪಕ ದೀಪಕ್ ಕುಮಾರ್ ಮತ್ತು ಪತ್ನಿ ಕೃಷ್ಣ ಮುಖುತ್ ಇನ್ನು ಕೆಲವು ತಂಡದವರು ತಿರುಪತಿ ದರ್ಶನ ಪಡೆದೆವು. ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ವಿಷ್ಣುಮಂಚು ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸದ್ಯ ಧಾಕಡ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಧಾಕಡ್ ಟ್ರೈಲರ್‌ಗೆ ಬಾಲಿವುಡ್‌ನ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಕಂಗನಾಗೆ ಪ್ರತಿಕ್ರಿಯೆ ನೀಡಿದ್ದಾರೆ.
kangana
ಸಲ್ಮಾನ್ ಖಾನ್ ಧಾಕಡ್ ಟ್ರೈಲರ್ ಮೆಚ್ಚಿ ಪ್ರತಿಕ್ರಿಯೆ ನೀಡಿರುವುದು ಕಂಗನಾಗೆ ಸಂತಸ ತಂದಿದ್ದು. ಇದರಿಂದ ಕಂಗನಾ ಬಾಲಿವುಡ್‌ನಲ್ಲಿ ನಾನು ಯಾವತ್ತು ಒಂಟಿಯಲ್ಲ ಎಂದು ಹೇಳಿದ್ದರು. ಬಹಿನಿರೀಕ್ಷೆಯ ಧಾಕಡ್ ಸಿನಿಮಾ ಮೇ 20ರಂದು ತೆರೆಗೆ ಬರುತ್ತಿದೆ.