Cannes 2022: Deepika Padukoneಯ ರೆಡ್ ಕಾರ್ಪೆಟ್ ರೆಟ್ರೋ ಲುಕ್ ಟ್ರೋಲ್!
ಕೇನ್ಸ್ ಚಲನಚಿತ್ರೋತ್ಸವ 2022 (Cannes 2022) ಪ್ರಾರಂಭವಾಗಿದೆ. ಈವೆಂಟ್‌ನ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಲು ಭಾರತೀಯ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಈ ನಡುವೆ ದೀಪಿಕಾ ಪಡುಕೋಣೆ (Deepika Padukone) ಲುಕ್ ಹೊರಬಿದ್ದಿದೆ. ದೀಪಿಕಾ ಅವರು ಕಪ್ಪು ಮತ್ತು ಕಾಪರ್ ಕಲರ್ ಸೀರೆಯಲ್ಲಿ ಮಿಂಚಿದರು. ಆದರೆ ಅವರ ಲುಕ್ ಅನ್ನು ನೆಟಿಜನ್ಸ್ ಅಪಹಾಸ್ಯ ಮಾಡಲಾಗುತ್ತಿದ್ದಾರೆ. ದೀಪಿಕಾ ಅವರ ಲುಕ್ ಟ್ರೋಲ್ ಆಗಲು ಕಾರಣವೇನು ಗೊತ್ತಾ?

ದೀಪಿಕಾ ಕಪ್ಪು ಮತ್ತು ಗೋಲ್ಡನ್ ಬಣ್ಣದ ಸಬ್ಯಸಾಚಿ ಸೀರೆಯನ್ನು ಸ್ಟ್ರಾಪ್‌ಲೆಸ್ ಬ್ಲೌಸ್‌ನೊಂದಿಗೆ ಧರಿಸಿದ್ದರು. ತನ್ನ ನೋಟವನ್ನು ಪೂರ್ಣಗೊಳಿಸಲು, ದೀಪಿಕಾ ನಾಟಕೀಯ ಮೇಕಪ್ ಅನ್ನು ಸೇರಿಸಿದರು ಅದು ಅವರಿಗೆ ರೆಟ್ರೋ ಲುಕ್ ನೀಡಿತು.
ಬೋಲ್ಡ್ ಕಣ್ಣಿನ ಮೇಕಪ್ ದಪ್ಪನಾದ ಕಿವಿಯೋಲೆಗಳು, ಬೆರಳಿಗೆ ಉಂಗುರಗಳು, ಕಪ್ಪು ಉಗುರು ಬಣ್ಣ ಮತ್ತು ಉಬ್ಬಿದ-ಶೈಲಿಯ ಕೂದಲು ದೀಪಿಕಾ ಪಡುಕೋಣೆ ಅವರ ಅಂದವನ್ನು ಹೆಚ್ಚಿಸಿತ್ತು. ಆದರೆ ಮೇಕಪ್ ನಿಜವಾಗಿಯೂ ಫ್ಯಾಷನ್ ಪೊಲೀಸರಿಗೆ ಇಷ್ಟ ಆಗಲಿಲ್ಲ ಮತ್ತು ನಟಿ ಟ್ರೋಲ್‌ಗೆ ಗುರಿಯಾದರು.
'ಬ್ಲ್ಯಾಕ್ ಸ್ಮೋಕಿ ಐ ಎಂಬುದು ಇಲ್ಲ ಎಂದು ಯಾರಾದರೂ ಪ್ಲೀಸ್ ಅವಳಿಗೆ ತಿಳಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಅವಳ ಕಣ್ಣುಗಳಿಗೆ ಸಂಪೂರ್ಣ ಐಲೈನರ್ ಬಾಟಲಿ ಹಾಕಬೇಕಾಗಿರಲಿಲ್ಲ' ಎಂದು ಒಬ್ಬರು ಬರೆದಿದ್ದಾರೆ.
'ಈ ಸಮಾರಂಭದ ನಂತರ ಆಕೆಯ ಮೇಕಪ್ ಕಲಾವಿದನನ್ನು ವಜಾಗೊಳಿಸಲಾಗುತ್ತದೆ' ಎಂದು ಇನ್ನೊಬ್ಬರು ಬರೆದರು. 'ಕೇನ್ಸ್‌ನಲ್ಲಿ ಕ್ಲಾಸಿ ಆಯ್ಕೆಯಾಗಿಲ್ಲ' ಎಂದು ಇನ್ನೊಬ್ಬರು ಹೇಳಿದರು. ಅದೇ ಸಮಯದಲ್ಲಿ 'ನೀವು ಸುಂದರವಾಗಿದ್ದೀರಿ, ನೋಟವು ಸ್ವಲ್ಪ ಟ್ಯಾಕಿಯಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.'ಇದುವರೆಗಿನ ಅತಿಕೆಟ್ಟ ಕಣ್ಣಿನ ಮೇಕಪ್. ಅವಳಿಗೆ ಸರಿಹೊಂದುವುದಿಲ್ಲ' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
deepika
'ಹೊಸದೇನೂ ಇಲ್ಲ.. ಕೆಲವು ವರ್ಷಗಳಿಂದ ನೀವು ಧರಿಸಿರುವ ಅದೇ ರೀತಿಯ ಸಂಗ್ರಹಣೆ.. #RIP_INDIAN_BIGDESIGERS' ಎಂದು ಬಳಕೆದಾರರು ಬರೆದಿದ್ದಾರೆ. ಒಟ್ಟಿನಲ್ಲಿ ಆಕೆಯನ್ನು ತುಂಬಾ ಇಷ್ಟ ಪಡುತ್ತಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಕಣ್ಣಿನ ಮೇಕಪ್ ಬಗ್ಗೆ ತಮಾಷೆ ಮಾಡಲಾಗುತ್ತಿದೆ.
ఈ గ్లోబల్ ఫెస్టివల్ ఫ్రాన్స్ లోని కేన్స్ నగరంలో గల ఓ కన్వెన్షన్ సెంటర్ పలైస్ డెస్ లో ఈ ఈవెంట్ బ్రహ్మండగా కొనసాగుతోంది. ఈ గ్లోబల్ ఈవెంట్ కు జూరీ మెంబర్ గా రెండు రోజుల ముందే హాజరైంది దీపికా. అంతకు ముందు యూఎస్ లో ఓ బ్రాండ్ ప్రమోషన్ కార్యక్రమంలో పాల్గొంది.
Image: Getty Images
ಟ್ವಿಟ್ಟರ್‌ನಲ್ಲಿ ಮತ್ತೊಬ್ಬ ಬಳಕೆದಾರರು ದೀಪಿಕಾ ಪಡುಕೋಣೆ ಅವರ ಕೇನ್ಸ್ ನೋಟವನ್ನು ಅವರ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ' ನಲ್ಲಿ ಹೋಲಿಸಿದ್ದಾರೆ. ಬಳಕೆದಾರರು ಹೇಳಿದರು, ಇದಕ್ಕಿಂತ ಓಂ ಶಾಂತಿ ಓಂ ನಲ್ಲಿಯೇ ಬೆಟರ್ ಆಗಿತ್ತು' ಎಂದಿದ್ದಾರೆ.
Image: Getty Images
ಈ ನಡುವೆ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ನೇತೃತ್ವದ ಭಾರತೀಯ ನಿಯೋಗವು ಭಾರತೀಯ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಎಆರ್ ರೆಹಮಾನ್‌ನಿಂದ ಹಿಡಿದು
ನಯನತಾರಾ, ತಮನ್ನಾ ಭಾಟಿಯಾ, ನವಾಜುದ್ದೀನ್ ಸಿದ್ದಿಕಿ ಮತ್ತು ಮುಂತಾದವರು ಠಾಕೂರ್ ಸೇರಿದಂತೆ ಎಲ್ಲಾ ಭಾರತೀಯ ತಾರೆಗಳು ಸಾಂಪ್ರದಾಯಿಕ ಉಡುಪಿನಲ್ಲಿ ಕಂಡುಬಂದರು.