Cannes 2022: ಭಾರತದ ಪ್ರತಿನಿಧಿ Deepika Padukone;ಜ್ಯೂರಿಯಾಗಿ ನಟಿ!
ಕೇನ್ಸ್ ಫಿಲ್ಮ್ ಫೆಸ್ಟಿವಲ್ (Cannes 2022) ವಿಶ್ವದ ಟಾಪ್ ಫಿಲ್ಮ್ ಇವೆಂಟ್‌ಗಳಲ್ಲಿ ಒಂದಾಗಿದೆ. ಈ ವರ್ಷ ಬಾಲಿವುಡ್‌ನ ದಿವಾ ದೀಪಿಕಾ ಪಡುಕೋಣೆ (Deepika Padukone) ಜ್ಯೂರಿ ಆಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದೀಪಿಕಾ ವಿಶ್ವದಾದ್ಯಂತ ಮನರಂಜನಾ ಉದ್ಯಮದ ಇತರ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ತೀರ್ಪುಗಾರರ ಸದಸ್ಯರಾಗಿ ಚಲನಚಿತ್ರೋತ್ಸವದ ಭಾಗವಾಗಿದ್ದಾರೆ.
ಇತ್ತೀಚೆಗೆ ದೀಪಿಕಾ ಪಡುಕೋಣೆ 75ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ತೀರ್ಪುಗಾರರಲ್ಲಿ ಏಕೈಕ ಭಾರತೀಯ ಎಂಬ ಹೆಡ್ ಲೈನ್ಸ್ ಮಾಡಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವವು ಮೇ 16-ಮೇ 28 ರ ನಡುವೆ ನಡೆಯಲಿದೆ.
ನಿನ್ನೆ ರಾತ್ರಿ ಈ ಬಾಲಿವುಡ್ ನಟಿ ಮುಂಬೈನಿಂದ ಫ್ರೆಂಚ್ ರಿವೇರಿಯಾಗೆ ಹೊರಟರು. ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ದೀಪಿಕಾ ಫ್ರಾನ್ಸ್‌ಗೆ ತೆರಳುವಾಗ ಏರ್‌ಪೋರ್ಟ್‌ನಲ್ಲಿ ಪಾಪಾರಾಜಿಗಳ ಕ್ಯಾಮಾರಕ್ಕೆ ಸಿಕ್ಕರು.
ನಟಿಯ ಈ ಸಮಯದ ಫೋಟೋಗಳು ವೈರಲ್ ಆಗಿವೆ. ಲೆಮನ್ ಎಲ್ಲೋ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡ ದೀಪಿಕಾ ಮಿನಿಮಮ್ ಮೇಕಪ್ ಧರಿಸಿದ್ದರು ಮತ್ತು ಕಂಫರ್ಟಬಲ್ ಪ್ರಯಾಣಕ್ಕಾಗಿ ಕೂದಲನ್ನು ಪೋನಿಟೇಲ್‌ನಲ್ಲಿ ಬಂಧಿಸಿದ್ದರು.
ಕಪ್ಪು ಹ್ಯಾಂಡ್ ಬ್ಯಾಂಗ್ ಮತ್ತು ಕಪ್ಪು ಬೂಟುಗಳೊಂದಿಗೆ ತನ್ನ ಲುಕ್ ಅನ್ನು ಪೂರ್ಣಗೊಳಿಸಿದ್ದ ನಟಿ ಪಾಪಾರಾಜಿಗಳಿಗೆ ನಗುವಿನೊಂದಿಗೆ ಪೋಸ್ ನೀಡಿದರು ಮತ್ತು ಅವರತ್ತ ಕೈಬೀಸಿದರು.
ವಿಶ್ವದ ಅತ್ಯಂತ ಪ್ರಸಿದ್ಧ ಚಲನಚಿತ್ರೋತ್ಸವಗಳಲ್ಲಿ ಒಂದಾದ ಇದರಲ್ಲಿ ಭಾರತವನ್ನು ಪ್ರತಿನಿಧಿಸುವ ದೀಪಿಕಾ ಪಡುಕೋಣೆ, ಮೇ 16 ರಿಂದ 28 ರವರೆಗೆ ಎರಡು ವಾರಗಳ ಕಾಲ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಅವರು ಈ ಅವಧಿಯವರೆಗೆ ಅಲ್ಲಿಯೇ ಇರುತ್ತಾರೆ
ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರ ಅಧ್ಯಕ್ಷತೆಯಲ್ಲಿ ನಡೆವ 75 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಎಂಟು ತೀರ್ಪುಗಾರರ ಸದಸ್ಯರಲ್ಲಿ ಒಬ್ಬರು.