ಬಿಕಿನಿ ಬಿಟ್ಹಾಕಿ, ಮಹಾರಾಷ್ಟ್ರದಲ್ಲಿ ವೋಟ್ ಹಾಕಲು ಹೋದಾಗಲೂ ಡಿಪ್ಪಿ ವಿರುದ್ಧ ವಿವಾದವಾಗಿತ್ತು!
ಇಂದು ಬಾಲಿವುಡ್‌ನ ಮೋಸ್ಟ್ ಫೇಮಸ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಹುಟ್ಟುಹಬ್ಬ. 1986 ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದ ದೀಪಿಕಾ ಮಾಡೆಲಿಂಗ್ ಮಾಡುವ ಸಮಯದಲ್ಲಿಯೇ ನಟನಾ ಜಗತ್ತಿಗೆ ಕಾಲಿಟ್ಟರು. ಹಿಮೇಶ್ ರೇಶಮಿಯಾ ಅವರ ಪಾಪ್ ಆಲ್ಬಂ ಆಪ್ ಕಾ ಸುರೂರ್‌ನ ಮ್ಯೂಸಿಕ್ ವಿಡಿಯೋದಲ್ಲಿ ನಾಮ್ ಹೈ ತೇರಾ ಹಾಡಿನಲ್ಲಿ ನಟಿಸುವ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಆಕೆ ಹಿಂದಿರುಗಿ ನೋಡಲೇ ಇಲ್ಲ, ಆದರೆ ದೀಪಿಕಾ ಪಡುಕೋಣೆ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಂತೆ ಅವರು ಹಲವು ವಿವಾದಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರು., ಅವರ ಜೀವನಕ್ಕೆ ಸಂಬಂಧಿಸಿದ ವಿವಾದಗಳ ವಿವರ ಇಲ್ಲಿದೆ.
ದೀಪಿಕಾ ಪಡುಕೋಣೆ ಅವರ ಚಿತ್ರಗಳು ಅವರ ನಟನೆಗಿಂತ ಕಥಾ ವಸ್ತು ಮತ್ತು ಅದರ ಅಸಭ್ಯತೆಯ ಕಾರಣದಿಂದಾಗಿ ಹೆಚ್ಚು ಚರ್ಚೆಯಾಗುತ್ತವೆ. ಈ ಕಾರಣದಿಂದ ಅವರು ಅನೇಕ ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ
ಜೆಎನ್‌ಯುನಲ್ಲಿ ತುಕ್ಡೆ-ತುಕ್ಡೆ ಗ್ಯಾಂಗ್‌ಗೆ ದೀಪಿಕಾ ಪಡುಕೋಣೆ ಬೆಂಬಲ ನೀಡಿದ್ದು, ದೊಡ್ಡ ವಿವಾದವಾಗಿತ್ತು. ಅವರು ತಮ್ಮ ಹೋಮ್ ಪ್ರೊಡಕ್ಷನ್‌ನ ಮಹತ್ವಾಕಾಂಕ್ಷೆಯ ಚಿತ್ರ 'ಛಪಕ್' ಪ್ರಚಾರ ಜೆಎನ್‌ಯುಗೆ ಬೇಟಿ ನೀಡಿದ್ದರು.
ಇದಕ್ಕೂ ಮುನ್ನ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗಿದರು. ಮತ್ತೊಂದೆಡೆ, ಈ ವಿದ್ಯಾರ್ಥಿಗಳನ್ನು ಬೆಂಬಲಿಸಲು ದೀಪಿಕಾ ಅಲ್ಲಿಗೆ ಬಂದಾಗ, ಇಂಟರ್ನೆಟ್‌ನಲ್ಲಿ ಅವರ ವಿರುದ್ಧ ಜನ ಕಿಡಿಕಾರಿದರು. ಇದಾದ ನಂತರ ಛಪಾಕ್ ಚಿತ್ರಕ್ಕೆ ಬಹಿಷ್ಕಾರ ಶುರುವಾಯಿತು.
'
ಜೆಎನ್‌ಯು ವಿವಾದ ನಂತರ ಛಪಾಕ್ ಚಿತ್ರವನ್ನೂ ಬಹಿಷ್ಕರಿಸಲಾಯಿತು. ಅದೇ ಸಮಯದಲ್ಲಿ, ಸತ್ಯ ಘಟನೆಯನ್ನು ಆಧರಿಸಿದ ಈ ಚಿತ್ರದಲ್ಲಿ ಮುಸ್ಲಿಂ ಆರೋಪಿಗಳನ್ನು ಹಿಂದೂ ಎಂದು ಕರೆಯುವ ಬಗ್ಗೆ ಸಾಕಷ್ಟು ವಿವಾದಗಳು ಬುಗಿಲೆದ್ದವು. ಈ ಸಿನಿಮಾ ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿಯನ್ನು ಆಧರಿಸಿದೆ. ನಿಜವಾಗಿ ಆಕೆಯ ಮೇಲೆ ಆ್ಯಸಿಡ್ ಎರಚಿದ ಆರೋಪಿ ಮುಸ್ಲಿಂ ಆಗಿದ್ದರೆ, ಚಿತ್ರದಲ್ಲಿ ಹಿಂದೂ ಹುಡುಗನೊಬ್ಬ ಆರೋಪಿ ಎಂದು ಹೇಳಲಾಗಿದೆ ಎಂಬ ಬಗ್ಗೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ನಾರ್ಕೋಟಿಕ್ಸ್ ತನಿಖೆಯನ್ನು ಪ್ರಾರಂಭಿಸಿದಾಗ, ದೀಪಿಕಾ ಅವರ ಚಾಟ್‌ನಿಂದ ಅವರು ಡ್ರಗ್ಸ್ ಸೇವಿಸುತ್ತಾರೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ಅವರ ಡ್ರಗ್ಸ್ ಬಳಕೆಯು ಅವರ ಮಾಜಿ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರ ಜತೆಯ WhatsApp ಚಾಟ್ ಮೂಲಕ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ 2020 ರಲ್ಲಿ, ಈ ವಿಷಯದಲ್ಲಿ ದೀಪಿಕಾ ಅವರನ್ನು ಎನ್‌ಸಿಬಿ ಹಲವಾರು ಗಂಟೆಗಳ ಕಾಲ ಪ್ರಶ್ನಿಸಿತು. ನಂತರ ದೀಪಿಕಾ ಕುರಿತ ಹಲವು ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇತ್ತೀಚೆಗೆ ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿಗೆ ಭಾರೀ ಹಿನ್ನಡೆ ಎದುರಿಸಿದ್ದಾರೆ. ಚಿತ್ರಕ್ಕೆ ಬಹಿಷ್ಕಾರದ ಬೆದರಿಕೆ ಹಾಕಲಾಗಿದೆ. ಅದೇ ಸಮಯದಲ್ಲಿ, ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಕೂಡ ಕೇಸರಿ ಬಣ್ಣವನ್ನು ಅವಮಾನಿಸಿದವರ ಮುಖ ಒಡೆಯುವುದಾಗಿ ಬೆದರಿಕೆ ಹಾಕಿದ್ದರು.
ದೀಪಿಕಾ ಪಡುಕೋಣೆ ಅವರ ಪದ್ಮಾವತ್ ಚಿತ್ರದ ನಾಯಕನಿಗೆ ಹೋಲಿಸಿದರೆ ಖಳನಾಯಕನ ಚಿತ್ರಣವನ್ನು ಉತ್ಪ್ರೇಕ್ಷಿಸಿದ್ದಕ್ಕಾಗಿ ಕರ್ಣಿ ಸೇನೆ ಮತ್ತು ಇತರ ಸಂಘಟನೆಗಳು ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟಿಸಿದವು ಮತ್ತು ಪದ್ಮಾವತಿಯು ಮೊಘಲ್ ದೊರೆಯೊಂದಿಗೆ ಕನಸಿನಲ್ಲಿ ರೊಮ್ಯಾನ್ಸ್ ಮಾಡುವ ದೃಶ್ಯವಿತ್ತು. ಇದನ್ನು ವಿರೋಧಿಸಿ ರಾಜಸ್ಥಾನದಲ್ಲಿ ಶೂಟಿಂಗ್ ವೇಳೆ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆದಿದೆ. ದೀಪಿಕಾ ಪಡುಕೋಣೆಗೂ ಬೆದರಿಕೆ ಹಾಕಲಾಗಿತ್ತು.
ದೀಪಿಕಾ ಖಂಡಿತವಾಗಿಯೂ ಭಾರತೀಯ ಮೂಲದವರು. ಆದರೆ ಅವರು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಜನಿಸಿದ ಕಾರಣ ಮಹಾರಾಷ್ಟ್ರ ಚುನಾವಣೆಯಲ್ಲಿ ಮತ ಚಲಾಯಿಸಲು ದೀಪಿಕಾ ಆಗಮಿಸಿದಾಗ, ಜನರು ಅವರ ಪೌರತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.