'ಬೇಶರಂ ರಂಗ್'ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?
ಬಿಡುಗಡೆಗೂ ಮುನ್ನವೇ ಭಾರಿ ವಿವಾದ ಸೃಷ್ಟಿಸಿರುವ ಪಠಾಣ್ ಚಿತ್ರದ ಬಿಡುಗಡೆ ಮುಂದೂಡಿಕೆ ಆಗುತ್ತದೆಯೆ? ಏನಿದು ಗಲಾಟೆ?
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ವಿವಾದ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಚಿತ್ರದಲ್ಲಿನ ಭಾರಿ ವೈರಲ್ ಆಗಿರುವ ಹಾಡು 'ಬೇಶರಂ ರಂಗ್'ನಲ್ಲಿ ಕೇಸರಿ ಬಿಕಿನಿ (Bikini) ತೊಟ್ಟು ದೀಪಿಕಾ ಪಡುಕೋಣೆ ಅಭಿನಯಿಸಿರುವುದು ಹಿಂದೂಗಳನ್ನು ಕೆರಳಿಸಿದೆ. ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣದ ಬಿಕಿನಿ ತೊಟ್ಟು 'ಬೇಶರಂ ರಂಗ್' ಎಂದು ಹಾಡಲಾಗಿದೆ ಎನ್ನುವ ಕಾರಣಕ್ಕೆ ಈ ಚಿತ್ರ ಬೈಕಾಟ್ (boycott)ಬಿಸಿಯನ್ನು ಅನುಭವಿಸುತ್ತಿದೆ.
ಸಾಲದು ಎಂಬುದಕ್ಕೆ ಇದಾಗಲೇ ಹಲವು ಗಣ್ಯರಿಂದ ಈ ಇಡೀ ಚಿತ್ರವೇ ಛೀಮಾರಿ ಹಾಕಿಸಿಕೊಂಡಿದೆ. ಚಿತ್ರವನ್ನು ನೋಡದಂತೆ ಸಾಮಾಜಿಕ ಜಾಲತಾಣದಲ್ಲಿ ಬೈಕಾಟ್ ಪಠಾಣ್ ಹ್ಯಾಷ್ಟ್ಯಾಗ್ (hashtag) ಅಡಿ ದೊಡ್ಡ ಅಭಿಯಾನವೇ ಶುರುವಾಗಿದ್ದು, ಪಠಾಣ್ ತಂಡವನ್ನು ನಿದ್ದೆಗೆಡಿಸಿದೆ.
ಶಾರುಖ್ ಖಾನ್‌ರ ಪಠಾಣ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಬೇಷರಂ ರಂಗ್ ಹಾಡು ಕದ್ದಿದ್ದಾ?
ಇದೇ ತಿಂಗಳು 25ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾಯ್ಕಾಟ್ ಬಿಸಿ ಒಂದೆಡೆಯಾದರೆ, ಸೆನ್ಸಾರ್ ಮಂಡಳಿಯಿಂದಲೂ ಒಂದಿಷ್ಟು ಬದಲಾವಣೆ ಸೂಚಿಸಲಾಗಿರುವುದು ಇನ್ನೊಂದೆಡೆ. ಬೇಶರಂ ರಂಗ್ ಹಾಡು ಮತ್ತು ಚಿತ್ರದಲ್ಲಿನ ಕೆಲವೊಂದು ಸೀನ್ಗಳಲ್ಲಿ ಬದಲಾವಣೆ ಮಾಡಿಕೊಂಡು ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಸೆನ್ಸಾರ್ ಮಂಡಳಿ ಸೂಚಿಸಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುತ್ತದೆ ಹಾಗೂ ದೀಪಿಕಾ ಪಡುಕೋಣೆ (Deepika Padukone) ಅವರ ಕೇಸರಿ ಬಣ್ಣದ ಬಿಕಿನಿ ಕಳಚಿ ಬೇರೆ ಬಣ್ಣ ಬರುವ ಸಾಧ್ಯತೆ ಇದೆ ಎಂಬ ಬಲವಾದ ಸುದ್ದಿ ಹರಿದಾಡುತ್ತಿದೆ. ಚಿತ್ರದ ಶೀರ್ಷಿಕೆಯನ್ನೂ ಬದಲಾಯಿಸಿ, ಕೇಸರಿ ಬಿಕಿನಿಯನ್ನೂ ಬದಲಾಯಿಸಲು ಚಿತ್ರ ತಯಾರಕರು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
Shah Rukh Khan; ನಾನು ರಾತ್ರಿ ಬ್ಯಾಟ್‌ಮ್ಯಾನ್ ಬೆಳಗ್ಗೆ ಸೂಪರ್‌ಮ್ಯಾನ್; 'ಪಠಾಣ್' ಸ್ಟಾರ್ ಹೇಳಿಕೆ ವೈರಲ್
ಅಷ್ಟಕ್ಕೂ ಈ ಸುದ್ದಿಯನ್ನು ಹರಿಬಿಟ್ಟವರು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್.ಖಾನ್ (KRK). ಇದು ಭಾರಿ ಸುದ್ದಿಯಾಗುತ್ತಲೇ ಶಾರುಖ್ ಖಾನ್ ಮತ್ತು ದೀಪಿಕಾ ಅಭಿಮಾನಿಗಳನ್ನು ದಂಗಾಗಿಸಿದೆ. ಈಗಿರುವ ರೀತಿಯಲ್ಲಿಯೇ ಚಿತ್ರ ಬಿಡುಗಡೆಗೊಂಡರೆ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಚಿತ್ರ ಬಿಡುಗಡೆ ದಿನಾಂಕವನ್ನು ಎಲ್ಲಾ ಬದಲಾವಣೆಯೊಂದಿಗೆ ಮುಂದೂಡಲಾಗುತ್ತದೆ ಎಂದು ಕೆಆರ್ಕೆ ಹೇಳಿದ್ದಾರೆ.
ಅಷ್ಟಕ್ಕೂ ಕೆಆರ್ಕೆ ಅವರು ಹೇಳಿರುವ ಮಾತುಗಳನ್ನು ನಂಬುವಂತೆ ಇಲ್ಲ. ಆದರೂ ಈಗಿರುವ ಸನ್ನಿವೇಶಗಳನ್ನು ಗಮನಿಸಿದರೆ ಇವರ ಮಾತು ಸತ್ಯವಾಗುವಂತೆ ಕಾಣಿಸುತ್ತಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇದು ಶಾರುಖ್ (Shahrukh Khan) ಮತ್ತು ದೀಪಿಕಾ ಅಭಿಮಾನಿಗಳ ನಿದ್ದೆಗೆಡಿಸಿದೆ. ಈ ತಿಂಗಳಿನಲ್ಲಿಯೇ ತಮ್ಮ ನೆಚ್ಚಿನ ತಾರೆಯರ ಚಿತ್ರ ನೋಡಲು ಕಾತರರಾಗಿ ಕುಳಿತಿದ್ದ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಎಲ್ಲವೂ ಸರಿಯಾಗಿಯೇ ಇದ್ದಿದ್ದರೆ ಇಷ್ಟರಲ್ಲಿಯೇ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಬೇಕಿತ್ತು. ಆದರೆ ಅದಿನ್ನೂ ಬಿಡುಗಡೆಯಾಗಿಲ್ಲ. ಆದರೆ ಇದರ ನಡುವೆಯೇ ನಿರ್ದೇಶಕ ಸಿದ್ದಾರ್ಥ್ ಆನಂದ್ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡಿದ್ದರೂ ಈ ಚಿತ್ರದ ಟ್ರೇಲರ್ ಎಂದು ಹೇಳಿಕೊಂಡಿರುವ ಟ್ರೇಲರ್ ಲೀಕ್ ಆಗಿದೆ. ‘ಪಠಾಣ್’ ಟ್ರೇಲರ್ (Pathan Trailor) ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಕೂಡ ಚಿತ್ರ ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ. ಆದರೆ ಅಧಿಕೃತ ಟ್ರೇಲರ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಮುಂದೂಡಿಕೆ ಆಗುತ್ತದೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.
ಅದೇ ಇನ್ನೊಂದೆಡೆ, ಕಮಾಲ್ ಆರ್. ಖಾನ್ ವಿರುದ್ಧ ಅಭಿಮಾನಿಗಳು ಹರಿಹಾಯ್ದಿದ್ದಾರೆ. ಇವರ ಈ ಮಾತು ಸಂಪೂರ್ಣ ಸುಳ್ಳು. ಇದೇ ತಿಂಗಳು ಯಾವುದೇ ಬದಲಾವಣೆ ಇಲ್ಲದೆಯೇ ಮೂಲ ರೂಪದಲ್ಲಿಯೇ ಪಠಾಣ್ ತೆರೆ ಮೇಲೆ ಬರುತ್ತಿದೆ. ಶಾರುಖ್ ಖಾನ್ ಎಂದಿಗೂ ಕಿಂಗ್ ಎಂದು ಸಮರ್ಥಿಸಿಕೊಂಡು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಗಲಾಟೆಯಾಗುತ್ತಿದ್ದರೂ ಚಿತ್ರತಂಡ ಮಾತ್ರ ಮೌನಕ್ಕೆ ಜಾರಿದ್ದು, ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.
ಅಂದಹಾಗೆ, 57 ವರ್ಷದ ಶಾರುಖ್ ಖಾನ್ ಅವರು ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಬಹಳ ಶ್ರಮ ಪಟ್ಟಿದ್ದಾರೆ. ದೀಪಿಕಾ ಪಡುಕೋಣೆ ಬಿಕಿನಿ ಧರಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.