Asianet Suvarna News Asianet Suvarna News

ನಾಳೆ ಪಾರ್ನ್ ಸಿನಿಮಾನೂ ಮಾಡ್ತೀರಿ; ಶಾರುಖ್ 'ಪಠಾಣ್' ವಿರುದ್ಧ 'ಶಕ್ತಿಮಾನ್' ಮುಖೇಶ್ ಖನ್ನಾ ಕಿಡಿ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿರುದ್ಧ ಶಕ್ತಿಮಾನ್ ಖ್ಯಾತಿಯ ನಟ ಮುಖೇಶ್ ಖನ್ನಾ ಕಿಡಿ ಹಾಕಿದ್ದಾರೆ. 

Mukesh Khanna slams Shah Rukh Khan and Deepika starrer Pathaan sgk
Author
First Published Jan 3, 2023, 3:38 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಸದ್ಯ ಬಾಲಿವುಡ್ ನ ಹಾಟ್ ಟಾಪಿಕ್ ಆಗಿದೆ. ಈ ಸಿನಿಮಾದ ಬೇಷರಂ ರಂಗ್ ಹಾಡು ರಿಲೀಸ್ ಆಗಿ ಅನೇಕ ದಿನಗಳು ಕಳೆದರು ಈ ಬಗ್ಗೆ ಚರ್ಚೆ ನಿಂತಿಲ್ಲ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ನಟನೆಯ ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗುತ್ತಿದ್ದಂತೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಹಾಡಿನ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಕೇಸರಿ ಬಿಕಿನಿ ಧರಿಸಿದ್ದ ದೀಪಿಕಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹಾಡನ್ನು ಬ್ಯಾನ್ ಮಾಡಬೇಕು, ಪಠಾಣ್ ಸಿನಿಮಾ ಬ್ಯಾನ್ ಮಾಡಬೇಕೆಂದು ಒಂದು ವರ್ಗ ಶಾರುಖ್ ವಿರುದ್ಧ ರೊಚ್ಚಿಗೆದ್ದಿತ್ತು. ಇದೀಗ ಬಾಲಿವುಡ್ ನ ಮತ್ತೋರ್ವ ನಟ, ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ಕೂಡ ಪಠಾಣ್ ವಿರುದ್ಧ ಸಿಡಿದೆದ್ದಿದ್ದಾರೆ. ಶಾರುಖ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹಿರಿಯ ನಟ ಮುಖೇಶ್ ಖನ್ನಾ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊದ ಶೇರ್ ಮಾಡಿ, 'ಕೇಸರಿ ಬಣ್ಣದ ಬಿಕಿನಿ ಹಾಕಿಸಿ ನಾಯಕಿ ಬಳಿ ಡ್ಯಾನ್ಸ್ ಮಾಡಿಸ್ತೀರಿ. ಇಷ್ಟೇ ಅಲ್ಲ, ನೋಡಿ ಈ ಕೇಸರಿ ಬಣ್ಣದ ಬಿಕಿನಿಯನ್ನು ನೋಡಿ ಎಂದು ನೀವು ಜೂಮ್ ಇನ್ ಮಾಡಿ ಜನರಿಗೆ ತೋರಿಸುತ್ತೀರಿ. ಎಷ್ಟೊಂದು ಅಸಭ್ಯತೆ ಮತ್ತು ಅಶ್ಲೀಲತೆ. ಅಷ್ಟೆಯಲ್ಲದೆ ಹಾಡಿನ ಸಾಹಿತ್ಯದಲ್ಲೂ ನಾಚಿಕೆಯಿಲ್ಲದ ಬಣ್ಣ ಹೇಳುತ್ತೀರಿ. ಅಶ್ಲೀಲ ಅವಮಾನ' ಎಂದು ಪಠಾಣ್ ವಿರುದ್ಧ ಕಿಡಿ ಕಾರಿದ್ದಾರೆ. ಅಷ್ಟೆಯಲ್ಲದೆ, 'ನೀವು ಇದನ್ನು ಅಶ್ಲೀಲವಾಗಿ ಕಾಣದಿದ್ದರೆ ನಾಳೆ ನೀವು ಪಾರ್ನ್ ಸಿನಿಮಾವನ್ನು ಮಾಡುತ್ತೀರಿ' ಎಂದು ಹೇಳಿದರು. 

ಮಗಳ ಬಿಕಿನಿ ಫೋಟೋ ಕಳುಹಿಸಿ ಜೀವ ಬೆದರಿಕೆ ಹಾಕ್ತಿದ್ದಾರೆ; ಶಾರುಖ್ ಅಭಿಮಾನಿಗಳ ವಿರುದ್ಧ ಆಗ್ನಿಹೋತ್ರಿ ಆರೋಪ

ಮುಖೇಶ್ ಖನ್ನಾ ಮಾತಿಗೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ತರಹೇವಾರಿ ಕಾಮೆಂಟ್ ಮಾಡಿ, 'ಸರ್ ಶಕ್ತಿಮಾನ್ ವರೆಗೂ ಚೆನ್ನಾಗಿ ಇದ್ರಿ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ನೆಟ್ಟಿಗ ಪ್ರತಿಕ್ರಿಯೆ ನೀಡಿ, 'ಬಣ್ಣ ಯಾವುದೇ ಜಾತಿ ಅಥವಾ ಧರ್ಮಕ್ಕೆ ಸಂಬಂಧಿಸಿಲ್ಲ' ಎಂದಿದ್ದಾರೆ. ಬಣ್ಣ ಯಾವುದೇ ಜಾತಿ, ಧರ್ಮ ಹೊಂದಿಲ್ಲ ಎಂದು ಹೇಳಿದ್ದಾರೆ. ಇಂಥ ದೃಶ್ಯಗಳು ಚಿತ್ರರಂಗದಲ್ಲಿ ಈ ಹಿಂದೆಯೂ ನಡೆದಿದೆ ಎಂದು ಹೇಳಿದ್ದಾರೆ.

ಬೇಶರಂ ರಂಗ್ ನಂತರ ಮತ್ತೊಂದು ಹಾಡಿನ ಗದ್ದಲ; ಬೆಂಕಿ ಹಂಚಿದ ದೀಪಿಕಾ ಶಾರುಖ್‌ ಡ್ಯಾನ್ಸ್ ಮೂವ್ಸ್‌!

ಪಠಾಣ್, ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ. ಅನೇಕ ವರ್ಷಗಳ ಬಳಿಕ ಶಾರುಖ್ ಪಠಾಣ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ದೀಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಜನವರಿ 25 ಪಠಾಣ್ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. 

Follow Us:
Download App:
  • android
  • ios