ಆಮೀರ್ ಖಾನ್‌ಗೆ ಮತ್ತೊಂದು ಹೊಡೆತ: OTTಯಲ್ಲೂ ಲಾಲಾ ಸಿಂಗ್ ಚಡ್ದಾಗೆ ಏಟು!
ಸತತ 3 ಫ್ಲಾಪ್ ಚಿತ್ರಗಳ ನಂತರ, ಅಕ್ಷಯ್ ಕುಮಾರ್ (Akshay Kumar) ಈಗ ತಮ್ಮ ಕೆರಿಯರ್‌ಗೆ ತೊಂದರೆಯಾಗದಂತೆ ಮೈಂಡ್ ಗೇಮ್ಸ್ ಆಡುತ್ತಿದ್ದಾರೆ ಈ ಕಾರಣದಿಂದಾಗಿ ಅವರು ತಮ್ಮ ಮುಂಬರುವ ಚಿತ್ರ ಕಟ್ಪುಟ್ಲಿಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಬದಲು OTTಯಲ್ಲಿಯೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಭಾರೀ ಒಪ್ಪಂದ ಮಾಡಿಕೊಂಡಿದ್ದಾರೆ. ಅಕ್ಷಯ್ ಅವರ ಕಟ್ಪುಟ್ಲಿ ಸೆಪ್ಟೆಂಬರ್ 2 ರಂದು OTT ನಲ್ಲಿ ಬಿಡುಗಡೆ ಆಗುತ್ತಿದೆ. ಅಕ್ಷಯ್ ಈ ಚಿತ್ರದ ಹಕ್ಕುಗಳನ್ನು ಸುಮಾರು 125 ಕೋಟಿ ರೂಪಾಯಿಗೆ ಡಿಸ್ನಿ ಹಾಟ್ ಸ್ಟಾರ್ ಗೆ ಮಾರಾಟ ಮಾಡಿದ್ದಾರೆ. ಅದೇ ವೇಳೆಗೆ ಆಮೀರ್ ಖಾನ್ (Aamir Khan) ಅವರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಬಿದ್ದವು. ಅದ್ಧೂರಿ ಬಜೆಟ್ ನಲ್ಲಿ ತಯಾರಾದ ಮೂರೂ ಚಿತ್ರಗಳು ಕೋಟಿಗಟ್ಟಲೆ ನಷ್ಟ ಅನುಭವಿಸಬೇಕಾಯಿತು.
ಇತ್ತೀಚೆಗಷ್ಟೇ ಬಿಡುಗಡೆಯಾದ ಅಕ್ಷಯ್ ಕುಮಾರ್ ಅಭಿನಯದ ಸುಮಾರು 70 ಕೋಟಿ ಬಜೆಟ್‌ನಲ್ಲಿ ತಯಾರಾದ ರಕ್ಷಾ ಬಂಧನ ಚಿತ್ರವು ತನ್ನ ವೆಚ್ಚವನ್ನು ಸಹ ಭರಿಸಲಾಗಲಿಲ್ಲ. ಬಿಡುಗಡೆಯಾದ 15 ದಿನಗಳಲ್ಲಿ ಈ ಚಿತ್ರ ಕೇವಲ 43 ಕೋಟಿ ಗಳಿಸಿದೆ.
ವರದಿಗಳ ಪ್ರಕಾರ ಈಗ ಅಕ್ಷಯ್ ಕುಮಾರ್ ಚೇತರಿಸಿಕೊಂಡಿದ್ದಾರೆ. ಅವರು ಕಟ್‌ಪುಟ್ಲಿಯನ್ನು OTT ಪ್ಲಾಟ್‌ಫಾರ್ಮ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರು ಮತ್ತು ಅದರ OTT ಹಕ್ಕುಗಳನ್ನು ಸುಮಾರು 125 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು.
ಅಕ್ಷಯ್ ಕುಮಾರ್ ಈ ಹಿಂದೆ ತಮ್ಮ ಲಕ್ಷ್ಮಿ ಮತ್ತು ಅತ್ರಾಂಗಿ ರೇ ಚಿತ್ರಗಳ ಹಕ್ಕುಗಳನ್ನು 125-180 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಅದೇ ಸಮಯದಲ್ಲಿ, ಕಟ್ಪುಟ್ಲಿಯ ಸಂಗೀತ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಮಾರುವ ಮೂಲಕ ತಯಾರಕರು ದೊಡ್ಡ ಮೊತ್ತವನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಟ್ಪುಟ್ಲಿ ಚಿತ್ರವು 2018 ರ ಸೌತ್ ಕ್ರೈಮ್ ಥ್ರಿಲ್ಲರ್ ರತಸಾನದ ಹಿಂದಿ ರಿಮೇಕ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಜೊತೆಗೆ ರಾಕುಲ್ ಪ್ರೀತ್ ಸಿಂಗ್, ಶಗುನ್ ಮೆಹ್ತಾ, ಚಂದ್ರಚೂಡ್ ಸಿಂಗ್, ಗುರುಪ್ರೀತ್ ಘಗ್ಗಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ನಿರ್ದೇಶಕ ರಂಜಿತ್ ತಿವಾರಿ.
ಅಕ್ಷಯ್ ಈ ಚಿತ್ರದ ಹಕ್ಕುಗಳನ್ನು ಸುಮಾರು 125 ಕೋಟಿ ರೂಪಾಯಿಗೆ ಡಿಸ್ನಿ ಹಾಟ್ ಸ್ಟಾರ್ ಗೆ ಮಾರಾಟ ಮಾಡಿದ್ದಾರೆ. ಅದೇ ವೇಳೆಗೆ ಆಮೀರ್ ಖಾನ್ ಅವರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ
ಆಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು ಮತ್ತು OTT ಒಪ್ಪಂದದಲ್ಲಿ ಸಹ ಕೋಟಿಗಳ ನಷ್ಟವನ್ನು ಅನುಭವಿಸಿತು. ವಾಸ್ತವವಾಗಿ ಚಿತ್ರ ಬಿಡುಗಡೆಗೂ ಮುನ್ನವೇ ಆಮೀರ್ ಮತ್ತು ನೆಟ್ ಫ್ಲಿಕ್ಸ್ ನಡುವೆ 150 ಕೋಟಿ ರೂ ಡೀಲ್ ಆಗಿತ್ತು.
ಚಿತ್ರವು 300 ಕೋಟಿ ವ್ಯವಹಾರ ಮಾಡುತ್ತದೆ ಎಂದು ಅವರು ನಿರೀಕ್ಷಿಸಿದ್ದರು, ಆದರೆ 180 ರ ಬಜೆಟ್‌ನ ಚಿತ್ರ ಅರ್ಧದಷ್ಟು ಸಹ ಗಳಿಸಲಿಲ್ಲ. ಲಾಲ್ ಸಿಂಗ್ ಚಡ್ಡಾ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ನಂತರ ನೆಟ್‌ಫ್ಲಿಕ್ಸ್ ಒಪ್ಪಂದವನ್ನು ರದ್ದುಗೊಳಿಸಿತು.
ಆದರೆ ಇದೀಗ ಹೊರಬರುತ್ತಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ನಂತರ ಮತ್ತೆ ಡೀಲ್ ಮಾಡಲಾಗಿದೆ ಮತ್ತು 80 ಕೋಟಿಗೆ ಅದನ್ನು ಅಂತಿಮಗೊಳಿಸಲಾಗಿದೆ, ಇದರಿಂದಾಗಿ ಆಮೀರ್ ಸಾಕಷ್ಟು ನಷ್ಟ ಅನುಭವಿಸಿದ್ದಾರೆ.