Har Ghar Tiranga; ಆಮೀರ್ ಖಾನ್ ಮನೆ ಮೇಲೆ ಹಾರಿದ ತಿರಂಗಾ, ಫೋಟೋ ವೈರಲ್


ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆದ ಮಾರನೇ ದಿನವೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ.

laal singh chaddha star Aamir Khan joins Har Ghar Tiranga campaign and hoists flag at home sgk

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆದ ಮಾರನೇ ದಿನವೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದ್ದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಆದರೂ ಆಮೀರ್ ಖಾನ್ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಮರೆಯದೆ ಭಾಗಿಯಾಗಿದ್ದಾರೆ. ಅಜಾದಿ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ  ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು.  ಆಗಸ್ಟ್ 13ರಿಂದ ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭಾಗಿದೆ. ಪ್ರತಿಯೊಬ್ಬರು ಈಗಾಗಲೇ ತಮ್ಮ ಮನೆಗಳ  ಮೇಲೆ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ. 15 ಆಗಸ್ಟ್  ಭಾರತ 75ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸುತ್ತಿದೆ.  2022 ಭಾರತ ಜನತೆಗೆ ಒಂದು ಮಹತ್ವದ ಸಂದರ್ಭವಾಗಿದೆ.

ಆಮೀರ್ ಖಾನ್ ಕೂಡ ತಮ್ಮ ಮುಂಬೈ ನಿವಾಸದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಶುಕ್ರವಾರ ಸಂಜೆ ತನ್ನ ಮಗಳು ಇರಾ ಖಾನ್ ಅವರೊಂದಿಗೆ ಆಮೀರ್ ಖಾನ್ ಬಾಲ್ಕನಿಯಲ್ಲಿ ನಿಂತಿರುವುದು ಕಂಡುಬಂದಿದೆ. ಪಕ್ಕದಲ್ಲಿ ತ್ರಿವರ್ಣ ಧ್ವಜ  ಹಾರುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಆಮೀರ್ ಖಾನ್ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದು ಫೋಟೋದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಕಪ್ ಹಿಡಿದು ಏನೋ ಕುಡಿಯುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಮೋಬೈಲ್ ಹಿಡಿದು ಏನೋ ವೀಕ್ಷಿಸುತ್ತಿದ್ದಾರೆ. ಡೆನಿಮ್ ಪ್ಯಾಂಟ್ ಮತ್ತು ಬಿಳಿ ಟೀ ಶರ್ಟ್ ಧರಿಸಿರುವ ಆಮೀರ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು; 13 ವರ್ಷಗಳಲ್ಲೇ ಇಂಥ ಸೋಲು ಕಂಡಿರಲಿಲ್ಲ ಆಮೀರ್ ಖಾನ್

ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದಲ್ಲದೆ ಆಮೀರ್ ಖಾನ್ ತನ್ನ ಟ್ವಿಟ್ಟರ್ ಡಿಪಿಯನ್ನು ಬದಲಾಯಿಸಿಕೊಂಡಿದ್ದಾರೆ.   ಡಿಪಿಯಲ್ಲಿ ತ್ರಿವರ್ಣ ಧ್ವಜದ ಫೋಟೋ ಹಾಕಿಕೊಂಡಿದ್ದಾರೆ. ಅಂದಹಾಗೆ ಆಮೀರ್ ಖಾನ್ ದೇಶ ವಿರೋಧಿ ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ. ಇದಕ್ಕೆ ಕಾರಣ ಈ ಹಿಂದೆ ಆಮೀರ್ ಖಾನ್ ನೀಡಿದ್ದ ಹೇಳಿಕೆ. ಹೌದು, ಆಮೀರ್ ಖಾನ್ 'ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಹಾಗಾಗಿ ನಾನು ನನ್ನ ಹೆಂಡತಿ ಕಿರಣ್ ರಾವ್ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದೆವು' ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ಆಮೀರ್ ಖಾನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆಮೀರ್ ಖಾನ್ ಗೆ ದೇಶ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ಅಲ್ಲದೆ ಆಮೀರ್ ಖಾನ್ ಸಿನಿಮಾವನ್ನು ಬಹಿಷ್ಕರಿಸಬೇಕೆನ್ನುವ ಅಭಿಯಾನ ಕೂಡ ನಡೆಯುತ್ತಿದೆ.    

ಲಾಲ್ ಸಿಂಗ್ ಚಡ್ಡಾ ಟ್ವಿಟ್ಟರ್ ವಿಮರ್ಶೆ; ಆಮೀರ್ ಖಾನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು? ಫ್ಯಾನ್ಸ್ ಫಸ್ಟ್ ರಿಯಾಕ್ಷನ್

ಇತ್ತೀಚಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾಗೂ ಬಾಯ್ಕಟ್ ಸಮಸ್ಯೆ ಎದುರಾಗಿತ್ತು. ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಕೂಡ ಮಾಡಲಾಗಿತ್ತು. ಬಾಯ್ಕಟ್ ನಡುವೆಯೂ ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿದೆ. ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಬರ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಲಾಲ್ ಸಿಂಗ್ ಚಡ್ಡಾ ಮೋಡಿ ಮಾಡಿಲ್ಲ. ಮೊದಲ ದಿನ ಕೇವಲ 11 ಕೋಟಿ ಕಲೆಕ್ಷನ್ ಮಾಡಿತ್ತು. ಆಮೀರ್ ಖಾನ್ ಸಿನಿಮಾ ಏನಿಲ್ಲ ಎಂದರೂ 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುತ್ತೆ. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯ ಸೋಲುಕಂಡಿದೆ. ಕಳೆದ 13 ವರ್ಷಗಳಲ್ಲೇ ಆಮೀರ್ ಖಾನ್ ಸಿನಿಮಾ ಈ ಪರಿ ಸೋಲು ಕಂಡಿರಲಿಲ್ಲ. ಆದರೆ ಲಾಲ್ ಸಿಂಗ್ ಚಡ್ಡಾ ಭಾರಿ ನಿರಾಸೆ ಮೂಡಿಸಿದೆ. 

Latest Videos
Follow Us:
Download App:
  • android
  • ios