ತಮ್ಮ ಮಗುವಿಗೆ ಹೆಸರುಗಳ ಪಟ್ಟಿನೂ ಸಿದ್ಧಪಡಿಸಿದ್ದಾರಂತೆ Ranveer Deepika!
ರಣವೀರ್ ಸಿಂಗ್ (Ranveer Singh) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ಜಯೇಶ್‌ಭಾಯ್ ಜೋರ್ದಾರ್‌ನ (Jayeshbhai Jordaar) ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಫ್ಯಾಶನ್ ಸೆನ್ಸ್ ಮತ್ತು ಹಾಸ್ಯದ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಚಾರ ಕಾರ್ಯದ ವೇಳೆ ರಣವೀರ್ ಹೇಳಿದ್ದ ಮಾತು ಚರ್ಚೆಗೆ ಗ್ರಾಸವಾಗಿದೆ. ನಟ ನಿಜ ಜೀವನದಲ್ಲೂ ತಂದೆಯಾಗಲು ಎಲ್ಲಾ ತಯಾರಿ ನಡೆಸುತ್ತಿರುವಂತೆ ಕಂಡುಬರುತ್ತದೆ.
ರಣವೀರ್ ಸಿಂಗ್ ಅವರು ತಮ್ಮ ಭವಿಷ್ಯದ ಮಕ್ಕಳಿಗಾಗಿ ಹೆಸರುಗಳ ದೊಡ್ಡ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆದರೆ, ಸದ್ಯಕ್ಕೆ ಈ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಅವರು ಬಯಸುವುದಿಲ್ಲ. ಯಾರೂ ಕದಿಯದಂತೆ ಪಟ್ಟಿಯನ್ನು ರಹಸ್ಯವಾಗಿಡುತ್ತಾರೆ ಎಂದಿದ್ದಾರೆ.
ವಾಸ್ತವವಾಗಿ, ಒಂದು ಇವೆಂಟ್ ಸಮಯದಲ್ಲಿ, ದೀಪಿಕಾ ಪಡುಕೋಣೆ ಮತ್ತು ಅವರ ಮಗಳು ಹುಟ್ಟಿದರೆ, ಅವರು ಮಗಳಿಗೆನ್ನು ಏನು ಹೆಸರಿಸುತ್ತಾರೆ ಎಂದು ರಣವೀರ್ ಅವರನ್ನು ಕೇಳಲಾಯಿತು.
ರಣವೀರ್ ತಕ್ಷಣವೇ ಉತ್ತರಿಸಿ ತನಗೆ ಜನರ ಹೆಸರುಗಳ ಬಗ್ಗೆ ಗೀಳು ಇದೆ ಮತ್ತು ದೀಪಿಕಾ ಅವರೊಂದಿಗೆ ತನ್ನ ಮಕ್ಕಳ ಸಂಭವನೀಯ ಹೆಸರುಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಿದೆ. ಈ ಹೆಸರುಗಳನ್ನು ಜನರು ಕದಿಯದಂತೆ ರಹಸ್ಯವಾಗಿಡಲು ಬಯಸುವುದಾಗಿ ರಣವೀರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಕಾರ್ಯಕ್ರಮವೊಂದರಲ್ಲಿ, ರಣವೀರ್ ಅವರಿಗೆ ಮಗ ಅಥವಾ ಮಗಳು ಬೇಕೇ ಎಂದು ಕೇಳಲಾಯಿತು, ಅವರು ಮಗನಾಗಲಿ ಅಥವಾ ಮಗಳಾಗಲಿ ನನಗೆ ಹೆದರುವುದಿಲ್ಲ. ಮಗ ಅಥವಾ ಮಗಳು ದೇವರ ಆಶೀರ್ವಾದ ಎಂದು ಹೇಳಿದರು.
ಇತ್ತೀಚೆಗೆ ದೀಪಿಕಾ ಪಡುಕೋಣೆ ಪ್ರೆಂಗ್ನೆಸಿಯ ಬಗ್ಗೆ ಊಹಾಪೋಹಗಳು ಇದ್ದವು. ಆದರೆ, ಈ ಬಗ್ಗೆ ರಣವೀರ್ ಅಥವಾ ದೀಪಿಕಾ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಆದರೆ ಈ ನಡುವೆ ರಣವೀರ್ ಅವರು ನೀಡುತ್ತಿರುವ ಹೇಳಿಕೆಗಳನ್ನು ಗಮಸಿ ನಟ ತಂದೆಯಾಗಲು ರೆಡಿಯಾಗಿದ್ದಾರೆ ಎಂದು ಗೆಸ್ ಮಾಡುತ್ತಿದ್ದಾರೆ.
ರಣವೀರ್ ಅವರ ಮುಂಬರುವ ಚಿತ್ರ 'ಜಯೇಶ್‌ಭಾಯ್ ಜೋರ್ದಾರ್' ಸಾಮಾಜಿಕ ಹಾಸ್ಯ ನಾಟಕವಾಗಿದೆ. ದಿವ್ಯಾಂಗ್ ಠಕ್ಕರ್ ನಿರ್ದೇಶನದ ಈ ಚಿತ್ರದಲ್ಲಿ ರತ್ನ ಪಾಠಕ್ ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ. ಚಿತ್ರವು ಮೇ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದಲ್ಲದೇ ರಣವೀರ್ 'ಸರ್ಕಸ್' ಮತ್ತು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರಗಳಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.