ಪ್ರಭಾಸ್ - ದೀಪಿಕಾ ಸಿನಿಮಾಗೆ ಬಾಲಿವುಡ್ ಹಾಟ್ ನಟಿ; ಯಾರದು?
ಬಾಲಿವುಡ್ ಸ್ಟಾರ್ ನಟಿ ಪ್ರಭಾಸ್ ಮತ್ತು ದೀಪಿಕಾ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಸುಳಿವು ಸಿಕ್ಕಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ದಿಶಾ ನಟಿಸುತ್ತಿದ್ದಾರೆ.
ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್(Prabhas) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿರುವ ಪ್ರಭಾಸ್ ಸದ್ಯ ಭರ್ಜರಿ ಗೆಲುವಿಗಾಗಿ ಕಾಯುತ್ತಿದ್ದಾರೆ. ಸದ್ಯ ಪ್ರಭಾಸ್ ಬಳಿ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿವೆ. ಸ್ಟಾರ್ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಭಾಸ್ ಬಳಿ ಇರುವ ಸಿನಿಮಾಗಳಲ್ಲಿ ನಿರ್ದೇಶಕ ನಾಗ್ ಅಶ್ವಿನ್(Disha Patani) ಸಿನಿಮಾ ಕೂಡ ಒಂದು. ಈಗಾಗಲೇ ನಾಗ್ ಅಶ್ವಿನ್ ಸಿನಿಮಾದ ಕೆಲಸ ಪ್ರಾರಂಭವಾಗಿದ್ದು ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ.
ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ(Deepika Padukone) ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೇ ಅಮಿತಾಬ್ ಬಚ್ಚನ್ ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್ ನಟಿಯ ಹೆಸರು ಕೇಳಿಬರುತ್ತಿದೆ. ಬಾಲಿವುಡ್ ಸ್ಟಾರ್ ನಟಿಯೊಬ್ಬರು ಪ್ರಭಾಸ್ ಮತ್ತು ದೀಪಿಕಾ ಸಿನಿಮಾಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಸುಳಿವು ಸಿಕ್ಕಿದೆ. ಅದು ಮತ್ಯಾರು ಅಲ್ಲ ಬಾಲಿವುಡ್ ಹಾಟ್ ನಟಿ ದಿಶಾ ಪಟಾನಿ. ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನಾಗ್ ಅಶ್ವಿನ್ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ರಿವೀಲ್ ಮಾಡಿದೆ.
ದಿಶಾ ಪಟಾನಿ ವೈಜಯಂತಿ ಮೂವೀಸ್‌ನಿಂದ ಸ್ವೀಕರಿಸಿದ ಸ್ವಾಗತ ಉಡುಗೊರೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹೂಗುಚ್ಘ ಶೇರ್ ಮಾಡಿ ಪ್ರಾಜೆಕ್ಟ್ ಕೆ ನಿಮ್ಮನ್ನು ಸ್ವಾಗತಿಸುತ್ತಿದೆ. ನೀವು ಈ ಪ್ರಾಜೆಕ್ಟ್ ನಲ್ಲಿರುವುದು ರೋಮಾಂಚನವಾಗಿದೆ ಎಂದು ಬರೆಯಲಾಗಿದೆ. ಇದನ್ನು ದಿಶಾ ಶೇರ್ ಮಾಡಿದ್ದಾರೆ. ಸಿನಿಮಾ ತಂಡ ಅಧಿಕೃತವಾಗಿ ಬಹಿರಂಗ ಪಡಿಸುವ ಮೊದಲೇ ದಿಶಾ ರಿವೀಲ್ ಮಾಡಿದ್ದಾರೆ.
'ರಾಧೆ ಶ್ಯಾಮ್' ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ನಟ ಪ್ರಭಾಸ್
ಅಂದಹಾಗೆ ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ಅನ್ನು ರಚಿಸಲಾಗಿದ್ದು ಚಿತ್ರೀಕರಣ ಪ್ರಾರಂಭವಾಗಿದೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ದೊಡ್ಡ ಮಟ್ಟದ ಕಲಾವಿದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಆರಿ ಅಲೆಕ್ಸಾ ತಂತ್ರಜ್ಞಾನ ಬಳಸಿದ ಮೊದಲ ಭಾರತೀಯ ಸಿನಿಮಾವಾಗಲಿದೆ.
ಅಂದಹಾಗೆ ಈ ಸಿನಿಮಾದಲ್ಲಿ ದಿಶಾ ಪಾತ್ರ ಇನ್ನು ರಿವೀಲ್ ಆಗಿಲ್ಲ. ಹಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಮೂಲಕ ಗೆಸ್ಟ್ ಪಾತ್ರದಲ್ಲಿ ಮಿಚುತ್ತಾರಾ ಅಥವಾ ಸಿನಿಮಾದಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಲುತ್ತಾರಾ ಎನ್ನುವುದು ಬಹಿರಂಗವಾಗಿಲ್ಲ. ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡದ ಸಿನಿಮಾತಂಡ, ಸದ್ಯ ಸ್ಟಾರ್ ಕಾಸ್ಟ್ ವಿಚಾರ ಮಾತ್ರ ಸದ್ದು ಮಾಡುತ್ತಿದೆ. ಇನ್ನು ಟೈಟಲ್ ಫಿಕ್ಸ್ ಆಗದ ಈ ಸಿನಿಮಾ ತೆಲುಗು ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ತಯಾರಾಗುತ್ತಿದೆ.
'ಆದಿಪುರುಷ್' ಕೆಲಸ ನಿಲ್ಲಿಸಿ ಮೊದಲು 'ಜೇಮ್ಸ್' ಚಿತ್ರ ಮುಗಿಸಿ; ಪ್ರಭಾಸ್
ಇನ್ನು ಪ್ರಭಾಸ್ ಸದ್ಯ ಸಲಾರ್ ಸಿನಿಮಾದ ಜೊತೆಗೆ ಆದಿಪುರುಷ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಲಾರ್ ಸಿನಿಮಾದ ಚಿತ್ರೀಕರಣ 40ರಷ್ಟು ಮುಕ್ತಾಯವಾಗಿದೆ. ಇನ್ನು ಆದಿಪುರುಷ್ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು ಸಾಕಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.