- Home
- Entertainment
- Cine World
- Cannes 2022: ಪ್ಯಾಂಟ್ ಶರ್ಟ್ ಜೊತೆ ಭಾರೀ ಆಭರಣ ಧರಿಸಿ ಡಿಫ್ರೆಂಟ್ ಲುಕ್‌ನಲ್ಲಿ ಮಿಂಚಿದ Deepika Padukone
Cannes 2022: ಪ್ಯಾಂಟ್ ಶರ್ಟ್ ಜೊತೆ ಭಾರೀ ಆಭರಣ ಧರಿಸಿ ಡಿಫ್ರೆಂಟ್ ಲುಕ್‌ನಲ್ಲಿ ಮಿಂಚಿದ Deepika Padukone
ಈ ಬಾರಿ ದೀಪಿಕಾ ಪಡುಕೋಣೆ( Deepika Padukone) ಕೇನ್ಸ್‌ಗೆ (cannes 2022) ಜ್ಯೂರಿ ಸದಸ್ಯೆಯಾಗಿ ಸೇರ್ಪಡೆಯಾಗಿದ್ದಾರೆ. ಈವೆಂಟ್‌ನ ಮೊದಲ ದಿನದಂದು ಅವರು ರೆಟ್ರೊ ಅವತಾರದಲ್ಲಿ ಕಾಣಿಸಿಕೊಂಡರು. ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ಅಂದರೆ ಮೇ 17 ರಂದು ಪ್ರಾರಂಭವಾಗಿರುವ ಕೇನ್ಸ್ ಚಲನಚಿತ್ರೋತ್ಸವವು ಮೇ 28 ರವರೆಗೆ ನಡೆಯಲಿದ್ದು, ಇದರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ದೀಪಿಕಾ ಪಡುಕೋಣೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನೇತೃತ್ವ ವಹಿಸಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಯಾವುದೇ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ತೀರ್ಪುಗಾರರ ಸದಸ್ಯರಾಗಿ ಕಾಣಿಸುತ್ತಾರೆ.
ಕೇನ್ಸ್ ಚಲನಚಿತ್ರೋತ್ಸವದ ಮೊದಲ ದಿನವಾದ ಮಂಗಳವಾರ ಸಂಜೆ, ಅವರು ತಮ್ಮ ಮೊದಲ ನೋಟವನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ದಿನ, ದೀಪಿಕಾ ಪಡುಕೋಣೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಫೋಟೋಗಳಲ್ಲಿ, ದೀಪಿಕಾ ಪಡುಕೋಣೆ ಹಸಿರು ಪ್ಯಾಂಟ್ ಮತ್ತು ಗ್ರೇ- ಗ್ರೀನ್ ಪ್ರಿಟೆಂಡ್ ಶರ್ಟ್‌ನಲ್ಲಿ ಸಮುದ್ರತೀರದಲ್ಲಿ ಅಡ್ಡಾಡುತ್ತಿರುವುದನ್ನು ಕಾಣಬಹುದು. ಅವರು ಹೇರ್‌ಬ್ಯಾಂಡ್‌ನೊಂದಿಗೆ ದಪ್ಪವಾದ ಚಿನ್ನದ ಹಾರವನ್ನು ಧರಿಸಿದ್ದಾರೆ. ಭಾರೀ ಮೇಕಪ್‌ನಲ್ಲಿ ಅವಳು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ದೀಪಿಕಾ ಪಡುಕೋಣೆ ಕೇನ್ಸ್ ಚಲನಚಿತ್ರೋತ್ಸವದ ಇತರ ಜ್ಯೂರಿ ಸದಸ್ಯರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಅವರು ಪ್ಯಾಂಟ್-ಶರ್ಟ್‌ನೊಂದಿಗೆ ಭಾರೀ ಆಭರಣಗಳನ್ನು ಧರಿಸಿ ರೆಟ್ವಿರೋ ಲುಕ್‌ನಲ್ಲಿ ವಿಭಿನ್ನವಾಗಿ ಕಾಣುತ್ತಿದ್ದರು.
ಪ್ರತಿ ವರ್ಷ ಕೇನ್ಸ್ ಫಿಲ್ಮ್ ಫೆಸ್ಟಿವಲ್ ತನ್ನ ಮುಖ್ಯ ಸ್ಪರ್ಧೆಯಿಂದ ಪಾಮ್ ಡಿ'ಓರ್ ಮತ್ತು ಇತರ ಬಹುಮಾನಗಳ ವಿಜೇತರನ್ನು ಆಯ್ಕೆ ಮಾಡಲು ಸಿನೆಮಾ ಪ್ರಪಂಚದಿಂದ ಎಂಟು ಮಂದಿ ತೀರ್ಪುಗಾರರನ್ನು ಆಯ್ಕೆ ಮಾಡುತ್ತದೆ. ಈ ಬಾರಿ ತೀರ್ಪುಗಾರರ ಸದಸ್ಯರಲ್ಲಿ ದೀಪಿಕಾ ಪಡುಕೋಣೆ, ರೆಬೆಕಾ ಹಾಲ್, ನೂಮಿ ರೇಪ್ಸ್, ಅಸ್ಗರ್ ಫರ್ಹಾದಿ, ಜೋಕಿಮ್ ಟ್ರೈಯರ್, ಲಾಡ್ಜ್ ಲೀ, ಜೆಫ್ ನಿಕೋಲ್ಸ್ ಮತ್ತು ಜಾಸ್ಮಿನ್ ಟ್ರಿಂಕಾ ಇದ್ದಾರೆ.
ಅದೇ ಸಮಯದಲ್ಲಿ, ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಈ ತಂಡದ ಮುಖ್ಯಸ್ಥರಾಗಿದ್ದಾರೆ. ವಿನ್ಸೆಂಟ್ ಲಿಂಡನ್ 2015 ರಲ್ಲಿ ಕೇನ್ಸ್‌ನಲ್ಲಿ ದಿ ಮೇಜರ್ ಆಫ್ ಎ ಮ್ಯಾನ್‌ಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. ಕಳೆದ ವರ್ಷ ಅಂದರೆ 2021 ರಲ್ಲಿ ಅವರು ಪಾಮ್ ವಿನ್ನರ್ ಟೈಟಾನ್‌ನಲ್ಲಿ ನಟಿಸಿದ್ದಾರೆ.