ಟಿಕೆಟ್ ಮುಂಗಡ ಬುಕ್ಕಿಂಗ್‌ನಲ್ಲೂ ದಾಖಲೆ; ಬಾಲಿವುಡ್ ಸಿನಿಮಾ ಹಿಂದಿಕ್ಕಿದ KGF 2
2022ರಲ್ಲಿ, ಅನೇಕ ಬಾಲಿವುಡ್ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಆದರೆ ಕೆಲವು ಚಲನಚಿತ್ರಗಳನ್ನು ವೀಕ್ಷಿಸಲು ಪ್ರೇಕ್ಷಕರು ಸಾಕಷ್ಟು ಉತ್ಸಾಹ ತೋರಿಸಿದ್ದರು. ಚಿತ್ರಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಮೂಲಕ ಜನರು ಸಿನಿಮಾ ನೋಡಲು ಕಾತುರರಾಗಿದ್ದರು. ಈ ವರ್ಷ ಸೌತ್ ಸೂಪರ್‌ಸ್ಟಾರ್ ಯಶ್ (Yash) ಅವರ ಕೆಜಿಎಫ್ 2 (KGF 2) ಚಿತ್ರದ ಕ್ರೇಜ್ ಅತ್ಯಧಿಕವಾಗಿತ್ತು ಮತ್ತು ಈ ಚಿತ್ರದ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಕೂಡ ಅತ್ಯಧಿಕವಾಗಿದೆ. 2022ರಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮುಂಗಡ ಬುಕಿಂಗ್ ಆದ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಸೌತ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಈ ವರ್ಷ ಭರ್ಜರಿ ಗಳಿಕೆ ಮಾಡಿದೆ. ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಮತ್ತು ರವೀನಾ ಟಂಡನ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ವರ್ಷ ಕೆಜಿಎಫ್ 2 ಸಿನಿಮಾದ 4.11 ಲಕ್ಷ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.
ಈ ಪಟ್ಟಿಯಲ್ಲಿ ರಣಬೀರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಎರಡನೇ ಸ್ಥಾನದಲ್ಲಿದೆ. ಈ ಚಿತ್ರದ ಮುಂಗಡವಾಗಿ 3.02 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.
ಅಜಯ್ ದೇವಗನ್, ಟಬು ಮತ್ತು ಶ್ರಿಯಾ ಸರನ್ ಅವರ ಚಿತ್ರ ದೃಶ್ಯಂ 2 ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿತು. ಈ ಚಿತ್ರದ ಮುಂಗಡವಾಗಿ 1.16 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.
ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಚಿತ್ರ RRR ಕೂಡ ವರ್ಷದ ಅತಿ ಹೆಚ್ಚು ವೀಕ್ಷಿಸಿದ ಚಿತ್ರವಾಯಿತು. ಈ ಚಿತ್ರದ ಮುಂಗಡವಾಗಿ ಸುಮಾರು 1.05 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.
ಬಾಲಿವುಡ್ ಚಿತ್ರಗಳು ಫ್ಲಾಪ್ ಎಂದು ಸಾಬೀತಾಗಿರುವ ಸಮಯದಲ್ಲಿ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ತನ್ನ ಹವಾ ಸೃಷ್ಟಿಸಿತು. ಕಾರ್ತಿಕ್ ಆರ್ಯನ್, ಟಬು ಮತ್ತು ಕಿಯಾರಾ ಅಡ್ವಾಣಿ ಅವರ ಚಿತ್ರ ಮುಂಗಡವಾಗಿ 1.03 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ.
ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೆಟ್ಟದಾಗಿ ಸೋತಿತು.ಆದರೆ ಈ ಚಿತ್ರದ 63 ಸಾವಿರ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.
ಈ ವರ್ಷ, ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಅಭಿನಯದ ವಿಕ್ರಮ್ ವೇದಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಅಂದಹಾಗೆ, ಈ ಚಿತ್ರದ ಸುಮಾರು 59 ಸಾವಿರ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.
ಜಗ್ ಜಗ್ ಜಿಯೋ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಈ ಚಿತ್ರದ ಸುಮಾರು 57 ಸಾವಿರ ಟಿಕೆಟ್‌ಗಳು ಮೊದಲೇ ಬುಕ್ ಆಗಿದ್ದವು. ಈ ಚಿತ್ರದಲ್ಲಿ ವರುಣ್ ಧವನ್, ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ನೀತು ಸಿಂಗ್ ಮುಖ್ಯ ಭೂಮಿಕೆಯಲ್ಲಿದ್ದರು.
ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರದ 56 ಸಾವಿರ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದ್ದವು. ಕೋವಿಡ್ ಲಾಕ್‌ಡೌನ್ ಮುಗಿದ ಕೂಡಲೇ ಈ ಚಿತ್ರ ಬಿಡುಗಡೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.