- Home
- Entertainment
- Cine World
- Bollywood Stars: ಬಾಲನಟರಾಗಿ ಸಿನಿಮಾಗೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಗಳಾಗಿ ಮಿಂಚಿದ ನಟರು
Bollywood Stars: ಬಾಲನಟರಾಗಿ ಸಿನಿಮಾಗೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಗಳಾಗಿ ಮಿಂಚಿದ ನಟರು
ಬಾಲಿವುಡ್ ನ ಅದೆಷ್ಟೋ ಸ್ಟಾರ್ ನಟರು ತಾವು ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಬಾಲನಟರಾಗಿ ವೀಕ್ಷಕರ ಮನ ಗೆದ್ದಿದ್ದರು.

ಬಾಲಿವುಡ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಿದ ಅನೇಕ ತಾರೆಯರಿದ್ದಾರೆ. ಒಂದು ಕಾಲದಲ್ಲಿ ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಹೃದಯ ಗೆದ್ದ ಈ ನಟರು ಇಂದು ಬಾಲಿವುಡ್ ನ ಸ್ಟಾರ್ (Bollywood stars) ನಟರಾಗಿದ್ದಾರೆ. ಈ ಪಟ್ಟಿಯಲ್ಲಿ, ಆಲಿಯಾ ಭಟ್, ಅಮೀರ್ ಖಾನ್, ಊರ್ಮಿಳಾ ಸೇರಿ ಹಲವು ನಟ - ನಟಿಯರ ಹೆಸರುಗಳನ್ನು ಕಾಣಬಹುದು.
ಆಲಿಯಾ ಭಟ್ (Alia Bhatt) ಇಂದು ಬಾಲಿವುಡ್‌ನ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು, ತಮ್ಮ ನಟನಾ ಕೌಶಲ್ಯದಿಂದ ಉದ್ಯಮದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಟಿ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆದರೆ ಅವರು ತಮ್ಮ ನಟನಾ ಪ್ರಯಾಣವನ್ನು ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದರು. ಅಕ್ಷಯ್ ಕುಮಾರ್ ಮತ್ತು ಪ್ರೀತಿ ಜಿಂಟಾ ನಟಿಸಿದ ಸಂಘರ್ಷ್ ಚಿತ್ರದಲ್ಲಿ ಪ್ರೀತಿ ಜಿಂಟಾ ಅವರ ಬಾಲ್ಯದ ಪಾತ್ರವನ್ನು ಅವರು ನಿರ್ವಹಿಸಿದರು.
'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡುವ ಮೊದಲು, ಹೃತಿಕ್ ರೋಷನ್ (Hrithik Roshan) 1980 ರಲ್ಲಿ 'ಆಶಾ' ಚಿತ್ರದಲ್ಲಿ ಬಾಲನಟನಾಗಿ ದೊಡ್ಡ ಪರದೆಯ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು.
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ (Aamir Khan) ಅವರೂ ಕೂಡ ಬಾಲ ನಟರಾಗಿ ಮಿಂಚಿದವರು. ಅವರು ಮೊದಲು 1973 ರ ಕ್ಲಾಸಿಕ್ ಚಿತ್ರ ಯಾದೋಂಕಿ ಬಾರಾತ್‌ನಲ್ಲಿ ಬಾಲ ಕಲಾವಿದನಾಗಿ ಪರದೆಯ ಮೇಲೆ ಕಾಣಿಸಿಕೊಂಡರು.
ಜಾನೇ ತೂ ಯಾ ಜಾನೇ ನಾ ಚಿತ್ರದ ಮೂಲಕ ಮನೆಮಾತಾಗುವ ಮೊದಲು, ನಟ ಇಮ್ರಾನ್ ಖಾನ್ (Imran Khan) ಅಮೀರ್ ಖಾನ್ ಅವರ 'ಖಯಾಮತ್ ಸೆ ಕಯಾಮತ್ ತಕ್' (1988) ಮತ್ತು 'ಜೋ ಜೀತಾ ವೋಹಿ ಸಿಕಂದರ್' (1992) ನಂತಹ ಚಲನಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದರು.
ರಂಗೀಲಾ ಮತ್ತು ಪ್ಯಾರ್ ತುನೇ ಕ್ಯಾ ಕಿಯಾ ಮುಂತಾದ ಚಿತ್ರಗಳಿಗೆ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗೆದ್ದ ಊರ್ಮಿಳಾ ಮಾತೋಂಡ್ಕರ್ (Urmila Matondkar) , ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮಾಸೂಮ್ (1983) ಚಿತ್ರದಲ್ಲಿ ಅವರು ಬಾಲನಟಿಯಾಗಿ ನಟಿಸಿದ್ದರು.
ನಿಮಗೆ ಗೊತ್ತಿರದ ಒಂದು ವಿಷಯ ಅಂದ್ರೆ, ನಟ ಬಾಬಿ ಡಿಯೋಲ್ (Bobby Deol) ಕೂಡ ಬಾಲ ನಟನಾಗಿಯೇ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ತಮ್ಮ ತಂದೆ ಧರ್ಮೇಂದ್ರ ಅಭಿನಯದ ಧರಮ್ ವೀರ್ ಸಿನಿಮಾದಲ್ಲಿ ತಮ್ಮ ತಂದೆಯ ಬಾಲ್ಯದ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿದ್ದರು.
ಕುನಾಲ್ ಖೇಮು (Kunal Khemu) ಭಾರತೀಯ ಚಿತ್ರರಂಗದಲ್ಲಿ ಬಾಲನಟನಾಗಿ ತಮ್ಮ ಕರಿಯರ್ ಆರಂಭಿಸಿದರು, 'ರಾಜಾ ಹಿಂದೂಸ್ತಾನಿ', 'ಜಖಮ್' ಮತ್ತು 'ಹಮ್ ಹೈ ರಾಹಿ ಪ್ಯಾರ್ ಕೆ' ನಂತಹ ಚಿತ್ರಗಳಲ್ಲಿ ತಮ್ಮ ಸ್ಮರಣೀಯ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು.