ನಟ ರಣಬೀರ್​ ಕಪೂರ್​ ಪತ್ನಿ ಆಲಿಯಾ ಭಟ್​ ಅವರ ಒಂದು ಸೀನ್​ ಅನುಕರಿಸಿದ್ದು, ಅವರಿಂದ ದೂರವಿರಿ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.ಏನಿದು ದೃಶ್ಯ?  

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಿಟೌನ್‌ನ ಅತ್ಯಂತ ನೆಚ್ಚಿನ ಜೋಡಿ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾಗಿ ನವೆಂಬರ್​ ತಿಂಗಳಿನಲ್ಲಿ ಮುದ್ದು ಮಗಳ ತಾಯಿಯಾಗಿದ್ದಾರೆ ಆಲಿಯಾ ಭಟ್ (Alia Bhatt). ದಂಪತಿ ಇಬ್ಬರೂ ಮಗಳು ರಾಹಾಳನ್ನು ನೋಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ದಂಪತಿಯ ನಡುವೆ ಉತ್ತಮ ಕೆಮಿಸ್ಟ್ರಿ ಇದ್ದು, ಬೆಳ್ಳಿ ಪರದೆಯ ಮೇಲೆ ಇವರ ಜೋಡಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಏತನ್ಮಧ್ಯೆ, ರಣಬೀರ್ ಕಪೂರ್ ಅವರು ಈಗ ಒಂದು ರೀಲ್ಸ್​ ಶೇರ್​ ಮಾಡಿದ್ದು, ಬಹಳ ಸುದ್ದಿಯಾಗುತ್ತಿದೆ. ರಣಬೀರ್ ಕಪೂರ್ ಅವರ ಈ ಕೆಲಸದ ನಂತರ ಪತ್ನಿ ಆಲಿಯಾರಿಂದ ಸಾಧ್ಯವಾದಷ್ಟು ದೂರವಿರಿ ಎಂದು ರಣಬೀರ್​ ಅವರಿಗೆ ಹಲವು ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ. 

ಅಷ್ಟಕ್ಕೂ ರಣಬೀರ್​ ಕಪೂರ್​ (Ranabir Kapoor) ಪತ್ನಿಯಿಂದ ದೂರ ಇರುವಂಥದ್ದು ಮಾಡಿದ್ದಾದರೂ ಏನು ಅಂತೀರಾ? ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಹಲವು ನಟರ ಕೆಲವೊಂದು ಚಿತ್ರಗಳ ನಕಲು ಮಾಡಿದ್ದಾರೆ. ಕೆಲವು ಪ್ರಸಿದ್ಧ ಚಲನಚಿತ್ರಗಳ ನಾಯಕರ ಸೀನ್​ ಒಂದನ್ನು ಮರುಸೃಷ್ಟಿಸಿದ್ದಾರೆ. ರಜನಿಕಾಂತ್, ನಾನಾ ಪಾಟೇಕರ್ ಸೇರಿದಂತೆ ಕೆಲವು ನಾಯಕರ ಪಾತ್ರವನ್ನು ಮಾಡಿತೋರಿಸಿದ್ದಾರೆ. ಅದರಲ್ಲಿ ಪತ್ನಿ ಆಲಿಯಾ ಭಟ್​ ಅವರ ಪಾತ್ರವೊಂದರ ದೃಶ್ಯವೂ ಇದೆ. 'ರಾಝಿ' ಚಿತ್ರದ ಮುಜೆ ಘರ್ ಜಾನಾ ಹೈ (ನನಗೆ ಮನೆಗೆ ಹೋಗಬೇಕು) ಎಂದು ಆಲಿಯಾ ಭಟ್​ ಅಳುವ ದೃಶ್ಯಗಳ ಅನುಕರಣೆಯನ್ನು ರಣಬೀರ್ ಕಪೂರ್​ ಮಾಡಿ ತೋರಿಸಿದ್ದಾರೆ. ಈ ತಮಾಷೆಯ ಕ್ಷಣದ ನಂತರ, ಅಭಿಮಾನಿಗಳು ಆಲಿಯಾದಿಂದ ದೂರವಿರಲು ಸಲಹೆ ನೀಡುತ್ತಿದ್ದಾರೆ. 

ಆಲಿಯಾ ಭಟ್​ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್​ ಮಾಡಿ ತಬ್ಬಿಬ್ಬುಗೊಳಿಸಿದ ನಟಿ

ವಾಸ್ತವವಾಗಿ, ರಣಬೀರ್​ ಅವರ ಚಲನಚಿತ್ರ ತೂ ಝೂಟಿ, ಮೈನ್ ಮಕ್ಕಾರ್​ ಪ್ರಚಾರದ ವೀಡಿಯೊದಲ್ಲಿ ಹೀಗೆ ಕೆಲವೊಂದು ತಮಾಷೆಯ ಸೀನ್​ಗಳನ್ನು ಮಾಡಿದ್ದಾರೆ. ಅವರು ಜನಪ್ರಿಯ ಚಿತ್ರಗಳ ದೃಶ್ಯಗಳನ್ನು ಮರುಸೃಷ್ಟಿಸಿದ್ದಾರೆ. ರಜನಿಕಾಂತ್ ಅವರ 'Sh*t' ಚಿತ್ರದ ಒಂದು ದೃಶ್ಯ, ಮಿಸ್ಟರ್ ರೋಬೋಟ್‌ನ ಹ್ಯಾಕರ್‌ಮ್ಯಾನ್ ರಾಮಿ ಮಾಲೆಕ್ ಅವರಂತೆ, 'ಕಂಟ್ರೋಲ್ ಆರ್ಕೆ ಕಂಟ್ರೋಲ್' ಎಂದು ಹೇಳುವ ಮೂಲಕ ವೆಲ್​ಕಮ್​ ಚಿತ್ರದ ನಾನಾ ಪಾಟೇಕರ್ (Nana Patekar) ಅವರ ಉದಯ್ ಭಾಯಿ ಪಾತ್ರದ ದೃಶ್ಯವನ್ನು ಅನುಕರಿಸಿದ್ದಾರೆ. ನಂತರ 'ಯೇ ಜವಾನಿ ಹೈ ದೀವಾನಿ'ಯಿಂದ ತಮ್ಮದೇ ಆದ 'ತು, ಜಾ' ದೃಶ್ಯವನ್ನು ಅನುಕರಿಸಿದರೆ, ಕೊನೆಯಲ್ಲಿ ಆಲಿಯಾ ಭಟ್​ ಅವರ ಅಳುವ ಪಾತ್ರವನ್ನು ಅನುಕರಿಸಿದ್ದಾರೆ.

ಇದನ್ನು ನೋಡಿ ಹಲವರು ತಮಾಷೆಯ ಕಮೆಂಟ್​ ಮಾಡುತ್ತಿದ್ದಾರೆ. ಪತ್ನಿಯನ್ನೇ ಅನುಕರಿಸುವ ಧೈರ್ಯ ಬಂತಾ ಎಂದು ಕೆಲವರು ಕೇಳಿದರೆ, ಹೇ ಬ್ರದರ್​ ಪತ್ನಿಗೆ ಹೆದರಿ ಎಂದು ಕೆಲವರು ಹೇಳಿದ್ದಾರೆ. ಸ್ವಲ್ಪ ದಿನ ಪತ್ನಿಯ ಎದುರಲ್ಲಿ ಕಾಣಿಸಿಕೊಳ್ಳಬೇಡಿ, ದೂರ ಇರಿ ಎಂದು ಹಲವರು ತಮಾಷೆ ಮಾಡಿದ್ದಾರೆ. ಇನ್ನು ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ತು ಜೂಠಿ ಮೈನ್ ಮಕ್ಕಾರ್​ (Tu Jhoothi Main Makkaar) ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರವು ಬಿಡುಗಡೆಯಾದ ಮೊದಲ ದಿನದಲ್ಲಿ ನಿವ್ವಳ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 15.73 ಕೋಟಿ ಗಳಿಸಿದೆ. ಇದೀಗ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರುವ ಹಂತಕ್ಕೆ ಬಂದಿದೆ. ಲವ್ ರಂಜನ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಬುಧವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಡಿಂಪಲ್ ಕಪಾಡಿಯಾ, ಅನುಭವ್ ಸಿಂಗ್ ಬಸ್ಸಿ ಮತ್ತು ಬೋನಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Alia Bhatt: '30'ರ ಕೇಕ್​ ಜೊತೆ ಬಾಲಿವುಡ್​ ಕ್ವೀನ್ ಬರ್ತಡೇ ಸೆಲಬ್ರೇಷನ್​

View post on Instagram