Hrithik Roshan: ಡಿವೋರ್ಸ್​ ಬಳಿಕ 'ಚಳಿಗಾಲದ ಪ್ರೇಯಸಿ' ಜೊತೆ ಕಂಗನಾ ಎಕ್ಸ್​! ಜ್ಯೋತಿಷಿ ಮಾತು ನಿಜವಾಗತ್ತಾ?

ಪತ್ನಿ ಸೂಸೆನ್ ಖಾನ್ ಅವರಿಗೆ ವಿಚ್ಛೇದನ ಕೊಟ್ಟು ಗಾಯಕಿ ಸಬಾ ಆಜಾದ್​ ಜೊತೆ ಡೇಟಿಂಗ್​ ನಡೆಸ್ತಿರೋ ಹೃತಿಕ್​ ರೋಷನ್​ ಫೋಟೋ ಒಂದನ್ನು ಶೇರ್​ ಮಾಡಿದ್ದು, ಜ್ಯೋತಿಷಿಯ ಮಾತು ಮುನ್ನೆಲೆಗೆ ಬಂದಿದೆ.
 

Hrithik Roshan poses with  Saba Azad as they holiday together in Argentina suc

ನಟಿ ಕಂಗನಾ ರಣಾವತ್​ಗೆ ಕೈಕೊಟ್ಟು, ಪತ್ನಿ ಸೂಸೆನ್ ಖಾನ್​ಗೂ ಡಿವೋರ್ಸ್​ ಕೊಟ್ಟ ಮೇಲೆ ಬಾಲಿವುಡ್ (Bollywood) ನಟ ಹೃತಿಕ್ ರೋಷನ್ ಮತ್ತು ಗಾಯಕಿ ಸಬಾ ಅಜಾದ್ ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ.  ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು.  ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅಂದಿರಲಿಲ್ಲ.  ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್​ ತೆಗೆದುಕೊಂಡಿರೋ ನಟ,  ಅರ್ಜೆಂಟೀನಾದಲ್ಲಿ ಗರ್ಲ್​ಫ್ರೆಂಡ್​ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಈಗ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದಾರೆ.

ಗಾಯಕಿಯಾಗಿರೋ ಸಬಾ ಆಜಾದ್​ (Saba Azad) ಅವರು  ಈಗಾಗಲೇ ಹಲವಾರು ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಸಂಗೀತ ಮತ್ತು ಫಿಟ್​ನೆಸ್​ ಮೇಲಿನ ಪ್ರೀತಿ ಸೇರಿದಂತೆ ಹೃತಿಕ್ ಮತ್ತು ಸಬಾಗೆ ಸಾಮ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇವರ ಮದುವೆ ಯಾವಾಗ, ಮದುವೆಯಾದರೆ ಭವಿಷ್ಯ ಏನು ಎಂಬ ಬಗ್ಗೆ ಹೃತಿಕ್​ ಫ್ಯಾನ್ಸ್​ ಕೇಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಾಗಲೇ ಹಲವಾರು ಮಂದಿ ನಟಿಯರ ಜೊತೆ ಡೇಟಿಂಗ್​ ಮಾಡುತ್ತಿದ್ದರು ಎನ್ನುವ ಸುದ್ದಿಯಲ್ಲಿದ್ದ ಹೃತಿಕ್​  ಕೊನೆಗೂ ಸಬಾ ಅವರನ್ನು ಮದುವೆಯಾಗುತ್ತಾರಾ? ಈ ಅಂತರ್​ಧರ್ಮೀಯ ವಿವಾಹ ಸಕ್ಸಸ್​ ಆಗುತ್ತದೆಯೆ ಎನ್ನುವ ಕುತೂಹಲ ಬಿಗ್​-ಟೌನ್​ನಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಆದರೆ ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್​ ಎಂಜಾಯ್​ ಮಾಡುತ್ತಿದ್ದು, ಅವರ ಫೋಟೋ ವೈರಲ್​ ಆಗಿದೆ. ಈ ಫೋಟೋಗೆ ಹೃತಿಕ್​ ಅವರು ಚಳಿಗಾಲದ ಹುಡುಗಿ (winter gril) ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

Bigg Boss ಮಹಿಳಾ ಸ್ಪರ್ಧಿಗೆ ಕಿಸ್​: ಹೊಸ ವಿವಾದದಲ್ಲಿ ಮಹೇಶ್​ ಭಟ್​

ಈ ಫೋಟೋ ನೋಡಿದ ಬಳಿಕ, ಖ್ಯಾತ  ಸೆಲೆಬ್ರಿಟಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಅವರು ಹೇಳಿರುವ ಮಾತು ಈಗ ಪುನಃ ಮುನ್ನೆಲೆಗೆ ಬಂದಿದೆ. ಇವರಿಬ್ಬರ ಜಾತಕ ನೋಡಿದ್ದ ಪಂಡಿತ್ ಜಗನ್ನಾಥ್ ಗುರೂಜಿ (Pandit Jagannath Guruji) ಅವರು,  ಇವರಿಬ್ಬರ ಸಂಬಂಧವನ್ನು ವಿಶ್ಲೇಷಿಸಿ ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಸಹ ಹಂಚಿಕೊಂಡಿದ್ದರು. ಸಬಾ ಜೊತೆಗಿದ್ದ ಒಂದು ಫೋಟೋ ನೋಡಿ ಅವರು ಈ ಜೋಡಿಯ ಭವಿಷ್ಯವನ್ನು ಹೇಳಿದ್ದರು. ಹೃತಿಕ್ ರೋಷನ್ ಅವರ ದೇಹದ ಭಂಗಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಅರ್ಥೈಸುತ್ತದೆ. ಅವರು  ನೇರವಾದ ಭಂಗಿಯು  ಆತ್ಮವಿಶ್ವಾಸದ ಪ್ರತೀಕ.  ಅವರು ತಮ್ಮ ಎದೆಯನ್ನು ಹೊರಗೆ ಮತ್ತು ಭುಜಗಳನ್ನು ಹಿಂದಕ್ಕೆ ಇರಿಸಿಕೊಂಡಿರುವುದು ಫೋಟೋದಲ್ಲಿ ಕಾಣಬಹುದು. ಇದು ಪ್ರಾಬಲ್ಯದ ಗುಣಗಳನ್ನು ತೋರಿಸುತ್ತಿದೆ ಎಂದಿದ್ದರು. 

ಇನ್ನು ಸಬಾ ಆಜಾದ್ ಅವರ ಫೋಟೋ (Photo) ಗಮನಿಸಿರುವ ಗುರೂಜಿ, ಸಬಾ ಅವರ ದೇಹದ ಭಂಗಿಯು ಹೆಚ್ಚು ಅಧೀನವಾಗಿದೆ, ಅವರ ಭುಜಗಳನ್ನು ಮುಂದಕ್ಕೆ ಬಾಗಿಸಿ ಮತ್ತು ತಲೆಯನ್ನು ಹೃತಿಕ್ ಕಡೆಗೆ ವಾಲಿಸಿದ್ದಾರೆ. ಭಾವನಾತ್ಮಕ ಬೆಂಬಲಕ್ಕಾಗಿ ಈಕೆ ಹೃತಿಕ್ ಮೇಲೆ ಹೆಚ್ಚು ಅವಲಂಬಿತರಾಗಿರಲಿದ್ದಾರೆ ಎಂದಿದ್ದರು.  ಇದರ ಹೊರತಾಗಿಯೂ  ಅಧೀನ ಭಂಗಿಯು ಆತ್ಮವಿಶ್ವಾಸ ಅಥವಾ ಸ್ವಾತಂತ್ರ್ಯದ ಕೊರತೆಯನ್ನು ಅರ್ಥೈಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ ಎಂದು ಪಂಡಿತ್ ಜಗನ್ನಾಥ್ ಗುರೂಜಿ ಸಮಜಾಯಿಷಿ ಕೊಟ್ಟಿದ್ದರು.  'ಹೃತಿಕ್ ಮತ್ತು ಸಬಾ ಪರಸ್ಪರ ಕೈಹಿಡಿದು ದೈಹಿಕ ನಿಕಟತೆ (Physical Closeness) ಮತ್ತು ವಾತ್ಸಲ್ಯದ ಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದಾರೆ. ಹೃತಿಕ್ ಅವರ ಸೊಂಟವನ್ನು ಹಿಡಿದು, ಕಾಳಜಿ, ಪ್ರೀತಿ (Love) ಮತ್ತು ವಾತ್ಸಲ್ಯವನ್ನು ಸೂಚಿಸುವ ಮೂಲಕ ಸಬಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದಿದ್ದರು. ಈಗ ಇವರ ಮದುವೆ (Wedding) ಯಾವಾಗ ಅಂತಿದ್ದಾರೆ ಫ್ಯಾನ್ಸ್​! 

Leader Ramaiah: ತೆರೆ ಮೇಲೆ ಬರಲಿದೆ ಸಿದ್ದರಾಮಯ್ಯ ಬಯೋಪಿಕ್: ಸಿಎಂ ಪಾತ್ರಕ್ಕೆ ನಟನಾರು?

Latest Videos
Follow Us:
Download App:
  • android
  • ios