MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಾಲಿವುಡ್ ಎಂಟ್ರಿಗೂ ಮುನ್ನ ಕಿಯಾರಾ ಸೇರಿ ಈ ನಟರು ಏನ್ ಕೆಲಸ ಮಾಡ್ತಿದ್ರು ಗೊತ್ತಾ?

ಬಾಲಿವುಡ್ ಎಂಟ್ರಿಗೂ ಮುನ್ನ ಕಿಯಾರಾ ಸೇರಿ ಈ ನಟರು ಏನ್ ಕೆಲಸ ಮಾಡ್ತಿದ್ರು ಗೊತ್ತಾ?

Bollywood Actors: ಬಾಲಿವುಡ್ ನಲ್ಲಿ ಮಿಂಚುತ್ತಿರುವ ಹೆಚ್ಚಿನ ನಟ-ನಟಿಯರು, ದೊಡ್ಡ ನಟರಾಗುವ ಕನಸು ಕಟ್ಟಿಕೊಂಡು, ನೇರವಾಗಿ ಸಿನಿಮಾ ಇಂಡಷ್ಟ್ರಿಗೆ ಕಾಲಿಟ್ಟವರು ಅಲ್ಲ. ಅದಕ್ಕೂ ಮುನ್ನ ಈ ನಟರು ಬೇರೆ ಬೇರೆ ರೀತಿಯ ಕೆಲಸ ಮಾಡುತ್ತಿದ್ದರು. ಯಾವ ನಟರು ಏನು ಕೆಲಸ ಮಾಡುತ್ತಿದ್ದರು ನೋಡೋಣ. 

1 Min read
Author : Pavna Das
Published : Apr 06 2026, 09:34 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಲಿವುಡ್ ನಟರು
Image Credit : social media

ಬಾಲಿವುಡ್ ನಟರು

ಬಿಗ್ ಸ್ಕ್ರೀನಲ್ಲಿ ರೂಲ್ ಮಾಡುವ ಮೊದಲು, ಈ ಬಾಲಿವುಡ್ ತಾರೆಯರು ನಮ್ಮಂತೆಯೇ ಇದ್ದರು - ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಿಂದ ಹಿಡಿದು ಪ್ರಿ-ಸ್ಕೂಲ್ ಬೋಧನೆಯವರೆಗೆ 9 ರಿಂದ 5 ಗಂಟೆಯ ಕೆಲಸಗಳನ್ನು ಮಾಡುತ್ತಿದ್ದರು. ನಂತರವೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್ ನಟರಾಗಿ ಜನಪ್ರಿಯತೆ ಪಡೆದರು.

26
ಕಿಯಾರಾ ಅಡ್ವಾನಿ
Image Credit : Instagram

ಕಿಯಾರಾ ಅಡ್ವಾನಿ

ಎಂ.ಎಸ್ ಧೋನಿ ಸಿನಿಮಾದಿಂದ ಹಿಡಿದು ಟಾಕ್ಸಿಕ್ ವರೆಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಕಿಯಾರಾ ಅಡ್ವಾನಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮೊದಲು ಪ್ರೀ ಸ್ಕೂಲ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಶಿಕ್ಷಕಿಯಾಗಿ ವೃತ್ತಿ ಮುಂದುವರೆಸಿದ್ದರೆ, ಸಿನಿಮಾ ಇಂಡಷ್ಟ್ರಿ ಒಂದೊಳ್ಳೆ ನಟಿಯನ್ನು ಖಂಡಿತಾ ಮಿಸ್ ಮಾಡುತ್ತಿತ್ತು.

Related Articles

Related image1
Bollywood Gossips: ಬಾಲಿವುಡ್ ನಟಿಯರ ಡಾರ್ಕ್ ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ
Related image2
ನಟನೆ ಜೊತೆಗೆ ಬ್ಯುಸಿನೆಸ್ ಆರಂಭಿಸಿ ಕೋಟಿ ಕೋಟಿ ಗಳಿಸುತ್ತಿರುವ Bollywood celebrities
36
ಆರ್ ಮಾಧವನ್
Image Credit : Asianet News

ಆರ್ ಮಾಧವನ್

ತಮಿಳು, ಹಿಂದಿ ಸಿನಿಮಾಗಳಲ್ಲಿ ತಮ್ಮ ಹ್ಯಾಂಡ್ಸಮ್ ಲುಕ್ ಮತ್ತು ಸ್ಟೈಲ್, ನಟನೆಯಿಂದಲೇ ಗೆದ್ದು, ಹಿಟ್ ಸಿನಿಮಾ ನೀಡಿದ ನಟ ಆರ್ ಮಾಧವನ್ ಮೊದಲು ಪಬ್ಲಿಕ್ ಸ್ಪೀಕಿಂಗ್ ಮತ್ತು ಪರ್ಸನಾಲಿಟಿ ಡೆವಲಪ್ ಮೆಂಟ್ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ‘ಇಸ್ ರಾತ್ ಕಿ ಸುಬಹ್ ನಹೀ’ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು.

46
ಜಾಕ್ವೆಲಿನ್ ಫರ್ನಾಂಡೀಸ್
Image Credit : Instagram

ಜಾಕ್ವೆಲಿನ್ ಫರ್ನಾಂಡೀಸ್

ಶ್ರೀಲಂಕನ್ ಬ್ಯೂಟಿ, ಬಾಲಿವುಡ್ ಪ್ರೇಮಿಗಳ ಹೃದಯ ಬಡಿದ ಹೆಚ್ಚಿಸಿದ್ದ ಜಾಕ್ವೆಲಿನ್ ಫರ್ನಾಂಡೀಸ್, ಕನ್ನಡದಲ್ಲೂ ಎಕ್ಕ ಸಕ್ಕ ಎಕ್ಕ ಸಕ್ಕ ಎಂದು ಪಡ್ಡೆಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ನಟಿಯಾಗುವ ಮುನ್ನ ಜಾಕ್ವೆಲಿನ್ ಟೆಲಿವಿಶನ್ ರಿಪೋರ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

56
ತಾಪ್ಸಿ ಪನ್ನು
Image Credit : our own

ತಾಪ್ಸಿ ಪನ್ನು

ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿ, ಇದೀಗ ಬಾಲಿವುಡ್’ನಲ್ಲಿ ಮಿಂಚುತ್ತಿರುವ ತಾಪ್ಸಿ ಪನ್ನು ನಟಿಯಾಗೋ ಮುನ್ನ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ಬಳಿಕ ಇವರು ತೆಲುಗಿನ ಜುಮಾಂದಿ ನಾದಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

66
ರಿತೇಶ್ ದೇಶ್ ಮುಖ್
Image Credit : instagram

ರಿತೇಶ್ ದೇಶ್ ಮುಖ್

ಬಾಲಿವುಡ್ ಸ್ಟಾರ್ ನಟ ರಿತೇಶ್ ದೇಶ್ ಮುಖ್, ಕೂಡ ನೇರವಾಗಿ ಸಿನಿಮಾಗೆ ಎಂಟ್ರಿ ಕೊಟ್ಟಿಲ್ಲ. ಬದಲಾಗಿ ಇವರು ನಟರಾಗೋ ಮುನ್ನ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಇವರು ಮುಖ್ಯಮಂತ್ರಿಯ ಮಗ ಕೂಡ ಹೌದು. ಆದರೆ ಎಲ್ಲೂ ತಂದೆಯ ಹೆಸರನ್ನು ಬಳಸದೆ ನಟನೆಯನ್ನು ತಮ್ಮನ್ನು ತೊಡಗಿಸಿಕೊಂಡು ಬಂದವರು ರಿತೇಶ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬಾಲಿವುಡ್
ಮನರಂಜನಾ ಸುದ್ದಿ
ಕಿಯಾರಾ ಅಡ್ವಾಣಿ
ಸಿನಿಮಾ

Latest Videos
Recommended Stories
Recommended image1
ಪತ್ನಿ ಪ್ರಣತಿ ಬಂದ್ಮೇಲೆ ಈ ವಿಷ್ಯದಲ್ಲಿ ವೀಕ್ ಆದ್ರಾ ಜೂ.ಎನ್‌ಟಿಆರ್? ಸತ್ಯ ಬಿಚ್ಚಿಟ್ಟ ನಟ!
Recommended image2
ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಮದುವೆ ಗಿಫ್ಟ್; ಕೋಟಿ ಬೆಲೆಯ ಐಶಾರಾಮಿ ಮನೆ ಮಗಳ ಹೆಸರಿಗೆ ವರ್ಗಾವಣೆ!
Recommended image3
OTT Release This Week: ಒಟಿಟಿಯಲ್ಲಿ ತೆರೆಕಂಡ, ಜನರನ್ನು ಕಾಡು ಸಿನಿಮಾಗಳು; ಸಿನಿಪ್ರೇಮಿಗಳಿಗೆ ಹಬ್ಬದೂಟ
Related Stories
Recommended image1
Bollywood Gossips: ಬಾಲಿವುಡ್ ನಟಿಯರ ಡಾರ್ಕ್ ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ
Recommended image2
ನಟನೆ ಜೊತೆಗೆ ಬ್ಯುಸಿನೆಸ್ ಆರಂಭಿಸಿ ಕೋಟಿ ಕೋಟಿ ಗಳಿಸುತ್ತಿರುವ Bollywood celebrities
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved