MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • OTT Movies Release: ಒಟಿಟಿಗೆ ಬಂದ ಬ್ಲಾಕ್‌ಬಸ್ಟರ್‌ ಸಿನಿಮಾಗಳು; ಥಿಯೇಟರ್‌ನಲ್ಲಿ ಮಿಸ್‌ ಆಗಿದ್ರೆ ಮನೇಲಿ ನೋಡಿ!

OTT Movies Release: ಒಟಿಟಿಗೆ ಬಂದ ಬ್ಲಾಕ್‌ಬಸ್ಟರ್‌ ಸಿನಿಮಾಗಳು; ಥಿಯೇಟರ್‌ನಲ್ಲಿ ಮಿಸ್‌ ಆಗಿದ್ರೆ ಮನೇಲಿ ನೋಡಿ!

OTT Release This Week 2026: ಜೂನ್ ಎರಡನೇ ವಾರದಲ್ಲಿ ಓಟಿಟಿ ವೇದಿಕೆಗಳಲ್ಲಿ 'ಕರುಪ್ಪು' ಸೇರಿದಂತೆ ಹಲವು ಹೊಸ ಸಿನಿಮಾ ಹಾಗೂ ಸೀರಿಸ್‌ಗಳು ಬಿಡುಗಡೆಯಾಗುತ್ತಿವೆ. ರೋಚಕ ಥ್ರಿಲ್ಲರ್‌ಗಳಿಂದ ಹಿಡಿದು ಫ್ಯಾಮಿಲಿ ರಿಯಾಲಿಟಿ ಶೋಗಳವರೆಗೆ ಈ ವಾರ ಏನೆಲ್ಲಾ ರಿಲೀಸ್ ಆಗಲಿದೆ? 

2 Min read
Author : Padmashree Bhat
Published : Jun 09 2026, 02:46 PM IST
Share this Photo Gallery
  • FB
  • TW
  • Linkdin
  • Whatsapp
15
ಕರುಪ್ಪು ಸಿನಿಮಾ
Image Credit : instagram

ಕರುಪ್ಪು ಸಿನಿಮಾ

ಸೂರ್ಯ ನಟನೆಯ, ಆರ್‌ಜೆ ಬಾಲಾಜಿ ನಿರ್ದೇಶನದ ಆಕ್ಷನ್ ಸಿನಿಮಾ 'ಕರುಪ್ಪು' ಥಿಯೇಟರ್‌ಗಳಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಈ ಸಿನಿಮಾ ಓಟಿಟಿಗೆ ಬರಲು ಸಿದ್ಧವಾಗಿದೆ. ಜೂನ್ 12 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರವು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಾ ಹೈ ನಾ (Maa Hai Na) - ಜೀ5 (ZEE5)
Image Credit : instagram

ಮಾ ಹೈ ನಾ (Maa Hai Na) - ಜೀ5 (ZEE5)

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಈ ರಿಯಾಲಿಟಿ ಶೋವನ್ನು ನಿರೂಪಣೆ ಮಾಡುತ್ತಿದ್ದಾರೆ. ಇದು ಜೂನ್ 12 ರಂದು ಜೀ5 (ZEE5) ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಸೆಲೆಬ್ರಿಟಿಗಳು ಮತ್ತು ಅವರ ತಾಯಂದಿರು ಭಾಗವಹಿಸಿ, ಅಡುಗೆ ಸ್ಪರ್ಧೆಗಳು ಹಾಗೂ ಆಸಕ್ತಿದಾಯಕ ಸಂವಾದಗಳಲ್ಲಿ ತೊಡಗಿಕೊಳ್ಳುತ್ತಾರೆ.

Related Articles

Related image1
ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ: ಕೇವಲ 200 ರೂಪಾಯಿಗೆ 15 OTT ಆಪ್ಸ್, 1000 ಟಿವಿ ಚಾನೆಲ್ಸ್ ಫ್ರೀ!
Related image2
OTT Release This Week: ಕೊನೆಗೂ ಒಟಿಟಿಗೆ ಬಂದ ಕಾಡಿಸುವ, ರಂಜಿಸುವ ರೋಚಕ ಸಿನಿಮಾಗಳಿವು!
35
ರಾಖ್ (Raakh) - ಅಮೆಜಾನ್ ಪ್ರೈಮ್ ವಿಡಿಯೋ
Image Credit : instagram

ರಾಖ್ (Raakh) - ಅಮೆಜಾನ್ ಪ್ರೈಮ್ ವಿಡಿಯೋ

1970ರ ದಶಕದ ಹಿನ್ನೆಲೆಯಲ್ಲಿ ಸಿದ್ಧವಾಗಿರುವ ಕ್ರೈಂ ಥ್ರಿಲ್ಲರ್ ಸರಣಿ 'ರಾಖ್'. ಕಣ್ಮರೆಯಾದವರ ತನಿಖೆಯಿಂದ ಆರಂಭವಾಗುವ ಕಥೆ, ಒಂದು ದೊಡ್ಡ ಅಪರಾಧದ ಸಂಚಿನತ್ತ ಸಾಗುತ್ತದೆ. ಸೋನಾಲಿ ಬಿಂದ್ರೆ ಮತ್ತು ಅಲಿ ಫಜಲ್ ನಟಿಸಿರುವ ಈ ಸರಣಿ ಜೂನ್ 12 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

45
ಭೂತ್ ಬಂಗ್ಲಾ (Bhooth Bangla) - ನೆಟ್‌ಫ್ಲಿಕ್ಸ್
Image Credit : instagram

ಭೂತ್ ಬಂಗ್ಲಾ (Bhooth Bangla) - ನೆಟ್‌ಫ್ಲಿಕ್ಸ್

ಅಕ್ಷಯ್ ಕುಮಾರ್, ನಿರ್ದೇಶಕ ಪ್ರಿಯದರ್ಶನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಹಾರರ್-ಕಾಮಿಡಿ ಸಿನಿಮಾ 'ಭೂತ್ ಬಂಗ್ಲಾ'. ತಬು, ವಾಮಿಕಾ ಗಬ್ಬಿ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಜೂನ್ 12 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

55
ಇನ್ನುಳಿದ ಸಿನಿಮಾಗಳು
Image Credit : instagram

ಇನ್ನುಳಿದ ಸಿನಿಮಾಗಳು

ಎವ್ರಿ ಇಯರ್ ಆಫ್ಟರ್ (Every Year After): ಪ್ರೀತಿ ಮತ್ತು ಸ್ನೇಹವನ್ನು ಸಾರುವ ಈ ಸರಣಿ ಜೂನ್ 10 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ದೃಢಂ (Dridam): ಜೀತು ಜೋಸೆಫ್ ನಿರ್ಮಾಣದ ಮಲಯಾಳಂ ಥ್ರಿಲ್ಲರ್ ಚಿತ್ರ. ಇದು ಜೂನ್ 12 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar) ಬಿಡುಗಡೆಯಾಗಲಿದೆ.

ತಾರ್ಕಟಾ (Taarkata): ಸೇಡು ಮತ್ತು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಬಂಗಾಳಿ ಸರಣಿ. ಇದು ಜೂನ್ 12 ರಂದು ಜೀ5 (ZEE5) ವೇದಿಕೆಯಲ್ಲಿ ಪ್ರಸಾರವಾಗಲಿದೆ.

ಶೆಲ್ಟರ್ (Shelter): ಜೇಸನ್ ಸ್ಟ್ಯಾಥಮ್ ನಟನೆಯ ಸರ್ವೈವಲ್ ಥ್ರಿಲ್ಲರ್ ಚಿತ್ರ. ಇದು ಜೂನ್ 12 ರಂದು ಓಟಿಟಿಯಲ್ಲಿ ಬರಲಿದೆ.

ಸ್ವೀಟ್ ಮ್ಯಾಗ್ನೋಲಿಯಾಸ್ ಸೀಸನ್ 5 (Sweet Magnolias Season 5): ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ ಈ ಸರಣಿಯ ಹೊಸ ಸೀಸನ್ ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಿನಿಮಾ
ವೆಬ್ ಸರಣಿ
ಸೆಲೆಬ್ರಿಟಿಗಳು
Latest Videos
Recommended Stories
Recommended image1
ಚೆನ್ನಾಗಿ ಸಂಸಾರ ಮಾಡುತ್ತಿರುವಾಗಲೇ ಗಂಡನ ಬಗ್ಗೆ ಉಲ್ಟಾ ಮಾತು; ನಟಿಯ ಹೇಳಿಕೆಗೆ ನೆಟ್ಟಿಗರು ಗರಂ!
Recommended image2
50ರಲ್ಲೂ ಯಂಗ್ ಲುಕ್! ಆಂಕರ್ ಸುಮಾರನ್ನು 'ಕತ್ತಿಯಂತಹ ಫಿಗರ್' ಎಂದ ಸ್ಟಾರ್ ಹೀರೋ ಯಾರು?
Recommended image3
Jennifer Winget: ಮತ್ತೆ ಮದುವೆ ಆಗ್ತಾರಾ ಜನಪ್ರಿಯ ಟಿವಿ ನಟಿ? ಯಾರು ಈ ಸಿಂಗಾಪುರದ ಉದ್ಯಮಿ?
Related Stories
Recommended image1
ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ: ಕೇವಲ 200 ರೂಪಾಯಿಗೆ 15 OTT ಆಪ್ಸ್, 1000 ಟಿವಿ ಚಾನೆಲ್ಸ್ ಫ್ರೀ!
Recommended image2
OTT Release This Week: ಕೊನೆಗೂ ಒಟಿಟಿಗೆ ಬಂದ ಕಾಡಿಸುವ, ರಂಜಿಸುವ ರೋಚಕ ಸಿನಿಮಾಗಳಿವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved