ನಟಿ ಮೃಣಾಲ್ ಠಾಕೂರ್ ಅವರು, ಟೀಂ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ..
ನಟಿ ಮೃಣಾಲ್ ಠಾಕೂರ್ ಅವರು ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ವಿಡಿಯೋವೊಂದರಿಂದ ಹಬ್ಬಿದ್ದ ಈ ಗಾಸಿಪ್ ಅನ್ನು ಅವರು ತಳ್ಳಿಹಾಕಿದ್ದು, ಯಾವುದೇ ಆಧಾರವಿಲ್ಲದ ಸುದ್ದಿಗಳನ್ನು ಯಾಕೆ ನಂಬುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನಟಿ ಮೃಣಾಲ್ ಠಾಕೂರ್ ಅವರು, ಟೀಂ ಇಂಡಿಯಾ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೊನೆಗೂ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ, ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಒಂದೇ ಕೆಫೆಯಿಂದ ಇಬ್ಬರೂ ಹೊರಬಂದಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಡೇಟಿಂಗ್ ಗಾಸಿಪ್‌ಗೆ ಮೃಣಾಲ್ ಖಡಕ್ ಉತ್ತರ
ಯಶಸ್ವಿ ಮತ್ತು ತಮ್ಮನ್ನು ಸೇರಿಸಿ ಮಾಡಲಾಗಿದ್ದ ವಿಡಿಯೋ ಕ್ಲಿಪ್ ಒಂದಕ್ಕೆ ಪ್ರತಿಕ್ರಿಯಿಸಿದ ಮೃಣಾಲ್, ಈ ಎಲ್ಲಾ ವದಂತಿಗಳನ್ನು ವ್ಯಂಗ್ಯವಾಗಿಯೇ ತಳ್ಳಿಹಾಕಿದ್ದಾರೆ. 34 ವರ್ಷದ ನಟಿ, "ಬ್ರೋ ರಿಲ್ಯಾಕ್ಸ್... ನಾವು ಒಟ್ಟಿಗೆ ಎಲ್ಲಿದ್ವಿ ಅಂತ ತೋರಿಸಿ? ಹೇಗೆ ಸಾಧ್ಯ ರೀ? ನಿಮ್ಮಂತ ಓದಿದ ಜನರೇ ಇಂಥಾ ಸುಳ್ಳು ಸುದ್ದಿಗಳನ್ನು ನಂಬೋಕೆ ಶುರು ಮಾಡಿದ್ರೆ ಹೇಗೆ?" ಎಂದು ಕಾಮೆಂಟ್ ಮಾಡಿದ್ದರು.
ಇಷ್ಟಕ್ಕೇ ಸುಮ್ಮನಾಗದ ಮೃಣಾಲ್, ಇಂತಹ ವದಂತಿಗಳ ಮೇಲೆ ಗಮನ ಹರಿಸುವ ಬದಲು ಬೇರೆ ಮುಖ್ಯ ವಿಚಾರಗಳ ಬಗ್ಗೆ ಗಮನ ಕೊಡಿ ಎಂದು ಸೋಷಿಯಲ್ ಮೀಡಿಯಾ ಮಂದಿಗೆ ಕಿವಿಮಾತು ಹೇಳಿದ್ದಾರೆ. "ದೇಶದಲ್ಲಿ ಬೇರೆ ಏನೇನೋ ನಡೀತಿದೆ. Gen Z ಅವರಿಂದ ಏನಾದ್ರೂ ಕಲಿಯಿರಿ, ಸರಿಯಾದ ವಿಷಯಗಳ ಬಗ್ಗೆ ವಿಡಿಯೋ ಮಾಡಿ, ಆಗ ಇನ್ನೂ ಹೆಚ್ಚು ವ್ಯೂಸ್ ಸಿಗುತ್ತೆ," ಎಂದು ಅವರು ಸೇರಿಸಿದ್ದಾರೆ. ಆದರೆ, ಈ ಕಾಮೆಂಟ್ ಈಗ ಆ ವಿಡಿಯೋದಿಂದ ಮಾಯವಾಗಿದೆ. 'ದಿ ಫ್ರೀ ಪ್ರೆಸ್ ಜರ್ನಲ್' ಈ ಕಾಮೆಂಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ ಎಂದು ವರದಿಯಾಗಿದೆ.
ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್
ಮೃಣಾಲ್ ಅವರ ಈ ಉತ್ತರಕ್ಕೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಅನೇಕರು ಈ ಡೇಟಿಂಗ್ ವದಂತಿ ಮತ್ತು ವೈರಲ್ ವಿಡಿಯೋ ಕುರಿತ ವರದಿಗಳನ್ನು ಟೀಕಿಸಿದ್ದಾರೆ. "ಯಾಕ್ರೀ ಇಂಥಾ ಸುಳ್ಳು ಸುದ್ದಿ ಹಬ್ಬಿಸ್ತೀರಾ," ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ತಮಾಷೆಯಾಗಿ, "ಅವಳು ನನ್ನ ಪ್ರೀತಿ," ಎಂದು ಬರೆದಿದ್ದಾರೆ. ಮೂರನೇಯ ಅಭಿಮಾನಿಯೊಬ್ಬರು, "ಅಂದ್ರೆ, ಒಂದೇ ದಿನ ಒಂದೇ ರೆಸ್ಟೋರೆಂಟ್‌ಗೆ ಯಾರೂ ಹೋಗ್ಬಾರ್ದಾ?" ಎಂದು ವದಂತಿಗಳ ಮೂಲವನ್ನೇ ಪ್ರಶ್ನಿಸಿದ್ದಾರೆ. ಇನ್ನೊಬ್ಬರು, "ಏನೋ ಸುಮ್ನೆ," ಎಂದು ಪ್ರತಿಕ್ರಿಯಿಸಿದ್ದಾರೆ.


