- Home
- Entertainment
- Cine World
- ವಯಸ್ಸು 60… ಆದ್ರೂ ನಟ ವಿಕ್ರಮ್ ಯುವಕರನ್ನೇ ಹಿಂದಿಕ್ಕುವಷ್ಟು ಫಿಟ್ ಆಗಿರೋದು ಹೇಗೆ?
ವಯಸ್ಸು 60… ಆದ್ರೂ ನಟ ವಿಕ್ರಮ್ ಯುವಕರನ್ನೇ ಹಿಂದಿಕ್ಕುವಷ್ಟು ಫಿಟ್ ಆಗಿರೋದು ಹೇಗೆ?
ತಮಿಳು ಚಿತ್ರರಂಗದ ಸ್ಟಾರ್ ನಟ ವಿಕ್ರಮ್ ಅವರು ಇತ್ತೀಚೆಗೆ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಆದರೆ ಅವರ ಲುಕ್, ಫಿಟ್ನೆಸ್ , ಸ್ಟೈಲ್ ನೋಡಿದ್ರೆ ಈಗಷ್ಟೇ ಕಾಲೇಜಿನಿಂದ ಹೊರ ಬಂದ ಯುವಕನಂತೆ ಕಾಣಿಸ್ತಾರೆ. ವಿಕ್ರಮ್ ಅವರ ಫಿಟ್ನೆಸ್ ಸೀಕ್ರೆಟ್ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಚಿಯಾನ್ ವಿಕ್ರಮ್
ತಮಿಳು ಚಿತ್ರರಂಗದ ಖ್ಯಾತ ನಟ ಚಿಯಾನ್ ವಿಕ್ರಮ್, ಇತ್ತೀಚೆಗಷ್ಟೇ ಅಂದರೆ, ಏಪ್ರಿಲ್ 17ರಂದು 60ನೇ ವಯಸ್ಸಿಗೆ ಕಾಲಿಟ್ಟಿದ್ದರು. ಆದರೆ ವಿಕ್ರಮ್ ಅವರ ಫಿಟ್ನೆಸ್ ಸ್ಟೈಲ್, ಲುಕ್ ನೋಡಿದ್ರೆ, ಯಾರೂ ಸಹ ಇವರಿಗೆ ವಯಸ್ಸು 60 ಆಗಿದೆ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ.
60 ಸಿನಿಮಾಗಳ ನಾಯಕ
ವಿಕ್ರ, 1990ರಲ್ಲಿ ಬಿಡುಗಡೆಯಾದ ‘ಎನ್ ಕಾದಲ್ ಕಣ್ಮಣಿ’ ಸಿನಿಮಾದಿಂದ ಹಿಡಿದು, ಕಳೆದ ವರ್ಷ ಬಿಡುಗಡೆಯಾದ ‘ವೀರ, ಧೀರ, ಶೂರನ್’ ಸಿನಿಮಾವರೆಗೂ ಸುಮಾರು 60 ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಇನ್ನೂ ಮೂರು ಸಿನಿಮಾಗಳು ವಿಕ್ರಮ್ ಕೈಯಲ್ಲಿದೆ. ಈ 60ನೇ ವಯಸ್ಸಿನಲ್ಲಿ ನಟ ಆಕ್ಷನ್ ಸೀನ್ ಮಾಡುತ್ತಾ ಇಷ್ಟೊಂದು ಫಿಟ್ ಆಗಿರೋದು ಹೇಗೆ ಎನ್ನುವುದೇ ಈಗ ಅಭಿಮಾನಿಗಳ ಪ್ರಶ್ನೆಯಾಗಿದೆ.
ಮಿಸ್ಟರ್ ಪರ್ಫೆಕ್ಟ್ ವಿಕ್ರಮ್
ಫಿಟ್ನೆಸ್ ಬಗ್ಗೆ ತುಂಬಾನೆ ಕಾಳಜಿ ವಹಿಸುವ ವಿಕ್ರಮ್, ಯಾವಾಗಲೂ ಉತ್ತಮ ಮೈಕಟ್ಟು ಕಾಯ್ದುಕೊಳ್ಳುವ ನಟರಲ್ಲಿ ಒಬ್ಬರು. ವಿಕ್ರಮ್ ಪ್ರತಿ ಚಿತ್ರಕ್ಕೂ ತಮ್ಮ ಲುಕ್ ಗೆ ಸರಿಯಾಗುವಂತೆ ದೇಹವನ್ನು ದಂಡಿಸುತ್ತ, ಪಾತ್ರಕ್ಕೆ ಸರಿಯಾಗಿ ತೂಕ ಇಳಿಕೆ, ಏರಿಕೆ ಮಾಡುವ ಮಿಸ್ಟರ್ ಪರ್ಫೆಕ್ಷನಿಸ್ಟ್. ಸೋಶಿಯಲ್ ಮೀಡಿಯಾದಲ್ಲಿ ವಿಕ್ರಮ್ ಫೋಟೋಸ್ ನೋಡಿದ್ರೆ ಹುಡುಗಿಯರು ಫಿದಾ ಆಗ್ತಾರೆ ಅಷ್ಟೊಂದು ಹ್ಯಾಂಡ್ಸಮ್ ಆಗಿದ್ದಾರೆ ನಟ.
ಪಾತ್ರಕ್ಕೆ ತಕ್ಕಂತೆ ವರ್ಕೌಟ್ ಬದಲಾವಣೆ
ವಿಕ್ರಮ್ ಯಾವತ್ತೂ ಒಂದೇ ರೀತಿಯ ವರ್ಕೌಟ್ ಮಾಡುವುದಿಲ್ಲ. ಬದಲಾಗಿ ತಮ್ಮ ಪಾತ್ರಕ್ಕೆ ಅನುಗುಣವಾಗಿ ವರ್ಕೌಟ್ ಮಾಡುತ್ತಾರೆ. ಮುಖ್ಯವಾಗಿ ಚಿಯಾನ್ ಗೆ ಪ್ಲೈಮೆಟ್ರಿಕ್ ವರ್ಕೌಟ್ ಇಷ್ಟ. ಈ ವರ್ಕೌಟ್ ನಿಂದ ದೇಹದ ಬಲ ಹೆಚ್ಚುತ್ತೆ. ಇವರು ಪಾತ್ರಗಳಿಗೆ ಯಾವ ರೀತಿ ದೇಹ ಬೇಕು ಅದಕ್ಕೆ ತಕ್ಕಂತೆ ಹೆವಿ ವೈಟ್, ಜಿಮ್, ವಕೌಟ್ ಮಾಡುತ್ತಾರೆ. ಅದರ ಜೊತೆ ಉತ್ತಮ ಆಹಾರವನ್ನು ಸೇವಿಸುತ್ತಾರೆ.
ಯಾವ ರೀತಿಯ ಆಹಾರ ಸೇವಿಸುತ್ತಾರೆ?
ದೇಹವು ವ್ಯಾಯಾಮದ ಮೇಲೆ ಮಾತ್ರವಲ್ಲದೆ, ಸದೃಢ ದೇಹಕ್ಕೆ ಆಹಾರ ಪದ್ಧತಿ ಅಗತ್ಯವಾಗಿದೆ ಎಂದು ನಂಬುತ್ತಾರೆ ವಿಕ್ರಮ್. ತೂಕ ಇಳಿಸಿಕೊಳ್ಳಲು ಅವರು, ಹೆಚ್ಚಿನ ಫೈಬರ್ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುತ್ತಾರೆ. ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡುತ್ತಾರೆ ಮತ್ತು ಮೊಟ್ಟೆಯ ಬಿಳಿಭಾಗ, ಮೀನು ಮತ್ತು ಚಿಕನ್ ಒಳಗೊಂಡಿರುವ ಪ್ರೋಟೀನ್-ಭರಿತ ಆಹಾರ ಹೆಚ್ಚಾಗಿ ಸೇವಿಸುತ್ತಾರೆ. ಹಾಗಾಗಿಯೇ ಇಂತಹ ಅದ್ಭುತ ಫಿಟ್ ದೇಹವನ್ನು ಹೊಂದಿದ್ದಾರೆ ವಿಕ್ರಮ್.
ಸಾವಿನ ಅಂಚಿಗೆ ಹೋಗಿ ಬದುಕಿ ಬಂದಿದ್ದ ನಟ
ವಿಕ್ರಮ್ ಡೆಡಿಕೇಶನ್ ಇವತ್ತಿನದ್ದಲ್ಲ, ಇವರ ಡೆಡಿಕೇಶನ್ ಫಿಟ್ನೆಸ್ ಹಿಂದೆ ಸ್ಪೂರ್ತಿದಾಯಕ ಕಥೆ ಇದೆ. ಕಾಲೇಜು ದಿನಗಳಲ್ಲಿ ನಡೆದ ಭೀಕರ ಅಪಘಾತದಲ್ಲಿ ಅವರಿಗೆ ತೀವ್ರ ಗಾಯಗಳಾಗಿದ್ದವು. ವೈದ್ಯರು ಅವರು ಮತ್ತೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ನಟ ಕಠಿಣ ಪರಿಶ್ರಮ, ಶಿಸ್ತು ಎಲ್ಲವೂ ಸೇರಿ ನಟ ಎದ್ದು ನಡೆಯೋದು ಮಾತ್ರವಲ್ಲ, ಇಂದು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

