- Home
- Entertainment
- Cine World
- Arijit Singh Hotel: ಬೇರೆ ಸೆಲೆಬ್ರಿಟಿಗಳು ರೆಸ್ಟೋರೆಂಟ್ ಮಾಡ್ತಿದ್ರೆ, ಸಾಮಾನ್ಯ ಜನರಿಗೋಸ್ಕರ ಮಿಡಿದ ಗಾಯಕ ಅರಿಜಿತ್ ಸಿಂಗ್ ಹೋಟೆಲ್!
Arijit Singh Hotel: ಬೇರೆ ಸೆಲೆಬ್ರಿಟಿಗಳು ರೆಸ್ಟೋರೆಂಟ್ ಮಾಡ್ತಿದ್ರೆ, ಸಾಮಾನ್ಯ ಜನರಿಗೋಸ್ಕರ ಮಿಡಿದ ಗಾಯಕ ಅರಿಜಿತ್ ಸಿಂಗ್ ಹೋಟೆಲ್!
ಸೆಲೆಬ್ರಿಟಿಗಳು ಹೋಟೆಲ್, ಪಬ್, ರೆಸ್ಟೋರೆಂಟ್ ಉದ್ಯಮದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಅರಿಜಿತ್ ಹೋಟೆಲ್ ಮಾತ್ರ ಇದಕ್ಕಿಂತ ವಿಭಿನ್ನ.

ರೆಸ್ಟೋರೆಂಟ್ ಮಾಡಿ ಹೆಚ್ಚು ಹಣ ಮಾಡುತ್ತಿರುವವರ ಮಧ್ಯೆ ಅರಿಜಿತ್ ಸಿಂಗ್ ಅವರು ಬಡವರಿಗೆ ಸಹಾಯಕ ಆಗುವಂತೆ ಹೋಟೆಲ್ ಆರಂಭಿಸಿದ್ದಾರೆ.
ಅರಿಜಿತ್ ಸಿಂಗ್ ಅವರ ತಂದೆ ಗುರ್ದಯಾಲ್ ಸಿಂಗ್ ಅವರು ಹೋಟೆಲ್ ನಡೆಸುತ್ತಿದ್ದಾರೆ. ಯಾವಾಗಲೂ ಹಾಡಿನ ಮೂಲಕ ಗಮನಸೆಳೆಯೋ ಗಾಯಕ ಈ ಬಾರಿ ಸಾಮಾಜಿಕ ಸೇವೆ ಮೂಲಕ ಸೌಂಡ್ ಮಾಡ್ತಿದ್ದಾರೆ.
ಅರಿಜಿತ್ ಸಿಂಗ್ ಅವರು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಜಿಯಾಗಂಜ್‌ನಲ್ಲಿ ʼಹೇಶೆಲ್ʼ ಎಂಬ ಹೋಟೆಲ್ ಆರಂಭಿಸಿದ್ದಾರೆ. 40 ರೂಪಾಯಿಗೆ ಇಲ್ಲಿ ಫುಡ್ ಸಿಗುತ್ತದೆಯಂತೆ.
ಕೈಗೆಟುಕುವ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಆರೋಗ್ಯಕರ, ರುಚಿಕರವಾದ ಊಟ ಕೊಡುವ ಗುರಿ ಹೊಂದಿದೆ.
40 ರೂಪಾಯಿ ಊಟವು ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸಿಗತ್ತೆ ಎನ್ನಲಾಗಿದೆ. ಬೇರೆಯವರಿಗೆ ಬೇರೆ ರೇಟ್ ಎನ್ನಲಾಗಿದೆ. ಸ್ಥಳೀಯರು ವಿದ್ಯಾರ್ಥಿಗಳೇ ಇಲ್ಲಿ ಜಾಸ್ತಿ ಬರುತ್ತಾರೆ. ಇದು ಸತ್ಯವೇ ಎಂಬುದರ ಬಗ್ಗೆ ಅರಿಜಿತ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಗಡೆ ಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

