ರಿಯಲ್ ಲೈಫ್ ಶ್ರೀವಲ್ಲಿ ಪಡೆಯಲು ಸಾಕಷ್ಟು ಕಷ್ಪಪಟ್ಟ ಅಲ್ಲು ಅರ್ಜುನ್!
ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮದುವೆಯಾಗಿ 11 ವರ್ಷಗಳಾಗಿವೆ. ಅಲ್ಲು ಅರ್ಜುನ್ ಅವರ ಬ್ಲಾಕ್ ಬಸ್ಟರ್ ಚಿತ್ರ 'ಪುಷ್ಪಾ ದಿ ರೈಸ್' (Pushpa The Rise) ಈ ದಿನಗಳಲ್ಲಿ ಫುಲ್ ಸ್ವಿಂಗ್ ಆಗಿದೆ. ಅಂದಹಾಗೆ, ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಲ್ಲು ಅವರ ಪ್ರೀತಿಯ ಶ್ರೀವಲ್ಲಿ (Srivalli)ಪಾತ್ರವನ್ನು ನಿರ್ವಹಿಸಿದ್ದಾರೆ.ಆದರೆ ನಿಜ ಜೀವನದಲ್ಲಿ ಅಲ್ಲು ಅರ್ಜುನ್ ಅವರ ಶ್ರೀವಲ್ಲಿ ಯಾರು ಗೊತ್ತಾ? ಅವರ ರಿಯಲ್ ಲೈಫ್‌ನ ಶ್ರೀವಲ್ಲಿ ಸ್ನೇಹಾ ರೆಡ್ಡಿ (Sneha Reddy). ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿಯ ಲವ್ ಸ್ಟೋರಿ ಇಲ್ಲಿದೆ.
ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರು ಕಾಮನ್ ಫ್ರೆಂಡ್ಸ್ ಮೂಲಕ ಮದುವೆಯಲ್ಲಿ ಮೊದಲು ಭೇಟಿಯಾದರು. ಈ ಸಮಯದಲ್ಲಿ, ಇಬ್ಬರೂ ತಮ್ಮ ಫೋನ್ ನಂಬರ್ ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ಅರ್ಥಮಾಡಿಕೊಂಡ ನಂತರ ಅಂತಿಮವಾಗಿ ಮದುವೆಯಾಗಲು ನಿರ್ಧರಿಸಿದರು.
ಸ್ನೇಹಾ ಆ ಸಮಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದರು. ಆಕೆಗೆ ಅಲ್ಲು ಬಗ್ಗೆ ಆಗಲೇ ತಿಳಿದಿತ್ತು. ಏಕೆಂದರೆ ಆ ಹೊತ್ತಿಗೆ ಅಲ್ಲು ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟನಾಗಿ ಹೊರಹೊಮ್ಮಿದ್ದರು.
ಸ್ನೇಹಾ ರೆಡ್ಡಿ ಹೈದರಾಬಾದ್‌ನ ಖ್ಯಾತ ಉದ್ಯಮಿಯೊಬ್ಬರ ಪುತ್ರಿ. ಆರಂಭದಲ್ಲಿ, ಅಲ್ಲು ಅರ್ಜುನ್ ಕುಟುಂಬ ಸದಸ್ಯರು ಈ ಸಂಬಂಧವನ್ನು ಒಪ್ಪಲಿಲ್ಲ. ಆದರೆ, ಬಹಳ ಮನವೊಲಿಕೆಯ ನಂತರ ನಟನ ತಂದೆ ಸ್ನೇಹಾಳ ತಂದೆಗೆ ಮದುವೆಯ ಪ್ರಪೋಸ್ ಮುಂದಿಟ್ಟರು. ಆದರೆ ಸ್ನೇಹಾಳ ತಂದೆ ಯಾವುದೇ ಕಾರಣಕ್ಕೂ ಈ ಸಂಬಂಧಕ್ಕೆ ಸಿದ್ಧರಿರಲಿಲ್ಲ.
ಅಲ್ಲು ಅರ್ಜುನ್ ಜೊತೆಗೆ ಸ್ನೇಹಾ ರೆಡ್ಡಿ ಕೂಡ ತಮ್ಮ ತಂದೆಯ ಮನ ಒಲಿಸಲು ತುಂಬಾ ಪ್ರಯತ್ನಿಸಿದರು. ಈ ಸಮಯದಲ್ಲಿ, ಇಬ್ಬರೂ ಬಹಳಷ್ಟು ಶ್ರಮ ಪಡಬೇಕಾಯಿತು. ಅಂತಿಮವಾಗಿ, ಅಲ್ಲು ಅರ್ಜುನ್ ಬಗ್ಗೆ ಸ್ನೇಹಾ ಅವರ ತಂದೆಯ ಆಲೋಚನೆ ಬದಲಾಯಿತು. ಅವಳ ಸರಳತೆಯಿಂದ ಪ್ರಭಾವಿತನಾದ ಅವರು ನಂತರ ಮದುವೆಗೆ ಒಪ್ಪಿದರು.
ಮಾರ್ಚ್ 6, 2011 ರಂದು, ಇಬ್ಬರೂ ಹಿಂದೂ ಸಂಪ್ರದಾಯದಂತೆ ಹೈದರಾಬಾದ್‌ನಲ್ಲಿ 7 ಸುತ್ತುಗಳನ್ನು ತೆಗೆದುಕೊಂಡರು. ಮದುವೆಯಾದ ಮೂರು ವರ್ಷಗಳ ನಂತರ 3 ಏಪ್ರಿಲ್ 2014 ರಂದು ಅಲ್ಲು ಅರ್ಜುನ್ ಮೊದಲ ಬಾರಿಗೆ ತಂದೆಯಾದರು.
ಅವರ ಮನೆಯಲ್ಲಿ ಮಗ ಅಲ್ಲು ಅಯಾನ್ ಜನಿಸಿದ ಎರಡು ವರ್ಷಗಳ ನಂತರ, ಅಂದರೆ 2016 ರಲ್ಲಿ, ಅವರ ಮಗಳು ಅಲ್ಲು ಅರ್ಹಾ ಅರ್ಜುನ್ ಅವರ ಎರಡನೇ ಮಗುವಾಗಿ ಮನೆಗೆ ಬಂದರು. ಅಲ್ಲು ಅರ್ಜುನ್ ಖ್ಯಾತ ನಟ ಚಿರಂಜೀವಿ ಅವರ ಸೋದರಳಿಯ.
ಅವರು ಗಂಗೋತ್ರಿ ಚಿತ್ರದ ಮೂಲಕ ದಕ್ಷಿಣದ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಅವರು ಗಮನ ಸೆಳೆದರು. ಆದರೆ ಅವರಿಗೆ ಸ್ಟಾರ್‌ಡಮ್ ಸಿಕ್ಕಿದ್ದು ಆರ್ಯ ಚಿತ್ರದಿಂದ. ಇದಾದ ನಂತರ ಅವರು ಟಾಲಿವುಡ್‌ಗೆ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದರು. ಅಲ್ಲು ಅರ್ಜುನ್ ಕಿರಿಯ ಸಹೋದರ ಅಲ್ಲು ಶಿರೀಶ್ ಕೂಡ ನಟ.
ಅರ್ಜುನ್ ಅವರು ಆರ್ಯ, ಬನ್ನಿ, ಹ್ಯಾಪಿ, ವೇಸಮುದುರು, ಶಂಕರದಾದ ಜಿಂದಾಬಾದ್, ಪರುಗು, ಆರ್ಯ 2, ವರುಡು, ವೇದಂ, ಬ್ರಾಡಿನಾಥ್, ವೈಕುಂಠಪುರಮಲ್ಲು, ಸರಿಯಾದೋಡು, ರುದ್ರಮದೇವಿ, ರೇಸ್ ಗುರ್ರಂ ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
2023 ರಲ್ಲಿ ಬಿಡುಗಡೆಯಾಗಲಿರುವ ಪುಷ್ಪ 2: ದಿ ರೂಲ್ ಸಿನಿಮಾದಲ್ಲಿಯೂ ಅಲ್ಲು ಅರ್ಜುನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇಂಟರ್ನೆಟ್‌ನಲ್ಲಿ ದಕ್ಷಿಣದ ಅತಿ ಸರ್ಚ್ ಮಾಡಲ್ಪಟ್ಟ ನಟರಲ್ಲಿ ಅಲ್ಲು ಅರ್ಜುನ್ ಒಬ್ಬರು