Asianet Suvarna News Asianet Suvarna News

Pushpa 2 Movie: ಅಲ್ಲು ಅರ್ಜುನ್ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಫೈನಲ್

‘ಪುಷ್ಪಾ’ (Pushpa) ಸಿನಿಮಾ ದೇಶಾದ್ಯಂತ ಕ್ರಿಯೇಟ್ ಮಾಡಿರೋ ಸೆನ್ಸೇಶನ್ ನಿಮ್ಗೂ ಗೊತ್ತೇ ಇದೆ. ಶ್ರೀವಲ್ಲಿ ಚಿತ್ರದಲ್ಲಿ ಅಲ್ಲು ಅರ್ಜುನ್ (Allu Arjun) ಒಂದು ಸೈಡ್‌ಗೆ ಕಾಲೆಳೆದು ನಡೆಯೋ ಸ್ಟೆಪ್ ಅಂತೂ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಇದೆಲ್ಲಾ 'ಪುಷ್ಪಾ ದಿ ರೈಸ್' ಚಿತ್ರದ ಬಗ್ಗೆ ಆಯ್ತು. ಹೊಸ ವಿಷ್ಯಾ ಏನ್ ಗೊತ್ತಾ ? ಪುಷ್ಪಾ 2 ಸಿನಿಮಾದ ಕ್ಲೈಮ್ಯಾಕ್ಸ್ (Climax) ಸೀನ್ ಫೈನಲ್ ಆಗಿದ್ಯಂತೆ.

Pushpa 2 Climax Already Decided For Allu Arjuns Film
Author
Bengaluru, First Published Feb 26, 2022, 12:39 PM IST

ಸೌತ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪಾ-ದಿ ರೈಸ್’ (Pushpa The Rise) ಸಿನಿಮಾ ಸೌತ್ ಮಾತ್ರವಲ್ಲದೆ ನಾರ್ತ್‌ನಲ್ಲಿಯೂ ಹವಾ ಸೃಷ್ಟಿಸಿದೆ. ಪುಪ್ಪಾ ಪಾತ್ರದಲ್ಲಿ ಅಲ್ಲು ಅರ್ಜುನ್‍, ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯ ದೇಶ-ವಿದೇಶಗಳಲ್ಲಿ  ಈಗಲೂ ಭಾರೀ ಪ್ರಶಂಸೆಗಳನ್ನು ಪಡೆಯುತ್ತಿದೆ. ಅಲ್ಲು ಅರ್ಜುನ್ ಈ ಹಿಂದೆ ಆರ್ಯ, ಬನ್ನಿ, ಅಲಾ ವೈಕುಂಠಪುರಮುಲೋ ಸೇರಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಪ್ಯಾನ್ ಇಂಡಿಯಾ (Pan India) ಸಿನಿಮಾ ಪುಷ್ಪಾ ಸೌತ್‍ ಸ್ಟೈಲಿಶ್ ಸ್ಟಾರ್ ಹೆಸರನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದೆ.

ಕಿರಿಕ್‌ ಚೆಲುವೆ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಪಡೆದಿರುವುದು ಮಾತ್ರವಲ್ಲ ಬಾಕ್ಸ್‌ ಆಫೀಸನ್ನೂ ಕೊಳ್ಳೆ ಹೊಡೆದಿತ್ತು. ಚಿತ್ರದ ಓ ಅಂಟಾ ವಾ ಮಾಮ, ಸಾಮಿ, ಶ್ರೀವಲ್ಲಿ ಹಾಡುಗಳಂತೂ ಇನ್ನೂ ಟ್ರೆಂಡಿಂಗ್‍ನಲ್ಲಿವೆ. ಸೌತ್ ಸಿನಿಮಾ ಭಾರೀ ಯಶಸ್ಸನ್ನು ಪಡೆಯುತ್ತಿರುವಾಗಲೇ ರಶ್ಮಿಕಾ ಹಾಗೂ ಅಲ್ಲು ಅರ್ಜುನ್‌ಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಸ್ಟಾರ್ ಕಲಾವಿದರಿಗೆ ಡಿಮ್ಯಾಂಡ್ ಸಹ ಹೆಚ್ಚಾಗುತ್ತಿದೆ.

ಡೀ-ಗ್ಲಾಮ್ ರೂಲ್ ಆದ್ರೂ ಪುಷ್ಪ ಚಿತ್ರಕ್ಕೆ Allu Arjunಗೆ ಮಾಡಿದ ಮೇಕಪ್, ವಿಡಿಯೋ ನೋಡಿ!

ಪುಷ್ಪ ನಿಸ್ಸಂದೇಹವಾಗಿ 2021ರ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ. ಕೋವಿಡ್ ಕಾಲಘಟ್ಟದ ನಂತರ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ‘ಪುಷ್ಪಾ ದಿ ರೈಸ್’ ಸಹ ಸೇರಿದೆ. ಪುಷ್ಪ ಥಿಯೇಟರ್‌ನಲ್ಲಿ ಸಹ ಭರ್ಜರಿ ಕಲೆಕ್ಷನ್ ಮಾಡಿತ್ತು. ಚಿತ್ರದ ವಿಭಿನ್ನ ಕಥಾಹಂದರ, ತಾರಾಗಣದ ಮನೋಜ್ಞ ಅಭಿನಯ, ಸಾಂಗ್ಸ್ ಎಲ್ಲವೂ ಸೂಪರ್ ಹಿಟ್ ಆಗಿರುವ ಕಾರಣ ಸಹಜವಾಗಿಯೇ ಇದರ ಸೀಕ್ವೆಲ್ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚಿತ್ರತಂಡ ಈಗಾಗಲೇ ‘ಪುಷ್ಪ 2 ದಿ ರೂಲ್’ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಪುಷ್ಪ ದಿ ರೈಸ್ ಚಿತ್ರದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ಐಪಿಎಸ್ ಅಧಿಕಾರಿ ಶೇಖಾವತ್ ಎಂದು ಪರಿಚಯಿಸಿದ್ದರಿಂದ ಮುಂದಿನ ಭಾಗವು ಹೆಚ್ಚು ಕುತೂಹಲದಿಂದ ಕೂಡಿರುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ವಿಚಿತ್ರ ಮನಸ್ಥಿತಿಯ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಪುಷ್ಪಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಮನಸ್ಥಿತಿಯಲ್ಲಿ ಪುಷ್ಪಾ ದಿ ರೈಸ್ ಚಿತ್ರದ ಕಥೆ ಎಂಡ್ ಆಗಿದೆ. 

Yuzvendra Chahal : ಪುಷ್ಪಾ ಡೈಲಾಗ್ ಗೆ ಚಾಹಲ್ ಮಸ್ತ್ ಲಿಪ್ ಸಿಂಕ್, ಕಾಮೆಂಟ್ ಮಾಡಿದ ವಾರ್ನರ್!

ಹೀಗಾಗಿಯೇ ಇದರ ಮುಂದಿನ ಭಾಗವೇನು ಎಂಬುದು ಅಭಿಮಾನಿಗಳ ತಲೆಕೆಡಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಪುಷ್ಪಾ 2 ತಂಡವು ಈಗಾಗಲೇ ಸ್ಕ್ರಿಪ್ಟ್ ಅನ್ನು ಫೈನಲ್ ಮಾಡಿದ್ದು, ಕ್ಲೈಮಾಕ್ಸ್ ಸಹ ನಿರ್ಧಾರವಾಗಿದೆ ಎಂದು ತಿಳಿದುಬಂದಿದೆ.

ಈ ಸಿನಿಮಾವನ್ನು ಹೇಗೆ ಕೊನೆಗೊಳಿಸಬೇಕು ಎಂಬ ಕುರಿತು ಚಿತ್ರದ ಬರಹಗಾರ ಸುಕುಮಾರ್ ಗೊಂದಲಕ್ಕೊಳಗಾಗಿದ್ದರು. ತಂಡವು ಕ್ಲೈಮ್ಯಾಕ್ಸ್ ದೃಶ್ಯ ಹೇಗಿರಬೇಕೆಂದು ಸಾಕಷ್ಟು ಚರ್ಚೆ ನಡೆಸಿತ್ತು. ಹ್ಯಾಪಿ ಎಂಡಿಂಗ್ ಮತ್ತು ದುಃಖದ ಅಂತ್ಯವನ್ನು ನೀಡುವ ಆಯ್ಕೆಯನ್ನು ಸಹ ಪರಿಗಣಿಸಲಾಗಿದೆ. ಆದರೆ ಕೊನೆಯಲ್ಲಿ ಚಿತ್ರತಂಡ ಹೆಚ್ಚು ಆಸಕ್ತಿದಾಯಕವಾಗಿರುವ ವಿಚಾರವನ್ನು 'ಪುಷ್ಪಾ ದಿ ರೂಲ್' ಚಿತ್ರಕ್ಕೆ ಕ್ಲೈಮ್ಯಾಕ್ಸ್ ಆಗಿ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. 

ಪುಷ್ಪಾ 3ಗೂ ಸಿದ್ಧತೆ ನಡೀತಿದ್ಯಾ ?
2022 ವರ್ಷಾಂತ್ಯದಲ್ಲಿ ಅಥವಾ 2023ರ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ಚಿತ್ರತಂಡ ಭರದಿಂದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ. ಪುಷ್ಪ 2 ಚಿತ್ರದಲ್ಲಿ ಇನ್ಯಾರು ಹೊಸಬರು ಅಭಿನಯಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.  ಅಭಿಮಾನಿಗಳು ಸದ್ಯ ಪುಷ್ಪಾ 2 ಯಾವಾಗ ರಿಲೀಸ್ ಆಗುತ್ತೋ ಅಂತ ಕಾತುರದಿಂದ ಕಾಯ್ತಿದ್ದಾರೆ. ಈ ಮಧ್ಯೆ ಪುಷ್ಪಾ 3 ಕೂಡಾ ಹೊರಬರುತ್ತೆ ಅನ್ನೋ ಗಾಳಿಸುದ್ದಿ ಹರಿದಾಡ್ತಿದೆ. ಆದ್ರೆ ಅದಿನ್ನೂ ಅಧಿಕೃತವಾಗಿಲ್ಲ.

Follow Us:
Download App:
  • android
  • ios