- Home
- Entertainment
- Cine World
- Allu Arjun: ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ: ಪ್ರಭಾಸ್‌ರನ್ನ ಹಿಂದಿಕ್ಕಿದ ಅಲ್ಲು ಅರ್ಜುನ್!
Allu Arjun: ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ: ಪ್ರಭಾಸ್‌ರನ್ನ ಹಿಂದಿಕ್ಕಿದ ಅಲ್ಲು ಅರ್ಜುನ್!
'ಪುಷ್ಪರಾಜ್’ ಎಂಬ ಹೆಸರಿನಿಂದ ಸಿನಿಪ್ರಿಯರಲ್ಲಿ ಜನಪ್ರಿಯತೆ ಗಳಿಸಿರುವ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೆ ಸದ್ದು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಈಗ ಸಿನಿಮಾದ ಶುಲ್ಕದ ವಿಷಯದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ (Prabhas) ಅವರನ್ನು ಹಿಂದಿಕ್ಕಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಈಗ ಅಲ್ಲು ಅವರು ತೆಲುಗು ಚಿತ್ರರಂಗದ ಅತ್ಯಂತ ದುಬಾರಿ ನಟ ಎನಿಸಿಕೊಂಡಿದ್ದಾರೆ. ಅಷ್ಷಕ್ಕೂ ಹೊಸ ಸಿನಿಮಾಕ್ಕೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಎಷ್ಷು ಗೊತ್ತಾ?

ವಾಸ್ತವವಾಗಿ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಿತ್ರದೊಂದಿಗೆ ಅಲ್ಲು ಅರ್ಜುನ್ ಹಿಂದಿಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಚಿತ್ರಕ್ಕೆ ಅಲ್ಲು ಅರ್ಜುನ್ ಪಡೆದಿರುವ ಸಂಭಾವನೆ ಇಲ್ಲಿಯವರೆಗೂ ಯಾವ ತೆಲುಗು ನಟನೂ ಪಡೆದಿಲ್ಲ ಎನ್ನಲಾಗುತ್ತಿದೆ
ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಪ್ರೊಡಕ್ಷನ್ ಹೌಸ್ 125 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಇದು ತೆಲುಗು ನಟ ಪ್ರಭಾಸ್ ಪಡೆಯುವ ಸಂಭಾವನೆಗಿಂತ ಹೆಚ್ಚಾಗಿದೆ.
ಪ್ರಭಾಸ್ ಪ್ರಸ್ತುತ ಪ್ರತಿ ಚಿತ್ರಕ್ಕೆ ಸುಮಾರು 100 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಮೂಲಗಳು ಹೇಳಿವೆ ಎಂದು ವರದಿಗಳು ತಿಳಿಸಿವೆ. ಆದರೆ ಈ , ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ.
ಕಳೆದ ವಾರ ಅಲ್ಲು ಅರ್ಜುನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಚೊಚ್ಚಲ ಹಿಂದಿ ಚಿತ್ರವನ್ನು ಘೋಷಿಸಿದರು. ಅವರು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ನಿರ್ಮಾಪಕ ಭೂಷಣ್ ಕುಮಾರ್ ಮತ್ತು ಇತರ ತಂಡದ ಸದಸ್ಯರೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ .
'ಈ ಸಂಯೋಜನೆಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದೇನೆ. ಸಂದೀಪ್ ರೆಡ್ಡಿ ವಂಗಾ ಗುರು ಅವರ ಜಾದೂ ಹಾಗೇ ಇದೆ, ಇದು ನನಗೆ ವೈಯಕ್ತಿಕವಾಗಿ ಸ್ಪರ್ಶಿಸುತ್ತದೆ. ಅದು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಸ್ಮರಣೀಯ ಚಿತ್ರವನ್ನು ನಾವು ನೀಡುತ್ತೇವೆ ಎಂಬ ಭರವಸೆ ಇದೆ' ಫೋಟೋ ಜೊತೆ ಅಲ್ಲು ಬರೆದಿದ್ದಾರೆ.
ಈ ನಡುವೆ ,ವರದಿಗಳಲ್ಲಿ ಈ ಚಿತ್ರದ ಶೀರ್ಷಿಕೆಯ ಬಗ್ಗೆಯೂ ಊಹಾಪೋಹಗಳನ್ನು ಹರಿದಾಡುತ್ತಿವೆ. ವರದಿಗಳನ್ನು ಪ್ರಕಾರ ಚಿತ್ರದ ಶೀರ್ಷಿಕೆ 'ಭದ್ರಕಾಳಿ'. ಅದೇ ಸಮಯದಲ್ಲಿ, ಚಿತ್ರದ ಪರಿಕಲ್ಪನೆಯನ್ನು ನ್ಯಾಯ ಮತ್ತು ಕೋಪದ ಸುತ್ತ ಹೆಣೆಯಲಾಗಿದೆ
ಕೆಲಸದ ಮುಂಭಾಗದಲ್ಲಿ, ಅಲ್ಲು ಅರ್ಜುನ್ ಪ್ರಸ್ತುತ ಸುಕುಮಾರ್ ನಿರ್ದೇಶನದ 'ಪುಷ್ಪ: ದಿ ರೈಸ್' ನ ಎರಡನೇ ಭಾಗವಾದ 'ಪುಷ್ಪ: ದಿ ರೂಲ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಜಿಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.