ಫ್ಯಾಮಿಲಿ ಜೊತೆ ಜಂಗಲ್ ಸಫಾರಿ; ಅಲ್ಲು ಅರ್ಜುನ್ ಹಾಲಿಡೇ ಫೋಟೋಗಳು ವೈರಲ್!
ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ಈಗ ಫ್ಯಾಮಿಲಿ ಜೊತೆ ಹಾಲಿಡೇಯಲ್ಲಿದ್ದಾರೆ. ಅಲ್ಲು ಅರ್ಜುನ್ ಜಂಗಲ್ ಸಫಾರಿ ವೇಳೆ ತೆರೆದ ಜೀಪಿನಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಸಮಯದ ವೀಡಿಯೋ ಕ್ಲಿಪ್‌ಗಳು ಸಖತ್ ವೈರಲ್ ಆಗಿವೆ
ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ವೃತ್ತಿಪರ ಜೀವನದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಹೆಂಡತಿ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಾರೆ.
ಅಲ್ಲು ಅರ್ಜುನ್ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಇತ್ತೀಚೆಗಷ್ಟೇ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಹೆಂಡತಿ ಮತ್ತು ಮಕ್ಕಳೊಂದಿಗೆ ರಜೆಗಾಗಿ ತೆರಳಿದ್ದರು.
Allu Arjun
ಹಿಂದೆಯೊಮ್ಮೆ ದಕ್ಷಿಣ ಭಾರತೀಯ ನಟರು ಕುಟುಂಬದ ಕಮಿಟ್‌ಬಗ್ಗೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸಹ ಕಮೆಂಟ್ ಮಾಡಿದ್ದರು. ಕೌಟುಂಬಿಕ ಮೌಲ್ಯಗಳಿಗೆ ಯಶ್, ಅಲ್ಲು ಅರ್ಜುನ್, ಮಹೇಶ್ ಬಾಬು ಸೇರಿ ಪ್ರತಿಯೊಬ್ಬ ದಕ್ಷಿಣ ಭಾರತೀಯ ನಟರೂ ಬದ್ಧರಾಗಿರುತ್ತಾರೆಂದು ಹೇಳಿದ್ದರು.
Allu Arjun
ಅಲ್ಲು ಅರ್ಜುನ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ್ನು ತಲುಪಿ , ಅಲ್ಲಿ ಅವರು ತೆರೆದ ಜೀಪ್‌ನಲ್ಲಿ ಕುಟುಂಬದೊಂದಿಗೆ ಜಂಗಲ್ ಸಫಾರಿ ಆನಂದಿಸಿದರು. ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಅಲ್ಲು ಅರ್ಜುನ್ ಅವರ ಮಗ ಅಲ್ಲು ಅಯಾನ್ ಜೀಪಿನಲ್ಲಿ ಕಾಣಿಸಿಕೊಂಡಿದ್ದಾರೆ.
Allu Arjun
ಅಲ್ಲು ಅರ್ಜುನ್ ರಾಜಸ್ಥಾನ ರಜೆಯ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೆಸಾರ್ಟ್ ಜೊತೆಗೆ, ಈ ಫೋಟೋಗಳು ಜೈಪುರದ ಕೆಲವು ಪ್ರಸಿದ್ಧ ಸ್ಥಳಗಳಗಳನ್ನು ಸಹ ಹೊಂದಿವೆ.
Allu Arjun
ಜಂಗಲ್ ಸಫಾರಿ ಅಲ್ಲದೆ ಜಂತರ್ ಮಂತರ್, ಸಿಟಿ ಪ್ಯಾಲೇಸ್, ಹವಾ ಮಹಲ್ ಗೂ ಅಲ್ಲು ಅರ್ಜುನ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ನಂತರ, ಅವರು ಪತ್ನಿ ಸ್ನೇಹಾ ರೆಡ್ಡಿ ಮತ್ತು ಮಕ್ಕಳೊಂದಿಗೆ ಚೌಕಿ ಧನಿಗೆ ತಲುಪಿದರು, ಅಲ್ಲಿ ಅವರು ರಾಜಸ್ಥಾನದ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿದರು.
ಅಲ್ಲು ಅರ್ಜುನ್ ಮಾರ್ಚ್ 6, 2011 ರಂದು ಹೈದರಾಬಾದ್‌ನಲ್ಲಿ ಸ್ನೇಹಾ ರೆಡ್ಡಿ ಅವರನ್ನು ವಿವಾಹವಾದರು. ಅಲ್ಲು ಮತ್ತು ಸ್ನೇಹಾ ಮೊದಲು ಭೇಟಿಯಾದದ್ದು ಕಾಮನ್ ಫ್ರೆಂಡ್ ಮದುವೆಯಲ್ಲಿ. ಸ್ನೇಹಾಳನ್ನು ನೋಡಿದ ಅಲ್ಲು ಅರ್ಜುನ್ ಮೊದಲ ನೋಟದಲ್ಲೇ ಆಕೆಗೆ ಮನಸೋತಿದ್ದರು.
ಏಪ್ರಿಲ್ 8, 1983 ರಂದು ಚೆನ್ನೈನಲ್ಲಿ ಜನಿಸಿದ ಅಲ್ಲು 2003 ರಲ್ಲಿ 'ಗಂಗೋತ್ರಿ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ವೋ ಆರ್ಯ, ಬನ್ನಿ, ಹ್ಯಾಪಿ, ವೆಸಮುದುರು, ಶಂಕರದಾದ ಜಿಂದಾಬಾದ್, ಪರುಗು, ಆರ್ಯ 2, ವರುಡು, ವೇದಂ, ಬರ್ದಿನಾಥ್, ವೈಕುಂಠಪುರಮಲ್ಲು ಮತ್ತು ಪುಷ್ಪಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು.