MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • BAFTA ವೇದಿಕೆ ಮೇಲೆ ಭಾರತೀಯ ಸಂಸ್ಕೃತಿ, ಆಲಿಯಾ ಕೆಲ್ಸಕ್ಕೆ ನೆಟ್ಟಿಗರು ಫಿದಾ

BAFTA ವೇದಿಕೆ ಮೇಲೆ ಭಾರತೀಯ ಸಂಸ್ಕೃತಿ, ಆಲಿಯಾ ಕೆಲ್ಸಕ್ಕೆ ನೆಟ್ಟಿಗರು ಫಿದಾ

BAFTA Award  Alia Bhatt : BAFTA ವೇದಿಕೆ ಮೇಲೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಮಿಂಚಿದ್ದಾರೆ. ಇದೇ ಮೊದಲ ಬಾರಿ BAFTA ವೇದಿಕೆ ಮೇಲೆ ಕಾಣಿಸಿಕೊಂಡ ಆಲಿಯಾ, ತಮ್ಮ ಮಾತಿನ ಮೂಲಕ ಭಾರತೀಯರ ಮನಸ್ಸು ಗೆದ್ದಿದ್ದಾರೆ.

2 Min read
Author : Roopa Hegde
Published : Feb 23 2026, 11:03 AM IST
Share this Photo Gallery
  • FB
  • TW
  • Linkdin
  • Whatsapp
16
ಗಮನ ಸೆಳೆದ ಆಲಿಯಾ ಭಟ್
Image Credit : Asianet News

ಗಮನ ಸೆಳೆದ ಆಲಿಯಾ ಭಟ್

ಬ್ರಿಟಿಷ್ ಅಕಾಡೆಮಿ ಫಿಲ್ಮಂ ಮತ್ತು ಟೆಲಿವಿಷನ್ ಪ್ರಶಸ್ತಿಗಳು (BAFTA) ಭಾನುವಾರ ರಾತ್ರಿ ಲಂಡನ್ನಲ್ಲಿ ನಡೆದಿದೆ. ಬಾಲಿವುಡ್ ನಟಿ ಆಲಿಯಾ ಭಟ್ ಸೇರಿದಂತೆ ಫರ್ಹಾನ್ ಅಖ್ತರ್ ವರೆಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು BAFTA ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಇಲ್ಲಿ ಗಮನ ಸೆಳೆದಿದ್ದು ಆಲಿಯಾ ಭಟ್. ಆಲಿಯಾ ರೆಡ್ ಕಾರ್ಪೆಟ್ ಲುಕ್ ಗಮನ ಸೆಳೆದಿತ್ತು. ಆದ್ರೆ ಹೆಚ್ಚು ಚರ್ಚೆಗೆ ಬಂದಿದ್ದು, ಆಲಿಯಾ ಭಟ್ ಹಿಂದಿ. ಅವಾರ್ಡ್ ಅನೌನ್ಸ್ ಮಾಡಲು BAFTA ವೇದಿಕೆಗೆ ಬಂದ ಆಲಿಯಾ ಭಟ್ ಹಿಂದಿಯಲ್ಲಿ ತಮ್ಮ ಮಾತು ಶುರು ಮಾಡಿದ್ರು.

26
ನಮಸ್ಕಾರ ಎಂದ ಆಲಿಯಾ
Image Credit : Asianet News

ನಮಸ್ಕಾರ ಎಂದ ಆಲಿಯಾ

ಆಲಿಯಾ ವೇದಿಗೆ ಬಂದ ನಂತ್ರ ನಮಸ್ಕಾರ ಎನ್ನುತ್ತ ತಮ್ಮ ಮಾತು ಶುರು ಮಾಡಿದ್ರು. ಅತ್ಯುತ್ತಮ ಇಂಗ್ಲಿಷ್ ಅಲ್ಲದ ಸಿನಿಮಾ ಹೆಸರು ಘೋಷಣೆ ಮಾಡಲು ಆಲಿಯಾ ಭಟ್ BAFTA ವೇದಿಕೆಗೆ ಬಂದಿದ್ದರು. ನಮಸ್ಕಾರ ಎನ್ನುತ್ತ ಹಿಂದಿಯಲ್ಲಿ ಮಾತು ಶುರು ಮಾಡಿದ ಆಲಿಯಾ ನಂತ್ರ ಅದನ್ನು ಇಂಗ್ಲೀಷ್ ಗೆ ಅನುವಾದಿಸಿದ್ರು. ಮುಂದಿನ ಪ್ರಶಸ್ತಿ ಇಂಗ್ಲಿಷ್ನಲ್ಲಿಲ್ಲದ ಚಿತ್ರಕ್ಕೆ ಎಂದ ಅವರು ಉಪಶೀರ್ಷಿಕೆ ನೋಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ತಮ್ಮ ಹೇಳಿಕೆಯನ್ನು ಇಂಗ್ಲಿಷ್ನಲ್ಲಿ ವಿವರಿಸಿದ್ದಲ್ಲದೆ, ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶಿತರನ್ನು ಪರಿಚಯಿಸಿದರು.

Related Articles

Related image1
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
Related image2
ಕೊನೆಗೂ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
36
ಆಲಿಯಾಗೆ ಮೆಚ್ಚುಗೆ
Image Credit : Asianet News

ಆಲಿಯಾಗೆ ಮೆಚ್ಚುಗೆ

ಅಂತರಾಷ್ಟ್ರೀಯ ವೇದಿಕೆ ಮೇಲೆ ಇಂಗ್ಲೀಷ್ ಬದಲು ಹಿಂದಿಯಲ್ಲಿ ಮಾತು ಶುರು ಮಾಡಿದ ಆಲಿಯಾ ಭಟ್ ಕೆಲ್ಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆಲಿಯಾ ಭಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಭಾರತೀಯ ಸಂಸ್ಕೃತಿಯನ್ನು ವಿಶ್ವಾದ್ಯಂತ ಹರಡಿದ್ದಕ್ಕಾಗಿ ಆಲಿಯಾ ಭಟ್ ಅವರನ್ನು ಹೊಗಳುತ್ತಿದ್ದಾರೆ. BAFTA ದಂತಹ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಹಿಂದಿ ಮಾತನಾಡುವ ಮೂಲಕ, ಆಲಿಯಾ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತಂದಿದ್ದಾರೆ ಎಂದು ಬಳಕೆದಾರರು ಕಮೆಂಟ್ ಮಾಡ್ತಿದ್ದಾರೆ. ಭಾರತದ ಸೂಪರ್ಸ್ಟಾರ್ ಅಂತ ಆಲಿಯಾಗೆ ಮೆಚ್ಚುಗೆ ವ್ಯಕ್ತವಾಗಿದೆ.

46
ಆಲಿಯಾ ಲುಕ್
Image Credit : Asianet News

ಆಲಿಯಾ ಲುಕ್

BAFTA ದಲ್ಲಿ ಆಲಿಯಾ ಭಾಷಣ ಮಾತ್ರವಲ್ಲ ಆಲಿಯಾ ಲುಕ್ ಕೂಡ ಫ್ಯಾನ್ಸ್ ಗೆ ಇಷ್ಟವಾಗಿದೆ. ಬ್ಯಾಕ್ ಲೆಸ್, ಗುಸ್ಸಿ ಗೌನ್ ಧರಿಸಿದ್ದರು. ಸಿಲ್ವರ್ ಗೌನ್ ಅವರ ಸೌಂದರ್ಯವನ್ನು ಡಬಲ್ ಮಾಡಿತ್ತು. ಆಲಿಯಾ, ಸಿಂಪಲ್ ಲುಕ್ ನಲ್ಲಿ ಎಲ್ಲರನ್ನು ಆಕರ್ಷಿಸಿದ್ದಾರೆ.

56
 ಮೊದಲ ಬಾರಿ BAFTA ವೇದಿಕೆಯಲ್ಲಿ ಆಲಿಯಾ
Image Credit : Asianet News

ಮೊದಲ ಬಾರಿ BAFTA ವೇದಿಕೆಯಲ್ಲಿ ಆಲಿಯಾ

ಆಲಿಯಾ ಭಟ್ ಇದೇ ಮೊದಲ ಬಾರಿ BAFTA ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ BAFTA ಗೆ ಸೇರ್ಪಡೆಯಾದ ಮೂರನೇ ಭಾರತೀಯ ನಟಿಯಾಗಿದ್ದಾರೆ. ಅವರಿಗಿಂತ ಮೊದಲು, ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಕೂಡ BAFTA ಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದರು.

66
ಆಲಿಯಾ ಸಿನಿಮಾ
Image Credit : Asianet News

ಆಲಿಯಾ ಸಿನಿಮಾ

ಆಲಿಯಾ ಭಟ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಎರಡು ಸಿನಿಮಾ ಸದ್ಯ ಅವರ ಕೈನಲ್ಲಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ ನಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆ ಆಲಿಯಾ ನಟಿಸಲಿದ್ದಾರೆ. ಆಲಿಯಾ ಯಶ್ ರಾಜ್ ಫಿಲ್ಮ್ಸ್ ನ ಆಲ್ಫಾ ನಲ್ಲಿಯೂ ಕಾಣಿಸಿಕೊಂಡಿದ್ದು, ಶಾರ್ವರಿ ವಾಘ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬಾಲಿವುಡ್
ಆಲಿಯಾ ಭಟ್

Latest Videos
Recommended Stories
Recommended image1
ಕೊನೆಗೂ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
Recommended image2
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
Recommended image3
ಪತಿಯ ತಪ್ಪು ಮುಚ್ಚಿಟ್ಟು ಬಂಜೆ ಎಂಬ ಪಟ್ಟ: ಡಿವೋರ್ಸ್​ ಬಳಿಕ ಮಗು- ಪಂಚಭಾಷಾ ನಟಿಯ ನೋವಿನ ಸ್ಟೋರಿ
Related Stories
Recommended image1
ಶಾರುಖ್​, ದೀಪಿಕಾ, ಶ್ರದ್ಧಾರಿಂದ ಹಿಡಿದು ಆಲಿಯಾವರೆಗೆ: ಈ ಸ್ಟಾರ್​ ನಟರ PUC ಮಾರ್ಕ್ಸ್​ ಇಷ್ಟಾ?
Recommended image2
ಕೊನೆಗೂ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved